ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೂ ಶಾಮೀಲಾಗಿದ್ದಾರೆ. ಬಸವರಾಜ ಬೊಮ್ಮಾಯಿ ಅವರೇ ನಿಮಗೆ ಧಮ್ ಇದ್ರೆ ತಾಕತ್ತಿದ್ರೆ ನಿಮ್ಮ ಮೇಲಿನ ಭ್ರಷ್ಟಾಚಾರ ತನಿಖೆ ಮಾಡಿಸಿ.
ಚಾಮರಾಜನಗರ (ಜ.26): ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೂ ಶಾಮೀಲಾಗಿದ್ದಾರೆ. ಬಸವರಾಜ ಬೊಮ್ಮಾಯಿ ಅವರೇ ನಿಮಗೆ ಧಮ್ ಇದ್ರೆ ತಾಕತ್ತಿದ್ರೆ ನಿಮ್ಮ ಮೇಲಿನ ಭ್ರಷ್ಟಾಚಾರ ತನಿಖೆ ಮಾಡಿಸಿ ಅಂತಾ ಒತ್ತಾಯಿಸಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ನಡೆಯತ್ತಿರುವ ಕಾಂಗ್ರೆಸ್‌ನ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಭ್ರಷ್ಟಾಚಾರದಲ್ಲಿ ಪ್ರಧಾನಿ ಮೋದಿ ಶಾಮೀಲಾಗಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ಅತಿ ಭ್ರಷ್ಟ ಸರ್ಕಾರವಾಗಿದೆ. ನಮ್ಮ ಆರೋಪವನ್ನು ಪರಿಗಣಿಸಿ ಸಿಎಂ ಬೊಮ್ಮಾಯಿ ತನಿಖೆ ಮಾಡಿಸಲಿ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಮಾಡಿದ ಭ್ರಷ್ಟಾಚಾರದ ಆರೋಪಕ್ಕೆ ಬೊಮ್ಮಾಯಿ ಅವರು ಉತ್ತರ ಕೊಡದೇ ಸುಧಾಕರ್ ಮೂಲಕ ಉತ್ತರ ಕೊಡಿಸಿದ್ದಾರೆ. ಆದರೆ, ಸುಧಾಕರ್ ಸುಳ್ಳಿನ ಸಾಮ್ರಾಟ. ಅಲಿಬಾಬ ಔರ್ ಚಾಲೀಸ್ ಚೋರ್ ಗುಂಪಿನಲ್ಲಿ ಅವನು ಒಬ್ಬ ಎಂದು ಆರೋಪಿಸಿದ್ದಾರೆ.
undefined
ಯಾವುದೇ ಕಾರಣಕ್ಕೂ ಕೋಲಾರದಿಂದ ಸಿದ್ದು ಸ್ಪರ್ಧಿಸಲ್ಲ: ಬಿಎಸ್‌ವೈ ಹೊಸ ಬಾಂಬ್!
ಬಿಜೆಪಿ ಸಮಾನತೆ ವಿರೋಧಿ ಪಕ್ಷ: ದೇಶದಲ್ಲಿ ಬಡಜನರು ಬಡವರಾಗಿಯೇ ಉಳಿಬೇಕು. ಶ್ರೀಮಂತರು ಶ್ರೀಮಂತರಾಗಿಯೇ ಇರಬೇಕು ಎಂಬ ಮನಸ್ಥಿತಿಯನ್ನು ಬಿಜೆಪಿ ಹೊಂದಿದೆ. ಬಿಜೆಪಿ ಸಮಾನತೆಯ ವಿರುದ್ದ ಇರುವ ಪಕ್ಷವಾಗಿದೆ. ನರೇಂದ್ರ ಮೋದಿ ಅವರು ಈಗಾಗಲೇ ದೇಶದ ಅತಿದೊಡ್ಡ 23 ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡಿದ್ದಾರೆ. ಆದರೆ, ಒಂದೇ ಒಂದು ಹೊಸ ಉದ್ದಿಮೆ ಆರಂಭಿಸಲಿಲ್ಲ. ಸಬ್‌ಕಾ ಸಾಥ್ ಸಬ್ ವಿಕಾಸ್ ಎಂದು ಹೇಳಿದ್ದಾರೆ. ಆದರೆ ರೈತರು, ಮಹಿಳೆಯರು, ಕಾರ್ಮಿಕರು ಯಾರೊಬ್ಬರೂ ಉದ್ದಾರ ಆಗಲಿಲ್ಲ ಎಂದು ಕಿಡಿಕಾರಿದರು.
ಬಿಜೆಪಿ ಸುಳ್ಳಿನ ಫ್ಯಾಕ್ಟರಿ: ದೇಶದಲ್ಲಿ ಬಿಜೆಪಿ ಸುಳ್ಳಿನ ಫ್ಯಾಕ್ಟರಿ ಆಗಿದೆ. ಸುಳ್ಳು ತಯಾರು ಮಾಡೋದೇ ಅವರ ಕೆಲಸವಾಗಿದೆ. ಮೋದಿ ಬಗ್ಗೆ ಅಪಾರ ಗೌರವ ಇದೆ. ಅವರು ಈ ದೇಶದ ಪ್ರಧಾನಿ. ಆದರೆ ಅವರು ಹೇಳೋದೆಲ್ಲಾ ಬರೀ ಸುಳ್ಳು. ಪ್ರತಿಯೊಬ್ಬರ ಬ್ಯಾಂಕ್ ಖಾತೆಗೂ 15 ಲಕ್ಷ ರೂಪಾಯಿ ಹಾಕುತ್ತೇವೆ ಎಂದು ಹೇಳಿಕೊಂಡು ಅಧಿಕಾರ ಹಿಡಿದುಕೊಂಡರು. ಆದರೆ, ಕನಿಷ್ಠ 15 ಪೈಸೆನೂ ಹಾಕಲಿಲ್ಲ. ದೇಶದ ಯುವಜನರಿಗೆ ಉದ್ಯೋಗ ಕೊಡುವುದಾಗಿ ಹೇಳಿದರು. ಆದರೆ, 23 ಸಾರ್ವಜನಿಕ ಉದ್ದಿಮೆ ಮಾರಾಟ ಮಾಡಿ, ಉದ್ಯೋಗ ಕಳೆದುಕೊಳ್ಳುವಂತೆ ಮಾಡಿದ್ದಾರೆ. ಮೋದಿ ಅಚ್ಚೆ ದಿನ್ ಆಯೇಗಾ ಎಂದು ಹೇಳಿದ್ದರು. ನರೇಂದ್ರ ಮೋದಿ ಅವರೇ ಅಚ್ಚೆ ದಿನ್ ಕಹಾ ಹೈ ಎಂದ ಹಿಂದಿಯಲ್ಲೇ ಸಿದ್ದರಾಮಯ್ಯ ವ್ಯಂಗವಾಡಿದ್ದಾರೆ.
ನಾನು ಅಕ್ರಮ ಮಾಡಿದ್ದರೆ ತನಿಖೆ ಮಾಡಿ: ಸರ್ಕಾರಕ್ಕೆ ಸಿದ್ದರಾಮಯ್ಯ ಸವಾಲು!
ದೇಶದಲ್ಲೆ ಅತ್ಯಂತ ಭ್ರಷ್ಟ ಸರ್ಕಾರ: ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ದೇಶದಲ್ಲಿಯೇ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ. ಇದು ಪೇ ಸಿಎಂ (Pay CM) 40% ಸರ್ಕಾರವಾಗಿದೆ. ಕರ್ನಾಟಕದ ಇತಿಹಾಸದಲ್ಲೆ ಇದು ಕೆಟ್ಟ ಸರ್ಕಾರ. ವಿಧಾನ ಸೌಧದ ಯಾವುದೇ ಗೋಡೆ ಕುಟ್ಟಿದರೂ ಲಂಚ ಲಂಚ ಎನ್ನುವ ಶಬ್ದ ಕೇಳಿಸುತ್ತದೆ. ಸಂತೋಷ್ ಪಾಟೀಲ್ 40% ಹಣ ಕೊಡಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡ. ಆತ ಆತ್ಮಹತ್ಯೆ ಮಾಡಿಕೊಂಡ ಬಳಿಕ ಯಾರು ಉತ್ತರ ಕೊಡಲಿಲ್ಲ. ಹಲವು ಗುತ್ತಿಗೆದಾರರು ಲಂಚದ ಆರೋಪ ಮಾಡಿದರೂ ಈ ಬಗ್ಗೆ ಪ್ರಧಾನಿ ಮೋದಿ ಮಾತನಾಡಲಿಲ್ಲ. ರೌಡಿ ಹಾಗೂ ಗೂಂಡಗಳು ನಡೆಸುತ್ತಿರುವ ಸರ್ಕಾರ ಇದಾಗಿದೆ. ಸ್ಯಾಂಟ್ರೋ ರವಿಯಂತ ಕ್ರಿಮಿನಲ್ ಮಾರ್ಗದರ್ಶನ ಮೂಲಕ ಅಧಿಕಾರಿಗಳ ವರ್ಗಾವಣೆ ಆಗುತ್ತಿದೆ. ನಾಲ್ಕು ಕೊಲೆ ಮಾಡಿದ ಬೆತ್ತನಗೆರೆ ಸೀನಾ, ರೌಡಿಗಳಾದ ಫೈಟರ್ ರವಿ, ಸೈಲೆಂಟ್ ಸುನಿಲ್ ಬಿಜೆಪಿ ಸೇರಿದ್ದಾರೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೆವಾಲ ಹೇಳಿದರು.