ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಸಿಲಿಂಡರ್, ಸೌದೆಯನ್ನು ತಲೆಯ ಮೇಲೆ ಹೊತ್ತು, ಗ್ಯಾಸ್ ಹೋಯ್ತು, ಸೌದೆ ಬಂತು... ಹಾಗೆ ಬಿಜೆಪಿ ಹೋಗತ್ತೆ, ಕಾಂಗ್ರೆಸ್ ಬರುತ್ತೆ... ಎಂದು ಘೋಷಣೆ ಕೂಗುತ್ತ ಶುಕ್ರವಾರ ಬೀದಿಗಿಳಿದು ಪ್ರತಿಭಟನೆ ಮಾಡಿದರು.
ಶಿವಮೊಗ್ಗ (ಮಾ.4) : ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಸಿಲಿಂಡರ್, ಸೌದೆಯನ್ನು ತಲೆಯ ಮೇಲೆ ಹೊತ್ತು, ಗ್ಯಾಸ್ ಹೋಯ್ತು, ಸೌದೆ ಬಂತು... ಹಾಗೆ ಬಿಜೆಪಿ ಹೋಗತ್ತೆ, ಕಾಂಗ್ರೆಸ್ ಬರುತ್ತೆ... ಎಂದು ಘೋಷಣೆ ಕೂಗುತ್ತ ಶುಕ್ರವಾರ ಬೀದಿಗಿಳಿದು ಪ್ರತಿಭಟನೆ ಮಾಡಿದರು.
ನಗರದ ಮಹಾವೀರ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಬಿಜೆಪಿ ಸರ್ಕಾರ(BJP Government)ದಲ್ಲಿ ಮಹಿಳೆಯರು, ಬಡವರು ಬದುಕುವುದೇ ಕಷ್ಟವಾಗಿದೆ. ಅಚ್ಚೇ ದಿನ್ ಎಂದು ನೆಚ್ಚಿಕೊಂಡಿದ್ದ ಜನರು ಈಗ ಹುಚ್ಚರಾಗಿದ್ದಾರೆ ಎಂದು ಲಬೋ ಲಬೋ ಎಂದು ಬಾಯಿ ಬಡಿದುಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರಗಳ ಸಾಧನೆ ಜನಮನ ತಲುಪಿಸಬೇಕು: ಸಂಸದ ಬಿ.ವೈ.ರಾಘವೇಂದ್ರ
ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಮಾತನಾಡಿ, ಈಗಾಗಲೇ ಬೆಲೆ ಏರಿಕೆಯಿಂದ ಸಾಮಾನ್ಯ ಜನವರು ತತ್ತರಿಸಿದ್ದಾರೆ. ಗಾಯದ ಮೇಲೆ ಬರೆ ಎಂಬಂತೆ ಏಕಾಏಕಿ ಸಿಲಿಂಡರ್ ಬೆಲೆಯನ್ನು ಏರಿಸಲಾಗಿದೆ. ಭ್ರಷ್ಟಾಚಾರದ ಸರ್ಕಾರವಿದು. ಕೋಟಿಗಟ್ಟಲೆ ಲೂಟಿ ಮಾಡುತ್ತಿದ್ದಾರೆ. ಗ್ಯಾಸ್ ಬೆಲೆ ಏರಿಸುವುದರ ಜೊತೆಗೆ ದಿನ ಬಳಕೆಯ ವಸ್ತುಗಳ ಬೆಲೆಯೂ ಏರಿದೆ. ಹೀಗಾದರೆ ಜನರು ಹೇಗೆ ಜೀವನ ಮಾಡಬೇಕು ಎಂದು ಪ್ರಶ್ನೆ ಮಾಡಿದರು.
ನರೇಂದ್ರ ಮೋದಿ(PM Narendra Modi) ಸರ್ಕಾರ ಚುನಾವಣೆ ಸಂದರ್ಭಗಳಲ್ಲಿ ಬೆಲೆ ಇಳಿಸಿದಂತೆ ಮಾಡಿ ಮತ್ತೆ ಏರಿಸುತ್ತಿದೆ. ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆ ಇಳಿಕೆ ಆಗಿದ್ದರೂ ಭಾರತದಲ್ಲಿ ಏರಿಕೆಯಾಗಿದೆ. ಜನರು ಬದುಕುವುದೇ ದುಸ್ತರವಾಗಿದೆ. ಬಿಜೆಪಿಯ ನೀಚತನಗಳನ್ನು ಇನ್ನು ಎಷ್ಟುದಿನ ಸಹಿಸಿಕೊಳ್ಳುವುದು. ಸಾಕು ಸಾಕು, ಬಿಜೆಪಿಯನ್ನು ಓಡಿಸಲೇಬೇಕು ಎಂದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಎನ್.ರಮೇಶ್, ಎಲ್.ಸತ್ಯನಾರಾಯಣ ರಾವ್, ಎಸ್.ಕೆ.ಮರಿಯಪ್ಪ, ಚಂದ್ರಭೂಪಾಲ್, ಜಿ.ಡಿ.ಮಂಜುನಾಥ್, ಎಚ್.ಸಿ.ಯೋಗೇಶ್, ರಮೇಶ್ ಶಂಕರಘಟ್ಟ, ವೈ.ಎಚ್.ನಾಗರಾಜ್, ಬಲದೇವಕೃಷ್ಣ, ದೀಪಕ್ ಸಿಂಗ್, ಕಲೀಂ ಪಾಶಾ, ಮಧುಸೂದನ್, ಎಚ್.ಪಿ.ಗಿರೀಶ್, ಕುಮರೇಶ್, ಚೇತನ್, ವಿಜಯ್, ವಿಜಯ್‌ಕುಮಾರ್, ಇಕ್ಕೇರಿ ರಮೇಶ್, ಎಸ್.ಪಿ.ಶೇಷಾದ್ರಿ, ಯು.ಶಿವಾನಂದ್, ಎಂ.ಡಿ.ಪ್ರವೀಣ್, ಮಹಿಳಾ ಮುಖಂಡರಾದ ರೇಖಾ ರಂಗನಾಥ್, ಸೌಗಂಧಿಕ, ಅನಿತಾಕುಮಾರಿ, ಪಲ್ಲವಿ, ಸುವರ್ಣಾ ನಾಗರಾಜ್, ಪ್ರೇಮಾ ಶೆಟ್ಟಿ, ಸ್ಟೆಲ್ಲಾ ಮಾರ್ಟಿನ್, ಅರ್ಚನಾ, ಚಂದ್ರಿಕಾ, ತಬಸ್ಸುಮ್ ಮತ್ತಿತರರು ಭಾಗವಹಿಸಿದ್ದರು.
Shivamogga: ಮಾನವೀಯತೆ ಮೆರೆದ ಗೃಹ ಸಚಿವ ಆರಗ ಜ್ಞಾನೇಂದ್ರ: ಗಾಯಾಳು ರಕ್ಷಣೆ