ಪಕ್ಷ ನಂಬಿ ಬಂದವರ ಕಾಂಗ್ರೆಸ್‌ ಎಂದೂ ಕೈ ಬಿಟ್ಟಿಲ್ಲ: ಸಚಿವ ಡಿ.ಸುಧಾಕರ್‌

By Kannadaprabha News  |  First Published Jul 10, 2023, 1:41 PM IST

ಕಾಂಗ್ರೆಸ್‌ ಪಕ್ಷಕ್ಕೆ ತನ್ನದೇ ಆದ ಇತಿಹಾಸವಿದ್ದು, ನಂಬಿ ಬಂದವರ ಎಂದಿಗೂ ಕೈ ಬಿಟ್ಟಿಲ್ಲ. ಪೋಷಿಸಿ ಸಲಹಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಹೇಳಿದರು. 


ಹಿರಿಯೂರು (ಜು.10): ಕಾಂಗ್ರೆಸ್‌ ಪಕ್ಷಕ್ಕೆ ತನ್ನದೇ ಆದ ಇತಿಹಾಸವಿದ್ದು, ನಂಬಿ ಬಂದವರ ಎಂದಿಗೂ ಕೈ ಬಿಟ್ಟಿಲ್ಲ. ಪೋಷಿಸಿ ಸಲಹಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಹೇಳಿದರು. ನಗರದ ತುಳಸಿ ನಾರಾಯಣರಾವ್ ಕಲ್ಯಾಣ ಮಂಟಪದಲ್ಲಿ ಡಿ. ಸುಧಾಕರ್‌ ಮತ್ತು ಜಿ.ಎಸ್‌ ಮಂಜುನಾಥ್‌ ಅಭಿಮಾನಿ ಬಳಗದ ವತಿಯಿಂದ ಭಾನುವರ ಆಯೋಜಿಸಿದ್ದ ಸನ್ಮಾನ ಮತ್ತು ಜಿ.ಎಸ್‌ ಮಂಜುನಾಥ್‌ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಾಳ್ಮೆಯಿಂದ ಕಾದಲ್ಲಿ ಅವಕಾಶಗಳ ಹೆಬ್ಬಾಗಿಲುಗಳು ತಂತಾನೆ ತೆರೆಯುತ್ತವೆ ಎಂದರು.

ಜಿ.ಎಸ್‌. ಮಂಜುನಾಥ್‌ ಈ ಮೊದಲು ಹಿರಿಯೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋತರೂ ಜನರ ಒಡನಾಟ ಎಂದೂ ಬಿಡಲಿಲ್ಲ. ಎಲ್ಲಾ ಜನಾಂಗದ ಜನರ ಮತ್ತು ಯುವಕರ ಒಲವು ಮತ್ತು ವಿಶ್ವಾಸ ಗಳಿಸಿಕೊಂಡು ಸದಾ ಜನರೊಡನೆ ಬೆರೆಯುವ ಗುಣವುಳ್ಳವರಾಗಿದ್ದಾರೆ. ಭವಿಷ್ಯದಲ್ಲಿ ಜಿ.ಎಸ್‌. ಮಂಜುನಾಥ್‌ರವರಿಗೆ ನಿಜಕ್ಕೂ ಒಳ್ಳೆಯ ದಿನಗಳು ಕಾದು ಕುಳಿತಿವೆ ಎಂದರು.

Latest Videos

undefined

ಗ್ಯಾರಂಟಿ​ಗಳ ಈಡೇ​ರಿ​ಸ​ದಿ​ದ್ದರೆ ಸರ್ಕಾರದ ವಿರುದ್ಧ ಹೋರಾ​ಟ: ಶಾಸಕ ಆರಗ ಜ್ಞಾನೇಂದ್ರ

ಜಿ.ಎಸ್‌ ಮೂಲತಃ ಹೋರಾಟದ ಮನೋಭಾವದ ವ್ಯಕ್ತಿ. ಅನೇಕ ಜನಪರ ಹೋರಾಟಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಪೌರ ನೌಕರರ ಪರವಾಗಿ ಹೋರಾಟ ಮಾಡಿ ಅವರಿಗೆ ಖಜಾನೆಯಿಂದಲೇ ವೇತನ ಪಾವತಿಯಾಗುವಂತೆ ಮಾಡಿದ್ದರು. ಅಂದು ಹಣಕಾಸು ಸಚಿವರಾಗಿದ್ದ ಸಿದ್ದರಾಮಯ್ಯ, ಜಿ.ಎಸ್‌. ಮಂಜುನಾಥ್‌ ನಡೆಸಿದ ಹೋರಟಕ್ಕೆ ಸ್ಪಂದಿಸಿ ಖಜಾನೆಯಿಂದಲೇ ವೇತನ ಪಾವತಿಗೆ ಆದೇಶ ಮಾಡಿದ್ದರು. ಮಂಜುನಾಥ್‌ ಅವರ ಕನಸುಗಳೇನು ಇವೆಯೋ ಅವೆಲ್ಲಾ ಬರುವ ದಿನಗಳಲ್ಲಿ ಸಾಕಾರಗೊಳ್ಳಲಿ. ನಾವೆಲ್ಲಾ ಅವರ ಜೊತೆ ಇದ್ದು ಶಕ್ತಿ ತುಂಬೋಣ ಎಂದು ಆಶಿಸಿದರು.

ಕಾಂಗ್ರೆಸ್‌ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್‌ ಮಂಜುನಾಥ್‌ ಮಾತನಾಡಿ, ಜನರ ಪ್ರೀತಿ, ಅಭಿಮಾನಕ್ಕೆ ನಾನು ಸದಾ ಋುಣಿಯಾಗಿರುತ್ತೇನೆ. ಯಾವುದೇ ಪದವಿ, ಅಧಿಕಾರದಲ್ಲಿ ಇಲ್ಲದಿದ್ದರೂ ಸಹ ಜನರು ನನ್ನ ಮೇಲೆ ಇಷ್ಟೊಂದು ಅಭಿಮಾನ ತೋರಿಸುತ್ತಿರುವುದಕ್ಕೆ ನಾನು ಅಭಾರಿಯಾಗಿರುತ್ತೇನೆ. ಸಚಿವರಿಗೆ ಬರೀ ತಾಲೂಕಿನಲ್ಲಿಯೇ ಅಲ್ಲ. ಜಿಲ್ಲೆಯ ಎಲ್ಲಾ ಶಾಸಕರು ಸೇರಿ ಜಿಲ್ಲಾಮಟ್ಟದಲ್ಲಿ ದೊಡ್ಡದೊಂದು ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸುವ ಯೋಜನೆಯಿದೆ ಎಂದರು.

ಅಭಿವೃದ್ಧಿ ಪರ ಚಿಂತನೆಯ ನಾಯಕ ಸಚಿವ ಡಿ ಸುಧಾಕರ್‌ರವರಿಂದ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ತಮ್ಮ ಸಮುದಾಯದ ನೂರು ಮತವೂ ಇಲ್ಲದೇ ಅದ್ಭುತ ಗೆಲುವು ಸಾಧಿಸುತ್ತಾರೆಂದರೆ ಅವರ ಜನಪರ ಕಾಳಜಿ, ಅಭಿವೃದ್ಧಿಪರ ಮನಸ್ಸು ಕಾರಣ. ಬರುವ ದಿನಗಳಲ್ಲಿ ಎಲ್ಲರೂ ಒಗ್ಗೂಡಿ ಬರಲಿರುವ ಎಲ್ಲಾ ಚುನಾವಣೆಗಳ ಗೆಲುವನ್ನು ಕಾಂಗ್ರೆಸ್‌ ಪಕ್ಷದ ತೆಕ್ಕೆಗೆ ತರಲು ಶ್ರಮಿಸೋಣ. ನಿಮ್ಮ ಅಭಿಮಾನ, ಪ್ರೀತಿ, ವಿಶ್ವಾಸ ನಮ್ಮ ಮೇಲೆ ಹೀಗೆಯೇ ಇರಲಿ ಎಂದರು.

ಕ್ವಿಂಟಲ್‌ಗೆ 56 ಸಾವಿರ ತಲುಪಿದ ರಾಶಿ ಕೆಂಪಡಕೆ: ಅಡಕೆ ವಲಯದಲ್ಲಿ ಆತಂಕ ಮಿಶ್ರಿತ ಸಂತೋಷ

ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಬಿ.ಎಚ್‌ ಮಂಜುನಾಥ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಖಾದಿ ರಮೇಶ್‌, ಈರಲಿಂಗೇಗೌಡ, ಕಂದಿಕೆರೆ ಸುರೇಶ್‌ ಬಾಬು, ಅಮೃತೇಶ್ವರ ಸ್ವಾಮಿ, ಮಹಂತೇಶ್‌, ಎಸ್‌ ಆರ್‌ ತಿಪ್ಪೇಸ್ವಾಮಿ, ಪುಟ್ಟಸ್ವಾಮಿ ಗೌಡ, ಟಿ. ಚಂದ್ರಶೇಖರ್‌, ಗಿಡ್ಡೋಬನಹಳ್ಳಿ ಅಶೋಕ್‌, ಜಿ.ಎಲ… ಮೂರ್ತಿ, ಸಣ್ಣಪ್ಪ, ದಯಾನಂದ್‌, ಡಾ. ಸುಜಾತಾ, ಗೀತಾ ನಾಗಕುಮಾರ್‌, ವಿಠ್ಠಲ… ಪಾಂಡುರಂಗ, ಶಿವರಂಜಿನಿ, ಯಲ್ಲದಕೆರೆ ಮಂಜುನಾಥ್‌ ಇದ್ದರು.

click me!