ತವರು ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ರೋಡ್ ಶೋ ನಡೆಸಿ ಚುನಾವಣಾ ರಣಕಹಳೆ ಮೊಳಗಿಸಿದರು. ಚುನಾವಣೆ ಹಿನ್ನೆಲೆಯಲ್ಲಿ ಆರಂಭಗೊಂಡ ಜಯವಾಹಿನಿ ಯಾತ್ರೆ ಮೊದಲ ದಿನ ಬೆಂಗಳೂರು ಸೇರಿ ಆರು ಜಿಲ್ಲೆಗಳಲ್ಲಿ ಸಂಚರಿಸಿದ್ದು, ಎರಡನೇ ದಿನ ಹಾವೇರಿ ಜಿಲ್ಲೆಯ ರಾಣಿಬೆನ್ನೂರು, ಹಾವೇರಿ ಮತ್ತು ಶಿಗ್ಗಾಂವಿ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸಿತು.
ಹಾವೇರಿ (ಏ.25) : ತವರು ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ರೋಡ್ ಶೋ ನಡೆಸಿ ಚುನಾವಣಾ ರಣಕಹಳೆ ಮೊಳಗಿಸಿದರು. ಚುನಾವಣೆ ಹಿನ್ನೆಲೆಯಲ್ಲಿ ಆರಂಭಗೊಂಡ ಜಯವಾಹಿನಿ ಯಾತ್ರೆ ಮೊದಲ ದಿನ ಬೆಂಗಳೂರು ಸೇರಿ ಆರು ಜಿಲ್ಲೆಗಳಲ್ಲಿ ಸಂಚರಿಸಿದ್ದು, ಎರಡನೇ ದಿನ ಹಾವೇರಿ ಜಿಲ್ಲೆಯ ರಾಣಿಬೆನ್ನೂರು, ಹಾವೇರಿ ಮತ್ತು ಶಿಗ್ಗಾಂವಿ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸಿತು.
ರಾಣಿಬೆನ್ನೂರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣಕುಮಾರ್ ಪೂಜಾರ(Arun kumar pujar) ಪರ ರೋಡ್ ಶೋ(Road show), ಸಾರ್ವಜನಿಕ ಸಭೆ ನಡೆಸಿದರು. ಮಧ್ಯಾಹ್ನ 1ಕ್ಕೆ ಹಾವೇರಿ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗವಿಸಿದ್ದಪ್ಪ ದ್ಯಾಮಣ್ಣನವರ ಪರ ರೋಡ್ ಶೋ ಹಾಗೂ ಸಾರ್ವಜನಿಕರ ಸಭೆ ನಡೆಸಿ ಮಧ್ಯಾಹ್ನದ ಬಳಿಕ ತಮ್ಮ ಸ್ವಕ್ಷೇತ್ರ ಶಿಗ್ಗಾಂವಿಯ ಬಂಕಾಪುರ, ಸವಣೂರು ಪಟ್ಟಣದಲ್ಲಿ ರೋಡ್ ಶೋ, ಸಾರ್ವಜನಿಕರ ಸಭೆ ನಡೆಸಿ ಮತಬೇಟೆ ನಡೆಸಿದರು.
undefined
ಸವದಿ, ಶೆಟ್ಟರ್ ಕಾಂಗ್ರೆಸ್‌ಗೆ ಹೋಗಿರೋದು ಬಿಜೆಪಿಗೆ ಪ್ಲಸ್:ಸಿ ಎಂ ಬೊಮ್ಮಾಯಿ
ಪ್ರಚಾರ ವೇಳೆ ಮಾತಾಡಿದ ಸಿಎಂ ಬೊಮ್ಮಾಯಿ(CM Basavaraj Bommai), ಸಮಾಜ ಒಡೆಯುವ ಕೆಲಸ ಮಾಡಿದ ಕಾಂಗ್ರೆಸ್ಸಿಗರು ಈಗ ಬಸವಕಲ್ಯಾಣಕ್ಕೆ ರಾಹುಲ್ ಗಾಂಧಿ(Rahul gandhi) ಕರೆದುಕೊಂಡು ಬಂದಿದ್ದಾರೆ. ಪಾಪ ರಾಹುಲ್ ಗಾಂಧಿಗೆ ಬಸವಣ್ಣನವರು ಅಂದರೆ ಯಾರು ಅಂತಾನೇ ಗೊತ್ತಿಲ್ಲ, ಬಸವಣ್ಣನ ತತ್ವಗಳಿಗೆ ಕಾಂಗ್ರೆಸ್ ವಿರುದ್ಧವಾಗಿದೆ. ದೇಶ ಒಡೆದವರು ಕಾಂಗ್ರೆಸ್ಸಿಗರು, ಒಡೆದು ಆಳುವ ನೀತಿ ಅವರದ್ದು. ಅವರು ಗ್ಯಾರಂಟಿ ಯೋಜನೆ ತಂದಿದ್ದಾರೆ. ಅನ್ನಭಾಗ್ಯ ಎನ್ನುವುದು ಚುನಾವಣೆ ಸ್ಟಂಟ್. ಚುನಾವಣೆ ಮುಗಿಯುವರೆಗೂ ಗ್ಯಾರಂಟಿ ಆ ಮೇಲೆ ಅವು ಗಳಗಂಟಿ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ಸಿಗರ ಕೈಯಲ್ಲಿ ಅಧಿಕಾರ ಇದ್ದರೂ ಜಿಲ್ಲೆ ರಚಿಸಲಿಲ್ಲ, ಹಾವೇರಿ ಸಮಗ್ರ ಅಭಿವೃದ್ಧಿ ಮಾಡಿದ್ದು ಬಿ.ಎಸ್.ಯಡಿಯೂರಪ್ಪ.(BS Yadiyurappa) ಯುಟಿಪಿ ಯೋಜನೆ ಮೂಲಕ ಹಿರೇಕೆರೂರ, ಬ್ಯಾಡಗಿ, ರಾಣಿಬೆನ್ನೂರು, ಹಾವೇರಿ ತಾಲೂಕು ಸೇರಿ 1 ಲಕ್ಷ ಎಕರೆಗೆ ನೀರಾವರಿ ಕಲ್ಪಿಸಿದ್ದೇವೆ. ನೂರಾರು ಕೆರೆ ತುಂಬಿಸಿದ್ದೇವೆ. ಹಾವೇರಿಯಲ್ಲಿ ಎಂಜಿನಿಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜು ಮಂಜೂರು ಮಾಡಿದ್ದೇವೆ ಎಂದರು. ಕಾಂಗ್ರೆಸ್ ಹಾವೇರಿ ಜಿಲ್ಲೆಗೆ ಅನ್ಯಾಯ, ಜನರಿಗೆ ಮೋಸ ಮಾಡುವ ಜತೆಗೆ ಯೋಜನೆಗಳಿಗೆ ದ್ರೋಹ ಮಾಡಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆ ಅಭಿವೃದ್ಧಿ ಆಗಿದೆ. ಇನ್ನಷ್ಟುಯೋಜನೆಗಳು ಬರಬೇಕಾದರೆ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು ಎಂದರು.
ಓಡಿ ಹೋಗುವ ಸಿಎಂ ನಾನಲ್ಲ: ಬರೀ ಭಾಷಣದಿಂದ ಸಾಮಾಜಿಕ ನ್ಯಾಯ ಸಿಗುವುದಿಲ್ಲ. ನಾವು ಎಸ್ಸಿ, ಎಸ್‌ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಿದ್ದೇವೆ. ಬಹುದಿನದ ಬೇಡಿಕೆಯಾದ ಒಳಮೀಸಲಾತಿ ಕೊಟ್ಟಿದ್ದೇವೆ. ನಾನು ಓಡಿ ಹೋಗುವ ಮುಖ್ಯಮಂತ್ರಿ ಅಲ್ಲ, ಮೀಸಲಾತಿ ಹೆಚ್ಚಿಸಿ ಕಾನೂನು ರಚಿಸಿ, ಕೇಂದ್ರಕ್ಕೆ ಕಳುಹಿಸಿದ್ದೇವೆ ಎಂದರು.
ಜಿಲೇಬಿ ಫೈಲ್ ನಿರಾಕರಣೆ: ಕಾಂಗ್ರೆಸ್ಸಿಗರು ಉತ್ತರ ಕರ್ನಾಟಕ ವಿರೋಧಿಗಳು. ಅಧಿಕಾರದಲ್ಲಿದ್ದಾಗ ಉತ್ತರ ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದರು. ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿಗೆ ಕೆಲ ಫೈಲ್ ಬರುತ್ತಿದ್ದವು. ಅವುಗಳಿಗೆ ಜಿಲೇಬಿ (ಜಿ-ಗೌಡ್ರು, ಲೆ-ಲಿಂಗಾಯತರು, ಬಿ-ಬ್ರಾಹ್ಮಣರು) ಎಂಬ ಹೆಸರಿಟ್ಟಿದ್ದರು. ಜಿಲೇಬಿ ಫೈಲ್ ಬಂದರೆ ಕಿತ್ತು ಒಗೆಯಿರಿ ಎನ್ನುತ್ತಿದ್ದರು ಎಂದು ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
'ಜಯ ವಾಹಿನಿ ರೋಡ್ ಶೋ'ಗೆ ಜನರ ಅಭೂತಪೂರ್ವ ಬೆಂಬಲ ಸಿಕ್ಕಿದೆ: ಸಿಎಂ
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.