ರೈತರ ಕಣ್ಣೀರು ಒರೆಸಲು ಎಚ್‌ಡಿಕೆ ಸಿಎಂ ಆಗಬೇಕು: ಎಚ್‌ಡಿ ದೇವೇಗೌಡ

By Kannadaprabha News  |  First Published Apr 25, 2023, 1:00 AM IST

ರಾಜ್ಯದ ರೈತರ, ಬಡವರ ಪರ ಇರುವ ಪಕ್ಷವೆಂದರೆ ಅದು ಜೆಡಿಎಸ್‌ ಪಕ್ಷ. ಪ್ರಾದೇಶಿಕ ಪಕ್ಷದ ಉಳಿವಿಗಾಗಿ ಕನ್ನಡ ನಾಡಿನ ಎಲ್ಲರೂ ಕಟಿಬದ್ಧರಾಗಿ. ರೈತರ, ಸಂಕಷ್ಟಗಳನ್ನು ನಿವಾರಿಸಲು ಎಚ್‌.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಬೇಕು ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು.


ಶಿರಾ (ಏ.25) : ರಾಜ್ಯದ ರೈತರ, ಬಡವರ ಪರ ಇರುವ ಪಕ್ಷವೆಂದರೆ ಅದು ಜೆಡಿಎಸ್‌ ಪಕ್ಷ. ಪ್ರಾದೇಶಿಕ ಪಕ್ಷದ ಉಳಿವಿಗಾಗಿ ಕನ್ನಡ ನಾಡಿನ ಎಲ್ಲರೂ ಕಟಿಬದ್ಧರಾಗಿ. ರೈತರ, ಸಂಕಷ್ಟಗಳನ್ನು ನಿವಾರಿಸಲು ಎಚ್‌.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಬೇಕು ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು.

ನಗರದ ಜೆಡಿಎಸ್‌ ಕಚೇರಿಯ ಆವರಣದಲ್ಲಿ ನಡೆದ ಜೆಡಿಎಸ್‌ ಕಾರ್ಯಕರ್ತರ ಬೃಹತ್‌ ಸಮಾವೇಶ(JDS Convention)ದಲ್ಲಿ ಭಾಗವಹಿಸಿ ಮಾತನಾಡಿದರು. ಎಚ್‌.ಡಿ.ಕುಮಾರಸ್ವಾಮಿ(HD Kumaraswamy)ಯವರ ಮನಸ್ಸಿನಲ್ಲಿ ಪ್ರತಿಯೊಬ್ಬ ಬಡವರ, ರೈತರ ಕಣ್ಣೀರು ಒರೆಸಬೇಕು ಹಂಬಲವಿದೆ. ರಾಜ್ಯದ ರೈತರಿಗಾಗಿ ಎಚ್‌.ಡಿ.ಕುಮಾರಸ್ವಾಮಿ ಹೋರಾಟ ಮಾಡುತ್ತಿದ್ದಾರೆ. ಅವರು ಅಧಿಕಾರಕ್ಕಾಗಿ ಹೋರಾಡುತ್ತಿಲ್ಲ. ಆದ್ದರಿಂದ ಜೆಡಿಎಸ್‌ ಅಧಿಕಾರ ತರಲು ಮತದಾರರು ಶಿರಾ ಕ್ಷೇತ್ರದಲ್ಲಿ ಉಗ್ರೇಶ್‌ ಅವರನ್ನು ಗೆಲ್ಲಿಸುವ ಮೂಲಕ ಶಕ್ತಿ ಕೊಡಿ ಎಂದರು.

Tap to resize

Latest Videos

HD Kumaraswamy: ಎರಡು ದಿನಗಳ ವಿಶ್ರಾಂತಿ ಬಳಿಕ ಚುನಾವಣಾ ಅಖಾಡಕ್ಕೆ ಎಚ್‌ಡಿಕೆ!

ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ(CM Ibrahim) ಮಾತನಾಡಿ, ಜೆಡಿಎಸ್‌ ಪಕ್ಷ ಎಂದರೆ ರೈತರ ಪಕ್ಷ. ರಾಜ್ಯದ ರೈತರ ಉಳಿವಿಗಾಗಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಬೇಕು. ಸ್ಥಳೀಯ ಆಡಳಿತದಲ್ಲಿ ಹಿಂದುಳಿದವರು ಅಧ್ಯಕ್ಷರಾಗಬಹುದು ಎಂಬ ಕಾನೂನು ತಂದಿದ್ದು ದೇವೇಗೌಡರು. ಕಾಂಗ್ರೆಸ್‌ನವರು 70 ವರ್ಷದಿಂದ ಕೇವಲ ಹಿಂದುಳಿದವರ ಮತಪಡೆದರು. ಆದರೆ ಅಭಿವೃದ್ಧಿ ಮಾಡಲಿಲ್ಲ. ಆದರೆ ಜೆಡಿಎಸ್‌ ಪಕ್ಷದಲ್ಲಿ ಹಿಂದುಳಿದವರಿಗೆ ಎಲ್ಲಾ ರೀತಿಯ ಸ್ಥಾನಮಾನಗಳನ್ನು ನೀಡಲಾಗಿದೆ ಎಂದರು.

ಜೆಡಿಎಸ್‌ ಅಭ್ಯರ್ಥಿ ಆರ್‌.ಉಗ್ರೇಶ್‌ ಮಾತನಾಡಿ, ರಾಜ್ಯದ ಜೆಡಿಎಸ್‌ ಪಕ್ಷ ಒಬ್ಬ ಸಾಮಾನ್ಯ ರೈತನಿಗೆ ಟಿಕೆಟ್‌ ನೀಡುವ ಮೂಲಕ ರೈತರ, ಸಾಮಾನ್ಯ ಜನರ ಪರವಾಗಿದೆ ಎಂದು ಸಾಬೀತು ಮಾಡಿದ್ದಾರೆ ಎಂದ ಅವರು ಶಿರಾ ಕ್ಷೇತ್ರದಲ್ಲಿ ಜೆಡಿಎಸ್‌ ಕಾರ್ಯಕರ್ತರು ಜೆಡಿಎಸ್‌ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಪಣ ತೊಟ್ಟಿದ್ದಾರೆ. ದೇವೇಗೌಡ ಅವರು ಶಿರಾ ಕ್ಷೇತ್ರಕ್ಕೆ ಮೊಟ್ಟಮೊದಲನೆಯದಾಗಿ ಪ್ರಚಾರಕ್ಕೆ ಆಗಮಿಸಿದ್ದಾರೆ. ಅವರ ಆರ್ಶೀವಾದ ನಮ್ಮ ಮೇಲಿದೆ ಎಂದರು.

ಎಚ್‌ಡಿಕೆಗೆ ಅನಾರೋಗ್ಯ: ಮಣಿಪಾಲ್‌ ಆಸ್ಪತ್ರೆಗೆ ದಾಖಲು! ವೈದ್ಯರು ಹೇಳಿದ್ದೇನು?

ಈ ಸಂದರ್ಭದಲ್ಲಿ ವಿಧಾನ ಪರಿಷತ್‌ ಸದಸ್ಯ ಕೆ.ಎ.ತಿಪ್ಪೇಸ್ವಾಮಿ, ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ ಎಸ್‌.ಆರ್‌.ಗೌಡ, ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಆಂಜಿನಪ್ಪ, ತಾಲೂಕು ಜೆಡಿಎಸ್‌ ಅಧ್ಯಕ್ಷ ಸತ್ಯಪ್ರಕಾಶ್‌, ನಗರಸಭೆ ಅಧ್ಯಕ್ಷ ಬಿ.ಅಂಜಿನಪ್ಪ, ಜಿ.ಪಂ. ಮಾಜಿ ಉಪಾಧ್ಯಕ್ಷ ಮುದಿಮಡು ರಂಗಶಾಮಯ್ಯ, ಮಾಜಿ ಸದಸ್ಯ ಎಸ್‌.ರಾಮಕೃಷ್ಣ, ಕಲ್ಕೆರೆ ರವಿಕುಮಾರ್‌, ಟಿ.ಡಿ.ಮಲ್ಲೇಶ್‌, ನಗರ ಜೆಡಿಎಸ್‌ ಅಧ್ಯಕ್ಷ ಶ್ರೀರಂಗ, ಜೆಡಿಎ ಜಿಲ್ಲಾ ಮಾಧ್ಯಮ ವಕ್ತಾರ ಲಿಂಗದಹಳ್ಳಿ ಚೇತನ್‌ಕುಮಾರ್‌, ಎಸ್‌.ಎಸ್‌.ನಾಗಭೂಷಣ್‌, ನಿಸರ್ಗ ಸುರೇಶ್‌, ಹೇಮಂತ್‌ಕುಮಾರ್‌, ಬ್ಯಾಡಗೆರೆ ಕೊಲ್ಲಾರಪ್ಪ, ಲಲಿತಮ್ಮ, ರೇಣುಕಮ್ಮ ಸೇರಿದಂತೆ ಹಲವರು ಹಾಜರಿದ್ದರು.

click me!