ಬಿಜೆಪಿ ಒಳ ಮೀಸಲಾತಿ ಕೊಡುವ ಮೂಲಕ ದಲಿತ ಬಂಧುಗಳಿಗೆ ಸಾಮಾಜಿಕ ನ್ಯಾಯ ಒದಗಿಸಿದ್ದು, ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಅಷ್ಟೇ ಅಲ್ಲ ಪರಿಶಿಷ್ಟಪಂಗಡದ ಮೀಸಲಾತಿ ಪ್ರಮಾಣವನ್ನು ಕೂಡ ಬಿಜೆಪಿ ಸರ್ಕಾರ ಹೆಚ್ಚಿಸಿದೆ. ಜೊತೆಗೆ ಲಿಂಗಾಯತ ಸಮಾಜಕ್ಕೂ ಕೂಡ ಮೀಸಲಾತಿ ಹೆಚ್ಚಿಸಿದ್ದು ನಮ್ಮ ಸರ್ಕಾರವೇ ಎಂದ ಬಾಲಚಂದ್ರ ಜಾರಕಿಹೊಳಿ.
ಕಾಗವಾಡ(ಏ.30): ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್ ಅನುಷ್ಠಾನಗೊಳ್ಳಲು ಸಾಧ್ಯವೇ ಇಲ್ಲ. ಇದಕ್ಕಾಗಿ .60 ಸಾವಿರ ಕೋಟಿ ಬೇಕು. ಇಷ್ಟುದೊಡ್ಡ ಮೊತ್ತವನ್ನು ಎಲ್ಲಿಂದ ತರುವವರು ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಪ್ರಶ್ನಿಸಿದರು. ಕಾಗವಾಡ ಮತಕ್ಷೇತ್ರದ ಮದಭಾವಿ ಗ್ರಾಮದಲ್ಲಿ ಕಾಗವಾಡ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಒಳ ಮೀಸಲಾತಿ ಕೊಡುವ ಮೂಲಕ ದಲಿತ ಬಂಧುಗಳಿಗೆ ಸಾಮಾಜಿಕ ನ್ಯಾಯ ಒದಗಿಸಿದ್ದು, ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಅಷ್ಟೇ ಅಲ್ಲ ಪರಿಶಿಷ್ಟಪಂಗಡದ ಮೀಸಲಾತಿ ಪ್ರಮಾಣವನ್ನು ಕೂಡ ಬಿಜೆಪಿ ಸರ್ಕಾರ ಹೆಚ್ಚಿಸಿದೆ. ಜೊತೆಗೆ ಲಿಂಗಾಯತ ಸಮಾಜಕ್ಕೂ ಕೂಡ ಮೀಸಲಾತಿ ಹೆಚ್ಚಿಸಿದ್ದು ನಮ್ಮ ಸರ್ಕಾರವೇ ಎಂದರು.
ಕಾಗವಾಡ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಮಾತನಾಡಿ, ನನ್ನ ಅಧಿಕಾರವಧಿಯಲ್ಲಿ ಅನುಷ್ಠಾನಗೊಳಿಸಿದ ಅಭಿವೃದ್ಧಿ ಹಾಗೂ ಜನಪರ ಕಾರ್ಯಗಳನ್ನು ಮೆಚ್ಚಿ ಕಾಗವಾಡ ಮತಕ್ಷೇತ್ರದ ಎಲ್ಲ ಗ್ರಾಮ, ಪಟ್ಟಣಗಳಲ್ಲಿ ಮತದಾರರಿಂದ ವ್ಯಾಪಕ ಬೆಂಬಲ ಸಿಗುತ್ತಿದೆ. ಹಿಂದೆಂದೂ ಕಾಣದಷ್ಟುಮದಭಾವಿ ಗ್ರಾಮದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಚಾರ ಸಭೆಯಲ್ಲಿ ಜನರು ಸೇರಿರುವುದನ್ನು ಗಮನಿಸಿದರೇ ಬಿಜೆಪಿ ಗೆಲುವು ನಿಶ್ಚಿತ ಎಂದರು.
ಸ್ವಾರ್ಥಕ್ಕೋಸ್ಕರ 4 ತಿಂಗಳು ರಾಜಕಾರಣ ಬಗ್ಗೆ ಜನರಿಗೆ ಗೊತ್ತಿದೆ: ಲಕ್ಷ್ಮೀ ಹೆಬ್ಬಾಳಕರ
ಶಿವನೂರ ಬಿಜೆಪಿ ಮುಖಂಡ ತಮ್ಮಣ್ಣ ಪೂಜಾರಿ ಮಾತನಾಡಿ, ಹಿಂದುತ್ವದ ಪ್ರಭಾವ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಗವಾಡ ಶಾಸಕ ಶ್ರೀಮಂತ ಪಾಟೀಲರ ಅಭಿವೃದ್ಧಿ ಹಾಗೂ ಜನಪರ ಕಾಳಜಿ ಮೆಚ್ಚಿ ನಾನು ಕಾಂಗ್ರೆಸ್ ಪಕ್ಷ ತ್ಯಜಿಸಿ ಬಿಜೆಪಿ ಸೇರ್ಪಡೆಯಾಗಿರುವೆ. ನನ್ನ ಕೆಲ ವಿರೋಧಿಗಳು ನನ್ನ ಬಗೆಗೆ ಅಪ ಪ್ರಚಾರ ಮಾಡುತ್ತಿದ್ದು, ನಾನು ಸಿದ್ಧೇಶ್ವರ ದೇವರ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ ಬಿಜೆಪಿ ಸೇರ್ಪಡೆಯಾಗಲು ಶ್ರೀಮಂತ ಪಾಟೀಲರಿಂದ ಒಂದು ಪೈಸೆ ಪಡೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಚಾರ ಸಭೆಯಲ್ಲಿ ಕೆಎಂಎಫ್ ನಿರ್ದೇಶಕ ಅಪ್ಪಾಸಾಹೇಬ್ ಅವತಾಡೆ, ಬಿಜೆಪಿ ಧುರೀಣ ಆರ್.ಎಂ.ಪಾಟೀಲ, ಮಹಾದೇವ ಕೋರೆ, ಬಾಳು ಮಗದುಮ್, ಸುಶಾಂತ ಪಾಟೀಲ, ಸಂಜಯ ತೆಲಸಂಗ, ದಾದಾ ಪಾಟೀಲ, ಮುರಿಗೆಪ್ಪ ಮಗದುಮ್, ಅಪ್ಪಾಸಾಹೇಬ್ ಮಳಮಳಸಿ, ಈಶ್ವರ ಕುಂಬಾರೆ, ಡಿ.ಕೆ.ಪವಾರ, ಸತ್ಯಪ್ಪ ಬಾಗೆನ್ನವರ, ಬಾವುಸಾಹೇಬ್ ಜಾಧವ, ನಾನಾಸಾಹೇಬ್ ಅವತಾಡೆ, ಮೋಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಭೂತಾಳಿ ಥರಥರೆ, ಮಾಜಿ ಅಧ್ಯಕ್ಷ ಸಂದಿಪ ನಲವಡೆ, ಈಶ್ವರ ಕುಂಬಾರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬಿಜೆಪಿ ಅಭಿವೃದ್ಧಿ ಮೆಚ್ಚಿ ನೂರಾರು ಯುವಕರು, ಧುರೀಣರು ಕಾಂಗ್ರೆಸ್ ತೊರೆದು ಶ್ರೀಮಂತ ಪಾಟೀಲ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾದರು.
Karnataka election 2023: ಕಾಂಗ್ರೆಸ್ ಮುಕ್ತ ಭಾರತ ಮಾಡುವ ಬದ್ಧರಾಗಬೇಕು: ಬಿಎಸ್‌ವೈ
ಪ್ರಗತಿಯ ಚಿಂತಕ ಶ್ರೀಮಂತ ಪಾಟೀಲರು ಸಜ್ಜನ, ಸೌಮ್ಯ ಸ್ವಭಾವದವರಾಗಿದ್ದು, ಇವರನ್ನು ಮೇ.10 ರಂದು ಮತ ನೀಡುವ ಮೂಲಕ ಮತ್ತೊಮ್ಮೆ ಶಾಸಕರಾಗಿ ಆಯ್ಕೆ ಮಾಡಲು ಸಹಕರಿಸಬೇಕು ಅಂತ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಕಾಗವಾಡ ಕ್ಷೇತ್ರದ ಅಭಿವೃದ್ಧಿ ಗಾಗಿ 3,000 ಕೋಟಿ ಅನುದಾನ ರಸ್ತೆ, ನೀರಾವರಿ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಎಲ್ಲ ಪ್ರಮುಖ ಕ್ಷೇತ್ರಗಳಲ್ಲಿ ಜನಪರ ಕಾರ್ಯಗಳ ಅನುಷ್ಠಾನ ಕ್ಕೆ ಆದ್ಯತೆ ನೀಡಿರುವೆ ಎಂದ ಅವರು ಕೆಲ ವಿರೋಧ ಪಕ್ಷದವರು ನಾನು ಭ್ರಷ್ಟಾಚಾರ ಮಾಡಿದ್ದೇನೆ ಎಂದು ಆರೋಪಿಸಿದ್ದಾರೆ ನನ್ನ ಮೇಲೆ ಮಾಡಿದ ಆರೋಪನ್ನು ಸಾಬಿತು ಮಾಡಲಿ ಅಂತ ಕಾಗವಾಡ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ತಿಳಿಸಿದ್ದಾರೆ.