ತಾಲೂಕಿನ ದೇವನಳ್ಳಿ ಗ್ರಾಪಂ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಚುನಾವಣಾ ಪ್ರಚಾರ ಮತ್ತು ಕಾರ್ಯಕರ್ತರ ಸಭೆ ನಡೆಸಿದರು.
ಶಿರಸಿ (ಏ.30) : ತಾಲೂಕಿನ ದೇವನಳ್ಳಿ ಗ್ರಾಪಂ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಚುನಾವಣಾ ಪ್ರಚಾರ ಮತ್ತು ಕಾರ್ಯಕರ್ತರ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಿರಸಿ-ಸಿದ್ದಾಪುರ ಕ್ಷೇತ್ರದ ಅಭಿವೃದ್ಧಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಅನುದಾನ ತಂದಿದ್ದೇನೆ. ಕ್ಷೇತ್ರದ ಎಲ್ಲಭಾಗಗಳಲ್ಲಿಯೂ ರಸ್ತೆ, ಸೇತುವೆ, ನೀರಾವರಿ, ಬಾಂದಾರ, ಕಾಲುಸಂಕಗಳಂತಹ ಅಗತ್ಯ ಅಭಿವೃದ್ಧಿ ಕಾರ್ಯಗಳು ನಡೆದಿದೆ. ಇನ್ನೂ ಹಲವಾರು ಕಾಮಗಾರಿಗಳು ಪ್ರಗತಿಯಲ್ಲಿದೆ. ನಗರಗಳಲ್ಲಿಯೂ ರಸ್ತೆಗಳು ಅಗಲೀಕರಣಗೊಂಡು ಸಂಚಾರವು ತುಂಬಾ ವ್ಯವಸ್ಥಿತಗೊಳ್ಳುತ್ತಿದೆ. ಆದರೆ ಮೊಸರಿನಲ್ಲಿ ಕಲ್ಲು ಹುಡುಕುವ ಮನಸ್ಥಿತಿಯವರು ಟೀಕಿಸಲು ವಿಷಯವಿಲ್ಲದೇ ಕ್ಷೇತ್ರಕ್ಕೆ ನಾನು ತಂದ 5,000 ಮನೆಗಳು ವಾಪಸ್ಸಾಗಿವೆ ಎಂದು 5 ವರ್ಷ ಹಳೆಯ ಪತ್ರಿಕೆಯ ಲೇಖನದ ಮೂಲಕ ಸುಳ್ಳು ಪ್ರಚಾರ ನಡೆಸುತ್ತಿದ್ದಾರೆ ಎಂದರು.
undefined
ನಾನು ಜನರ ಮಧ್ಯೆಯೇ ಇದ್ದು ಜನರ ಅಗತ್ಯತೆಯನ್ನು ಕಾಲಕಾಲಕ್ಕೆ ಪೂರೈಸಲಾಗುತ್ತಿದೆ. ಅಭಿವೃದ್ಧಿಗೆ ಪೂರ್ಣವಿರಾಮ ಎಂಬುದು ಎಂದೂ ಇರುವುದಿಲ್ಲ. ಕಾಲಕ್ಕೆ ತಕ್ಕಂತೆ ಹೊಸ ಬೇಡಿಕೆಗಳು, ಅವಶ್ಯಕತೆಗಳು ಉದ್ಭವಿಸುತ್ತದೆ ಜನಪ್ರತಿನಿಧಿಗಳು ಅದನ್ನು ಪೂರೈಸಬೇಕಿರುತ್ತದೆ. ನಾನು ಅದರಂತೆ ಮುಂದೆಯೂ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ, ತಾವೆಲ್ಲರೂ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಅತಿ ಹೆಚ್ಚಿನ ಮತ ನೀಡುವ ಮೂಲಕ ಸುಳ್ಳು ಹರಡುವವರಿಗೆ ತಕ್ಕ ಉತ್ತರ ನೀಡಬೇಕೆಂದರು.
ಶೆಟ್ಟರ್, ಸವದಿ ತಪ್ಪು ಹೆಜ್ಜೆ: ವಿಧಾನಸಭಾಧ್ಯಕ್ಷ ಕಾಗೇರಿ ಬೇಸರ
ಈ ಬಾರಿ ರಾಜ್ಯದಲ್ಲಿಯೂ ಬಿಜೆಪಿ ಸ್ಪಷ್ಟಬಹುಮತ ಪಡೆಯಲಿದ್ದು, ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿಗೆ ಮತನೀಡಿ ಅಭಿವೃದ್ಧಿಯ ವೇಗ ಹೆಚ್ಚಿಸುವಂತೆ ಕೋರಿದರು. ದೇವನಳ್ಳಿ ಪಂಚಾಯಿತಿಗೆ .12.60 ಕೋಟಿ ಅನುದಾನ ನೀಡಲಾಗಿದೆ. ಮಂದೆಯೂ ಸಹ ಈ ಭಾಗದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ದೇವನಳ್ಳಿ ಶಕ್ತಿಕೇಂದ್ರದ ಅಧ್ಯಕ್ಷರು ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ನಾವಣೆ ಬಹಿಷ್ಕಾರಕ್ಕೆ ಹುತ್ಗಾರ-ಹಾಲಳ್ಳ ಗ್ರಾಮಸ್ಥರ ನಿರ್ಧಾರ
ಶಿರಸಿ: ಕೋಳಿಫಾಮ್‌ರ್‍ನಿಂದ ಆಗುತ್ತಿರುವ ಸಮಸ್ಯೆ ಪರಿಹರಿಸದೇ ಇರುವುದಕ್ಕೆ ವ್ಯವಸ್ಥೆಯ ವಿರುದ್ಧ ಬೇಸತ್ತು ಹುಲೇಕಲ್ ಮಾರ್ಗದ ಹುತ್ಗಾರ-ಹಾಲಳ್ಳ ಗ್ರಾಮಸ್ಥರು ಈ ಚುನಾವಣೆಯಲ್ಲಿ ಮತ ಬಹಿಷ್ಕಾರ ಮಾಡಲು ನಿರ್ಧರಿಸಿದ್ದಾರೆ.
ಸ್ಥಳೀಯ ಹುತ್ಗಾರ್ ಗ್ರಾಪಂ ಕಚೇರಿ ಮುಂದೆ ಜಮಾಯಿಸಿದ ಗ್ರಾಮಸ್ಥರು, 2-3ದಶಕಗಳಿಂದ ಕುಕ್ಕುಟೋದ್ಯಮದಿಂದ ನಿವಾಸಿಗಳಿಗೆ ತೊಂದರೆಯಾಗುತ್ತಿದ್ದರೂ ಅದನ್ನು ಬಂದ್ ಮಾಡಲು ಅಧಿಕಾರಿಗಳು, ಜನಪ್ರತಿನಿಧಿಗಳು ಮುಂದಾಗುತ್ತಿಲ್ಲ. ಎಷ್ಟೇ ಹೋರಾಟ ನಡೆಸಿದರೂ, ಜನರ ಸಮಸ್ಯೆ ಅರಿವಿದ್ದರೂ ಯಾರೊಬ್ಬರೂ ಇದರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಇದರಿಂದ ಅಸಹಾಯಕರಾಗಿ ಚುನಾವಣಾ ಬಹಿಷ್ಕಾರ ಮಾಡುವುದು ಅನಿವಾರ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರಿಸರ, ಜಲ ಮಾಲಿನ್ಯಕ್ಕೆ ಕಾರಣವಾಗಿರುವ ಇಲ್ಲಿನ ಕೋಳಿಫಾಮ್‌ರ್ ವಿಷಯವಾಗಿ ತೆಗೆದುಕೊಳ್ಳುವ ಕ್ರಮದ ಬಗ್ಗೆ ಲಿಖಿತವಾಗಿ ಭರವಸೆ ನೀಡಬೇಕು. ಕುಕ್ಕಟೋದ್ಯಮದ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಅಷ್ಟಾದರೆ ಮಾತ್ರ ಚುನಾವಣಾ ಬಹಿಷ್ಕಾರದಿಂದ ಹಿಂದಕ್ಕೆ ಸರಿಯುವುದಾಗಿ ಪಟ್ಟು ಹಿಡಿದರು.
Karnataka Assembly Elections 2023: ಆರ್.ಅಶೋಕ್, ಕಾಗೇರಿ ಸೇರಿ ಹಲವರಿಂದ ನಾಮಪತ್ರ ಸಲ್ಲಿಕೆ
ಸ್ಥಳಕ್ಕೆ ಆಗಮಿಸಿದ ತಾಪಂ ಕಾರ್ಯನಿರ್ವಹಣಾಧಿಕಾರಿ ದೇವರಾಜ ಹಿತ್ತಲಕೊಪ್ಪ ಹಾಗೂ ಗ್ರಾಪಂ ಪಿಡಿಒ ಶಿವಕುಮಾರ ಅವರಿಗೆ ಬರುವ ಮೇ 5ರೊಳಗೆ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಗಡುವು ನೀಡಿದ್ದು ಕ್ರಮ ಕಾರ್ಯಗತಗೊಳಿಸದಿದ್ದರೆ ಚುನಾವಣಾ ಬಹಿಷ್ಕಾರ ಮಾಡುವುದಾಗಿ ಎಚ್ಚರಿಸಿದರು.
29ಎಸ್3 ಶಿರಸಿಯ ಹಾಲಳ್ಳ-ಹುತ್ಗಾರ ಗ್ರಾಮಸ್ಥರು ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದರು.