ಕಾಂಗ್ರೆಸ್‌ನಲ್ಲಿ ಎರಡು ಮೂರು ಗುಂಪುಗಳಾಗಿವೆ, ಬಿಜೆಪಿ ಕಡೆ ಅವರೆಲ್ಲರು ಎದುರು ನೋಡುತ್ತಿದ್ದಾರೆ, ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.
ಕೋಲಾರ (ಜು.16): ಕಾಂಗ್ರೆಸ್ ಸರ್ಕಾರಕ್ಕೆ ಆಯ್ಯುಷ ಇಲ್ಲ, ಡಿಸೆಂಬರ್, ಜನವರಿಗೆ ಸರ್ಕಾರ ಬೀಳುವುದು ಖಚಿತ ಎಂದು ಸಂಸದ ಎಸ್.ಮುನಿಸ್ವಾಮಿ ಭವಿಷ್ಯ ನುಡಿದರು. ಮಾಲೂರಿನಲ್ಲಿ ತಾಲ್ಲೂಕು ಆಡಳಿತದಿಂದ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳ ಸಮಾವೇಶದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿ, ಮುಂದೆ ಎಂದೆಗೂ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೆ ಕಾಂಗ್ರೆಸ್ ಸರ್ಕಾರಕ್ಕೆ ಭವಿಷ್ಯ ಇಲ್ಲ ಎಂದು ಕಾಂಗ್ರೆಸಿಗರಿಗೆ ಗೊತ್ತಿದೆ ಎಂದು ಹೇಳಿದರು.
ಕಾಂಗ್ರೆಸ್‌ನಲ್ಲಿ ಎರಡು ಮೂರು ಗುಂಪುಗಳಾಗಿವೆ, ಬಿಜೆಪಿ ಕಡೆ ಅವರೆಲ್ಲರು ಎದುರು ನೋಡುತ್ತಿದ್ದಾರೆ, ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ ಎಂದರು. ಕೇಂದ್ರ ಸರ್ಕಾರ ಜನ ಕೊಟ್ಟಿರುವ ಯೋಜನೆಗಳನ್ನು ನೋಡಿ ಹಲವಾರು ಪಕ್ಷಗಳು ಬೆಂಬಲ ನೀಡುತ್ತಿವೆ, ಕಾನೂನು ಸಿವಿಲ್ ಕೋಡ್ ಬಗ್ಗೆ ಆಮ್ ಆದ್ಮಿ ಪಕ್ಷ ಸಹ ಬೆಂಬಲ ವ್ಯಕ್ತಪಡಿಸಿದೆ ಎಂದರಲ್ಲದೆ, ಮಹಾರಾಷ್ಟ್ರ, ಬಿಹಾರ, ಗೋವಾ ರಾಜ್ಯಗಳಲ್ಲಿ ಸಹ ಅನೇಕ ಪಕ್ಷಗಳು ಎನ್‌ಡಿಎ ಜೊತೆ ಸೇರಿಕೊಂಡಿವೆ. ದೇಶದಲ್ಲಿ ಮತ್ತೆ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.
undefined
ಕೇಂದ್ರ ಸರ್ಕಾರ ಬಡವರ ಹೊಟ್ಟೆ ನೋಡಲಿಲ್ಲ: ಸಚಿವ ಮುನಿಯಪ್ಪ
ಪತ್ರಕರ್ತರು ವೃತ್ತಿಧರ್ಮ ಪಾಲಿಸಬೇಕು: ಪತ್ರಕರ್ತರು ರಾಜಕೀಯ ಮುಖಂಡರ ಮನೆ ಬಾಗಿಲಿಗೆ ಬರುವ ಪ್ರವೃತ್ತಿ ಹೆಚ್ಚಾಗುತ್ತಿದ್ದು, ಇದು ಉತ್ತಮ ಬೆಳೆವಣಿಗೆ ಅಲ್ಲ ಎಂದು ಸಂಸದ ಮುನಿಸ್ವಾಮಿ ಹೇಳಿದರು. ಅವರು ತಾಲೂಕು ಕಾರ‍್ಯನಿರತ ಪತ್ರಕರ್ತರ ಸಂಘ ಎಚ್.ವಿ.ಆರ್.ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿ, ಇಂದಿನ ರಾಜಕೀಯ ವ್ಯವಸ್ಥೆ ಕೆಟ್ಟುಹೋಗಿದ್ದು, ಅದನ್ನು ಸರಿಪಡಿಸುವ ಜವಾಬ್ದಾರಿ ಪತ್ರಕರ್ತರ ಪೆನ್ನಿನಲ್ಲಿದೆ. ಆದರೆ ಇಂದು ಬರವಣಿಗೆ ಮೂಲಕ ನೋಡಬೇಕಾದ ಪತ್ರಕರ್ತರನ್ನು ಬೆಳಿಗ್ಗೆ ಮನೆ ಬಾಗಿಲಿನಲ್ಲಿ ನೋಡುತ್ತಿದ್ದೇನೆ. ಇದು ಬೇಸರದ ಸಂಗತಿ ಎಂದರು.
ಮಾಲೂರಿನ ರೈಲ್ವೇ ನಿಲ್ದಾಣ ಸೇರಿದಂತೆ ಜಿಲ್ಲೆಯ ರೈಲ್ವೇ ಸ್ವೇಷನ್‌ಗಳ ಅಭಿವೃದ್ಧಿಗಾಗಿ 10.5 ಕೋಟಿ ರು.ಗಳ ಅಭಿವೃದ್ಧಿ ಕಾಮಗಾರಿ ಚಾಲನೆ ಯಲ್ಲಿದೆ. ಇಲ್ಲಿನ ರೈಲ್ವೇ ಸೇತುವೆ ಅಗಲೀಕರಣಕ್ಕೆ 30 ಕೋಟಿ ರು.ಗಳ ಸಹ ಮಂಜೂರಾಗಿದ್ದು, ಶೀಘ್ರವಾಗಿ ಕಾಮಗಾರಿ ಪ್ರಾರಂಭವಾಗಲಿದೆ ಎಂದರು. ಶಾಸಕ ನಂಜೇಗೌಡ ಮಾತನಾಡಿ ನಮ್ಮ ಸರ್ಕಾರ ಇಲ್ಲದ ಕಾರಣ ಕಳೆದ ಬಾರಿ ಶಾಸಕನಾಗಿದ್ದಾಗ ಇಲ್ಲಿನ ಜನತೆಯ ಕಷ್ಟಸುಖಗಳಿಗೆ,ಅಭಿವೃದ್ಧಿ ಕಾರ‍್ಯಗಳಿಗೆ ಸ್ಪಂದಿಸಲು ಸಾಧ್ಯವಾಗಿಲ್ಲ.ಆದರೆ ಈಗ ಜನತೆ ನನ್ನ ಮೇಲೆ ನಂಬಿಕೆ ಇಟ್ಟು ಎರಡನೇ ಬಾರಿ ಶಾಸಕನಾಗಿ ಆಶೀರ್ವದಿಸಿದ್ದಾರೆ. ಅವರ ನಂಬಿಕೆಯನ್ನು ಉಳಿಸುವ ರೀತಿಯಲ್ಲಿ ಆಡಳಿತ ನಡೆಸುವುದಾಗಿ ತಿಳಿಸಿದರು.
ಎಚ್‌ಎನ್ ವ್ಯಾಲಿ 3ನೇ ಹಂತದ ಶುದ್ಧೀಕರಣಕ್ಕೆ ಕ್ರಮ: ಸಚಿವ ಭೋಸರಾಜು
ಕಾರ‍್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಗೋಪಿನಾಥ್, ಕೆ.ಯು.ಡಬ್ಲ್ಯು.ಜೆ ಖಜಾಂಚಿ ವಾಸುದೇವ ಹೊಳ್ಳ ,ರಾಜ್ಯಕಾರ‍್ಯಕಾರಣಿ ಸದಸ್ಯ ವಿ.ಮುನಿರಾಜು ಇದ್ದರು. ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಎಸ್.ವಿ.ಲೋಕೇಶ್,ಎಂ.ವಿ.ರವೀಂದ್ರ ಹಾಗೂ ಜಿಲ್ಲಾ ಪ್ರಶಸ್ತಿ ವಿಜೇತ ಮಾಸ್ತಿ ಮೂರ್ತಿ ಅವರನ್ನು ಅತ್ಮೀಯವಾಗಿ ಸನ್ಮಾನಿಸಲಾಯಿತು.