ಸದ್ಯದಲ್ಲೇ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ. ತಿಂಗಳು, ವರ್ಷ ಅಲ್ಲ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗುತ್ತೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದರು.
ಮೈಸೂರು (ನ.05): ಸದ್ಯದಲ್ಲೇ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ. ತಿಂಗಳು, ವರ್ಷ ಅಲ್ಲ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗುತ್ತೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದರು. ಮೈಸೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ದಿನಕ್ಕೊಬ್ಬ ಅಜಿತ್ ಪವಾರ್ ಹುಟ್ಟಿಕೊಳ್ಳುತ್ತಿದ್ದಾರೆ. ಸರ್ಕಾರ ಬೀಳುವ ದಿನಗಣನೆ ಈಗ ಆರಂಭವಾಗಿದೆ. ನಾನು ತಿಂಗಳು, ವರ್ಷದ ಮಾತು ಆಡುತ್ತಿಲ್ಲ. ಕೆಲವೇ ದಿನಗಳಲ್ಲಿ ಸರ್ಕಾರ ಬೀಳಬಹುದು ಎಂದರು.
ಸತೀಶ್ ಜಾರಕಿಹೊಳಿ, ಡಿ.ಕೆ. ಶಿವಕುಮಾರ್, ಹರಿಪ್ರಸಾದ್, ಪರಮೇಶ್ವರ, ಪ್ರಿಯಾಂಕ್ ಖರ್ಗೆ ಎಲ್ಲಾ ಅಜಿತ್ ಪವಾರ್ ಗಳಾಗಿದ್ದಾರೆ. ಹೀಗಾಗಿ ಸರ್ಕಾರ ಬೀಳುವ ಲಕ್ಷಣ ಕಾಣುತ್ತಿದೆ. ಕಾಂಗ್ರೆಸ್ ನಲ್ಲಿ ಈಗ ಹಾದಿ ಬೀದಿಯಲ್ಲಿ ಹೋಗುವವರೆಲ್ಲಾ ಸಿಎಂ ಸ್ಥಾನ ಕೇಳುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಅವರ ಅಪ್ಪನಿಗೆ (ಮಲ್ಲಿಕಾರ್ಜುನ ಖರ್ಗೆ) ಸಿಎಂ ಸ್ಥಾನ ಕೇಳಿದ್ದರೆ ನಾನು ಮೆಚ್ಚಿಕೊಳ್ಳುತ್ತಿದೆ. ಅವರೇ ಕೇಳುತ್ತಿದ್ದಾರೆ, ಇದು ನಗಪಾಟಲಿಗೆ ವಿಚಾರ ಎಂದು ಅವರು ಟೀಕಿಸಿದರು.
ಕಾಂಗ್ರೆಸ್ ಸರ್ಕಾರ ಬಿದ್ದು ಅಲ್ಲಿನ ಯಾವುದೇ ಅಜಿತ್ ಪವಾರ್ ಬಿಜೆಪಿ ಜೊತೆ ಬಂದರೆ ನಾವು ಸೇರಿಸಿಕೊಳ್ಳುತ್ತೇವೆ. ಆದರೆ, ಆಗ ಬಂದ ಅಜಿತ್ ಪವಾರ್ ಗೆ ಸಿಎಂ ಸ್ಥಾನ ಕೊಡುವುದಿಲ್ಲ. ನಾವು ಎಂಥೆಂಥವರನ್ನೋ ಜೀರ್ಣಿಸಿಕೊಂಡಿದ್ದೇವೆ. ಜೀರ್ಣವಾದರೆ ಹೊಟ್ಟೆಯಲ್ಲಿ ಇಟ್ಟುಕೊಳ್ಳುತ್ತೇವೆ. ಇಲ್ಲವಾದರೆ ವಾಂತಿ ಮಾಡಿ ಹೊರಹಾಕುತ್ತೇವೆ. ಬಂಗರಾಪ್ಪ ಅಂತಹವರನ್ನೇ ಪಕ್ಷಕ್ಕೆ ಸೇರಿಸಿಕೊಂಡವರು ನಾವು. ಕೆಲವರು ಬಂದರು ಹೋದರು. ಕೆಲವರು ಇಲ್ಲೇ ಈದ್ದು ಒಳ್ಳೆಯವರಾಗಿ ಪಕ್ಷ ಕಟ್ಟುತ್ತಿದ್ದಾರೆ ಎಂದು ಅವರು ತಿಳಿಸಿದರು.
ನಾವು ಹೆಮ್ಮೆಯಿಂದ ಹೇಳಿಕೊಳ್ತಿವಿ ನಮ್ಮ ನಾಯಕ ಮೋದಿ ಅಂತಾ: ಕೆ.ಎಸ್.ಈಶ್ವರಪ್ಪ
ಸಿಎಂ- ಡಿಸಿಎಂ ಸಮನ್ವಯತೇ ಇಲ್ಲ: ಸಿದ್ದರಾಮಯ್ಯ ಪೂರ್ವವಾದರೆ, ಡಿ.ಕೆ. ಶಿವಕುಮಾರ್ ಪಶ್ಚಿಮ. ಇವರಿಬ್ಬರ ಕಥೆಯೇ ಹೀಗಾದರೆ ಉಳಿದ ಸಚಿವರ ಕಥೆ ಏನಾಗಿರಬೇಡ? ಕಾಂತರಾಜ್ ಆಯೋಗದ ವರದಿಯನ್ನ ಒಪ್ಪಿಕೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ವರದಿ ಒಪ್ಪಿಕೊಳ್ಳುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳುತ್ತಾರೆ. ಸರ್ಕಾರ ನಂಬರ್ ಒನ್, ನಂಬರ್ ಟು ನಡುವೆಯೇ ಸಮನ್ವಯತೇ ಇಲ್ಲ ಎಂದು ಅವರು ಆರೋಪಿಸಿದರು.