ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಶಿಥಿಲಗೊಳಿಸುವುದು ಅವರಪ್ಪನಿಗೂ ಸಾಧ್ಯವಾಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಪರೋಕ್ಷವಾಗಿ ಮಾಜಿ ಸಂಸದ ಎಂ. ವೀರಪ್ಪ ಮೊಯ್ಲಿ ವಾಗ್ದಾಳಿ ನಡೆಸಿದರು.
ಚಿಕ್ಕಬಳ್ಳಾಪುರ (ಜು.25) : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಶಿಥಿಲಗೊಳಿಸುವುದು ಅವರಪ್ಪನಿಗೂ ಸಾಧ್ಯವಾಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಪರೋಕ್ಷವಾಗಿ ಮಾಜಿ ಸಂಸದ ಎಂ. ವೀರಪ್ಪ ಮೊಯ್ಲಿ ವಾಗ್ದಾಳಿ ನಡೆಸಿದರು.
ನಗರದ ಉತ್ತರಬಡಾವಣೆಯ ತಮ್ಮ ಗೃಹ ಕಚೇರಿಯಲ್ಲಿ ಮಂಗಳವಾರ ಪಕ್ಷ ಸಂಘಟನೆಗಾಗಿ ಕರೆದಿದ್ದ ಚಿಕ್ಕಬಳ್ಳಾಪುರ ಲೋಕಸಭಾ ವ್ಯಾಪ್ತಿಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಯುವ ಜಿಲ್ಲಾಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳು, ಎನ್‌ಎಸ್‌ಯುಐ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಭೆಯ ನಂತರ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.
ಕೇಂದ್ರ ಸರ್ಕಾರಕ್ಕೆ ಬಡವರ ಹಸಿವಿನ ಬೆಲೆ ಗೊತ್ತಿಲ್ಲ: ವೀರಪ್ಪ ಮೊಯ್ಲಿ
ರಾಜ್ಯ ಸರ್ಕಾರ ಸುಭದ್ರ
ರಾಜ್ಯ ಸರ್ಕಾರ ಭದ್ರವಾಗಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah CM) ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(DK Shivakumar DCM) ನೇತೃತ್ವದ ಸರ್ಕಾರಕ್ಕೆ 136 ಶಾಸಕರು ಬೆಂಬಲ ಕೊಟ್ಟಿದ್ದಾರೆ. ಜೆಡಿಎಸ್‌ನವರು ಕಾಂಗ್ರೆಸ್ ಎಂಬ ಮೀನಿಗೆ ಬಲೆ ಬೀಸಿ ಕುಳಿತಿದ್ದಾರೆ. ಅವರ ಬಲೆಗೆ ಯಾವ ಮೀನು ಬೀಳುವುದಿಲ್ಲ. ಅವರ ಬಲೆ ತೂತು ಬಿದ್ದಿದೆ. ಹೀಗಾಗಿ ಮೀನು ಸಿಗುವುದಿಲ್ಲ. ಮೊದಲು ಅವರು ಬಲೆಯನ್ನು ರೆಡಿ ಮಾಡಿಕೊಳ್ಳಲಿ. ಬಳಿಕ ಮೀನು ಹಿಡಿಯಲು ಬರಲಿ ಎಂದು ಜೆಡಿಎಸ್ ಬಗ್ಗೆ ವ್ಯಂಗ್ಯವಾಡಿದರು.
ನೈತಿಕತೆ ಬಗ್ಗೆ ಮಾತು ಸಾಲದು, ನೈಸ್ ಸದನ ಸಮಿತಿ ವರದಿ ಬಗ್ಗೆ ಕ್ರಮ ಏಕಿಲ್ಲ? ಸಿದ್ದುಗೆ ದೇವೇಗೌಡ ಚಾಟಿ
ರಾಷ್ಟ್ರದಲ್ಲಿ ಜೆಡಿಎಸ್ ಪಕ್ಷದ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ(HD Devegowda) ಮತ್ತು ಅವರ ಪುತ್ರ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ(HD Kumaraswamy) ಅನಾಥರಾಗಿಬಿಟ್ಟಿದ್ದಾರೆ. ಅವರನ್ನು ವಿಪಕ್ಷಗಳ ಇಂಡಿಯಾ ಕಾರ್ಯಕ್ರಮಕ್ಕೂ ಯಾರೂ ಆಹ್ವಾನಿಸಿಲ್ಲ. ಆಡಳಿತ ಪಕ್ಷದ ಎನ್‌ಡಿಎ ಮೈತ್ರಿ ಕೂಟಕ್ಕೂ ಸಹ ಯಾರೂ ಕರೆದಿಲ್ಲ. ಇದರಿಂದಲೇ ಗೊತ್ತಾಗುತ್ತದೆ ರಾಷ್ಟ್ರ ರಾಜಕಾರಣಕ್ಕೆ ಇವರ ಅಗತ್ಯ ಇಲ್ಲವೆಂದು. ಅದಕ್ಕೆ ಆಡಳಿತ ಮತ್ತು ಪ್ರತಿಪಕ್ಷಗಳ ಎರಡು ಗುಂಪುಗಳು ಇವರನ್ನು ಯಾವುದೇ ಸಭೆಗಳಿಗೆ ಕರೆದಿಲ್ಲ ಎಂದು ಹೇಳಿದರು.