ಬಿಜೆಪಿಗರಿಗೆ ಅಧಿಕಾರದ ಹಪಾಹಪಿ ಜಾಸ್ತಿ; ಅಡ್ಡದಾರಿ ಹಿಡಿದಾದ್ರೂ ಬರ್ತಾರೆ: ಸಚಿವ ತಿಮ್ಮಾಪುರ ಕಿಡಿ

By Kannadaprabha News  |  First Published Jul 25, 2023, 8:15 PM IST

ಬಿಜೆಪಿಯವರಿಗೆ ಜನರ ಆಶೀರ್ವಾದ ಇಲ್ಲವೆಂದಾಗಲೂ ಅವರಿಗೆ ಅ​ಧಿಕಾರದ ಹಪಾಹಪಿ ಜಾಸ್ತಿಯಾಗಿದೆ. ಬಿಜೆಪಿಯವರು ಜನರ ಆಶೀರ್ವಾದದಿಂದ ಬರುವವರಲ್ಲ. ಅ​ಧಿಕಾರದ ದಾಹದಿಂದ ಜನ ತಿರಸ್ಕರಿಸಿದ್ರೂ ಪ್ರಯತ್ನ ನಡೆದಿರಬಹುದು ಎಂದು ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ ಹೇಳಿದರು.


ಬಾಗಲಕೋಟೆ (ಜು.25) :  ಬಿಜೆಪಿಯವರಿಗೆ ಜನರ ಆಶೀರ್ವಾದ ಇಲ್ಲವೆಂದಾಗಲೂ ಅವರಿಗೆ ಅ​ಧಿಕಾರದ ಹಪಾಹಪಿ ಜಾಸ್ತಿಯಾಗಿದೆ. ಬಿಜೆಪಿಯವರು ಜನರ ಆಶೀರ್ವಾದದಿಂದ ಬರುವವರಲ್ಲ. ಅ​ಧಿಕಾರದ ದಾಹದಿಂದ ಜನ ತಿರಸ್ಕರಿಸಿದ್ರೂ ಪ್ರಯತ್ನ ನಡೆದಿರಬಹುದು ಎಂದು ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ ಹೇಳಿದರು.

ಬಾಗಲಕೋಟೆಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಂಗಾಪುರದಲ್ಲಿ ಆಪರೇಷನ್‌ ಸರ್ಕಾರ ಕೆಡವಲು ಪ್ಲಾನ್‌ ಆಗುತ್ತಿದೆ ಎಂಬ ಡಿಕೆಶಿ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನನಗೆ ಆ ಬಗ್ಗೆ ಗೊತ್ತಿಲ್ಲ. ನಾನು ಮುಧೋಳದಲ್ಲಿದ್ದೇನೆ. ನಾನಿನ್ನೂ ಅಲ್ಲಿಯ ವಿಷಯಗಳನ್ನು ತಿಳಿದುಕೊಂಡಿಲ್ಲ. ಆದರೆ, ಬಿಜೆಪಿಗರು ಯಾವಾಗಲೂ ಅಡ್ಡದಾರಿಯ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಹೀಗಾಗಿ ಪ್ರಯತ್ನ ನಡೆದಿರಬಹುದು. ಆದರೆ, ನನಗೆ ಗೊತ್ತಿಲ್ಲ ಎಂದರು.

Tap to resize

Latest Videos

undefined

ಬಡವರ ವಿರೋಧಿ ಬಿಜೆಪಿಗೆ ಬಡವರ ಶಾಪ ತಟ್ಟುತ್ತೆ: ಸಚಿವ ತಿಮ್ಮಾಪುರ

ವರ್ಗಾವಣೆ ಕುರಿತಾಗಿ ಸರ್ಕಾರದ ವಿರುದ್ಧವಾಗಿ ಬಿಜೆಪಿ ಆರೋಪದ ಕುರಿತಾಗಿ ಪ್ರತಿಕ್ರಿಯಿಸಿದ ಸಚಿವ ತಿಮ್ಮಾಪೂರ, ನಮ್ಮಲ್ಲಿ ಯಾವುದೇ ವರ್ಗಾವಣೆ ದಂಧೆ ನಡೆದಿಲ್ಲ. ಅದು ಬಿಜೆಪಿ ಅವರ ಕಾಲದಲ್ಲಿ ನಡೆದಿರಬಹುದು. ಈ ಬಗ್ಗೆ ನಮ್ಮ ಶಾಸಕರೇ ಹೇಳಿದ್ದರೆ ಆ ಬಗ್ಗೆ ಕೇಳಿ ಮಾತನಾಡಿ ಸರಿ ಮಾಡುತ್ತೇವೆ ಎಂದರು.

ಸಚಿವರ ಬಗ್ಗೆ ಕೆಲ ಕಾಂಗ್ರೆಸ್‌ ಶಾಸಕರು ಅಸಮಾಧಾನ ವ್ಯಕ್ತಪಡಿಸಿ ದೂರು ನೀಡುವ ವಿಚಾರಕ್ಕೆ ಉತ್ತರಿಸಿದ ಅವರು, ದೂರು ಕೊಡಲಿ ಅದರಲ್ಲಿ ತಪ್ಪೇನಿದೆ. ಇಂತಹ ಅಡಚಣೆ ಇದ್ದಾಗ ಮುಖ್ಯಮಂತ್ರಿಗಳ ಹತ್ತಿರ ಹೋಗುವುದು ಸಹಜ. ಇದನ್ನು ಮುಖ್ಯಮಂತ್ರಿಗಳು ಸರಿ ಮಾಡುತ್ತಾರೆ ಎಂದು ಹೇಳಿದರು.

ಬಿ.ಕೆ.ಹರಿಪ್ರಸಾದ್ ಹೇಳಿಕೆಯ ಡ್ಯಾಮೇಜ್ ಕಂಟ್ರೊಲ್‌ಗೆ ಸಿಂಗಪುರ ಕಥೆ ಆರಂಭ; ಮಾಜಿ ಸಿಎಂ ಬೊಮ್ಮಾಯಿ ಟೀಕೆ

ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವ ಪ್ರಸಂಗಗಳು ವರದಿಯಾಗಿವೆ. ಇದರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ. ಚಹಾದ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು. ಈ ಬಗ್ಗೆ ಅಧಿ​ಕಾರಿಗಳು ನಿಗಾ ವಹಿಸಬೇಕು ಎಂದು ಸಚಿವರು ತಿಳಿಸಿದರು.

click me!