ಕಾಂಗ್ರೆಸ್‌ ಸರ್ಕಾರದಿಂದ ಶಾಸಕರಿಗೆ ವಿದೇಶ ಪ್ರವಾಸದ ಭಾಗ್ಯ: ಸುಳಿವು ಕೊಟ್ಟ ಯು.ಟಿ. ಖಾದರ್

By Sathish Kumar KHFirst Published Aug 8, 2023, 3:02 PM IST
Highlights

ಕರ್ನಾಟಕ ಶಾಸಕರನ್ನು ವಿದೇಶ ಪ್ರವಾಸಕ್ಕೆ ಕಳುಹಿಸಲು ಕಾಂಗ್ರೆಸ್‌ ಸರ್ಕಾರ ಚಿಂತನೆ ಮಾಡಿದೆ. ಈ ಬಗ್ಗೆ ಸ್ವತಃ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್‌ ಸುಳಿವು ನೀಡಿದ್ದಾರೆ. 

ಬೆಂಗಳೂರು (ಆ.08): ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶಾಸಕರಿಗೆ ತಕ್ಕಂತೆ ಸೌಲಭ್ಯವನ್ನು ಕಲ್ಪಿಸಲಾಗಿದೆ. ಒಂದು ವೇಳೆ ಶಾಸಕರು ಬಯಸಿದಲ್ಲಿ ಅವರನ್ನು ವಿದೇಶ ಪ್ರವಾಸಕ್ಕೆ ಕಳುಹಿಸಿಕೊಡಲಾಗುವುದು ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್‌ ಸುಳಿವು ನೀಡಿದ್ದಾರೆ.

ವಿಧಾನಸಭಾ ಸ್ಪೀಕರ್‌ ಅವರೊಂದಿಗೆ ಏರ್ಪಡಿಸಲಾಗಿದ್ದ ಪ್ರೆಸ್‌ಕ್ಲಬ್‌ ಪತ್ರಿಕಾ ಸಂವಾದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಂದು ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ವಿಧಾನಸಭಾ ಸ್ಪೀಕರ್‌ ಮೇಲೆ ವಿರೋಧ ಪಕ್ಷಗಳಿಂದ ಅನುಮಾನ ಬರುವುದು ಸಹಜವಾಗಿರುತ್ತದೆ. ಅದೇ ರೀತಿ ವಿಧಾನಸಭಾ ಕಲಾಪದ ವೇಳೆ ಅನುಮಾನಗಳು ಬರುವುದು ಸಹಜವಾಗಿರುತ್ತದೆ. ಹೀಗಿದ್ದರೂ ಸದನ ನಡೆಸಿಕೊಂಡು ಹೋಗುವುದು ಸ್ಪೀಕರ್ ಜವಾಬ್ದಾರಿ ಆಗಿರುತ್ತದೆ. ಇನ್ನು ಎಲ್ಲ ಶಾಸಕರ ನಿರೀಕ್ಷೆ ತಕ್ಕಂತೆ ಸೌಲಭ್ಯ ಕೊಡಲಾಗಿದೆ. ಅವರು ಬಯಸಿದರೆ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

Latest Videos

ಗೃಹಲಕ್ಷ್ಮಿ ಯೋಜನೆ ಉದ್ಘಾಟನೆಗೆ, ಬಿಬಿಎಂಪಿ ಅಧಿಕಾರಿಗಳು ತಲಾ 2000 ಜನರನ್ನು ಕರೆತರಬೇಕು; ಎನ್‌.ಆರ್. ರಮೇಶ್‌ ಆರೋಪ

ಕಾಗದ ಸಾಕ್ಷ್ಯದಿಂದ, ಪೆನ್‌ಡ್ರೈವ್‌ ಸಾಕ್ಷ್ಯಕ್ಕೆ ಬದಲು: ಈ ಮೊದಲು ವಿಧಾನಸಭಾ ಸ್ಪೀಕರ್‌ಗೆ ಶಾಸಕರಿಂದ ಕಾಗದ ಪತ್ರ ಸಲ್ಲಿಕೆ ಆಗ್ತಾ ಇತ್ತು. ಈಗ ಪೆನ್ ಡ್ರೈವ್‌, ಸಿಡಿಗಳು ಸಾಕ್ಷಾಧಾರವಾಗಿ ಸಲ್ಲಿಕೆಯಾಗ್ತಿವೆ. ಆದರೆ, ನಾವು ಯಾವುದೇ ಆರೋಪ ಕುರಿತು ತಕ್ಷಣವೇ ರೂಲಿಂಗ್ ಕೊಡಲ್ಲ. ಎಲ್ಲವನ್ನೂ ವಿವಿಧ ಆಯಾಮಗಳಿಂದ ಪರಿಶೀಲನೆ ಮಾಡ್ತೇವೆ. ನಂತರ, ಈ ಬಗ್ಗೆ ಕ್ರಮವನ್ನು ಕ್ರಮ ಕೈಗೊಳ್ಳಲಾಗುತ್ತದೆ. ಜೊತೆಗೆ, ಈಗ ಸಚಿವಾಲಯದಲ್ಲಿ ಒಂದಷ್ಟು ತಾಂತ್ರಿಕವಾಗಿ ಬದಲಾವಣೆ ಮಾಡ್ತಿದ್ದೇವೆ. ಜೊತೆಗೆ, ಶಾಸಕರ ವಿವಿಧ ಮಾದರಿಯ ದೂರುಗಳನ್ನು ಸಮರ್ಪಕವಾಗಿ ಪರಿಶೀಲನೆ ಮಾಡಲು ನಾವು ಕೂಡ ಬದಲಾಗುತ್ತಿದ್ದೇವೆ ಎಂದು ತಿಳಿಸಿದರು.

ನಾನು ಎಡ ಮತ್ತು ಬಲ ಅಲ್ಲ: ಶಾಸಕರ ತರಬೇತಿ ಕಾರ್ಯಾಗಾರಕ್ಕೆ ಅತಿಥಿಗಳ ಆಹ್ವಾನ ವಿವಾದವಾಗಿತ್ತು. ಆದರೆ, ನಾನು ಯಾವುದೇ ವಿವಾದ ಮುಂದುವರಿಸಿಕೊಂಡು ಹೋಗಲ್ಲ. ರಾಜ್ಯದಲ್ಲಿ ನಾನು ಯಾವುದೇ ಎಡ ಮತ್ತು ಬಲ ಪಂಥಕ್ಕೆ ಸೇರಿದವರು ಅಥವಾ ಬೆಂಬಲಿಸುವವನು ಅಲ್ಲ. ಯಾವಾಗಲೂ ಕಷ್ಟದಲ್ಲಿರುವವರ ಪರವಾಗಿ ಇರುವವನು ಆಗಿದ್ದೇನೆ. ಕಷ್ಟದಲ್ಲಿದ್ದವರ ಕೈಹಿಡಿದು ಮುಂದಕ್ಕೆ ಹೋಗುವವನು ಆಗಿದ್ದೇನೆ ಎಂದು ಮಾಹಿತಿ ಹೇಳಿದರು.

No Trust Debate: ವಿಪಿ ಸಿಂಗ್‌, ಎಚ್‌ಡಿ ದೇವೇಗೌಡ, ವಾಜಪೇಯಿ 'ಅವಿಶ್ವಾಸ'ಕ್ಕೆ ಅಧಿಕಾರ ಕಳೆದುಕೊಂಡ ನಾಯಕರು!

ಶಾಸಕರ ಅಮಾನತಿಗೆ ಸಿಎಂ ಸುಳಿವು ನೀಡಿಲ್ಲ:  ಇನ್ನು ಶಾಸಕರ ಅಮಾನತು ವಿಚಾರ ಈಗಾಗಲೇ ಮುಗಿದು ಹೋಗಿರುವ ವಿಷಯವಾಗಿದೆ. ಶಾಸಕರನ್ನು ಅಮಾನತು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ಸೂಚನೆ ಅಥವಾ ಸನ್ನೆಯನ್ನು ನೀಡಿಲ್ಲ. ಇದನ್ನು ನಾನೇ ತಿರ್ಮಾನ ಮಾಡಿದ್ದು. ಎಲ್ಲ ಸಂದರ್ಭದಲ್ಲಿಯೂ ನನಗೆ ಸಂವಿಧಾನವೇ ಮುಖ್ಯವಾಗುತ್ತದೆ. ನಮ್ಮ ಮತ್ತು ಶಾಸಕರ ಜಗಳ ಅಧಿವೇಶನ ಮುಗಿಯುವ ತನಕ ಮಾತ್ರ ಆಗಿರುತ್ತದೆ. ಈಗ ಪರಿಸ್ಥಿತಿ ತಿಳಿಯಾಗಿದೆಯೋ ಇಲ್ಲವೋ ಮುಂದಿನ ಅಧಿವೇಶನ ಸಂದರ್ಭದಲ್ಲಿ ಗೊತ್ತಾಗಲಿದೆ ಎಂದರು. 

click me!