ಸರ್ಕಾರದ ವಿರುದ್ಧ ಮತ್ತೆ ಸಿಡಿದೆದ್ದ ರಮೇಶ್​ ಜಾರಕಿಹೊಳಿ ರಾಜೀನಾಮೆ?

By Web DeskFirst Published Dec 23, 2018, 2:03 PM IST
Highlights

ಸಂಪುಟದಿಂದ ತಮ್ಮನ್ನು ಕೈಬಿಟ್ಟಿದ್ದರಿಂದ ಸಿಟ್ಟಿಗೆದ್ದಿರುವ ರಮೇಶ್ ಜಾರಕಿಹೊಳಿ ಮೈತ್ರಿ ಸರ್ಕಾರಕ್ಕೆ ಶಾಕ್ ನೀಡಲು ಮುಂದಾಗಿದ್ದಾರೆ. 

ಬೆಂಗಳೂರು, [ಡಿ.23]​: ಕಳೆದ ಕೆಲ ತಿಂಗಳಿಂದ ಸಚಿವ ರಮೇಶ್​ ಜಾರಕಿಹೊಳಿ ಮತ್ತು ಮೈತ್ರಿ ಸರ್ಕಾರದ ನಡುವೆ ಇದ್ದ ಮುಸುಕಿನ ಗುದ್ದಾಟ ಮತ್ತೆ ಮುನ್ನಲೆಗೆ ಬರುವ ಸಾಧ್ಯತೆ ದಟ್ಟವಾಗಿದೆ. 

ಸಂಪುಟದಿಂದ ತಮ್ಮನ್ನು ಕೈಬಿಟ್ಟಿದ್ದರಿಂದ ಸಿಟ್ಟಿಗೆದ್ದಿರುವ ರಮೇಶ್​ ಜಾರಕಿಹೊಳಿ ಯಾರ ಸಂಪರ್ಕಕ್ಕೆ ಸಿಗದೇ ಅಸಮಾಧಾನ ಹೊರಹಾಕಿದ್ದು, ರಾಜೀನಾಮೆ ನೀಡುವ ಕುರಿತಾಗಿ ಆಪ್ತರಲ್ಲಿ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 

ರಮೇಶ್ ಜಾರಕಿಹೊಳಿ, ಶಂಕರ್‌ ಮಂತ್ರಿಗಿರಿ ಕಿತ್ತುಕೊಂಡಿದ್ಯಾಕೆ? ಕಾಂಗ್ರೆಸ್‌ ಉತ್ತರವೇನು?

ಇವತ್ತೇ ರಾಜೀನಾಮೆ ಕೊಡಬಹುದು, ನಾಳೆ ಅಥವಾ ನಾಡಿದ್ದು ಕೊಡಬಹುದು. ಒಟ್ಟಿನಲ್ಲಿ ನಾನು ರಾಜೀನಾಮೆ ನೀಡುವುದಂತೂ ನಿಶ್ಚಿತ ಎಂದು ರಮೇಶ್ ಜಾರಕಿಹೊಳಿ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ರಮೇಶ್ ಜಾರಕಿಹೊಳಿ ಔಟ್ ..? ಮುಂದಿನ ನಡೆ ಏನು..?

ಮೊದಲಿನಿಂದಲೂ ಮೈತ್ರಿ ಸರ್ಕಾರ ಜೊತೆಗೆ ರಮೇಶ್ ಜಾರಕಿಹೊಳಿ ಅಂತರ ಕಾಯ್ದುಕೊಂಡಿದ್ದಾರೆ. ಈಗ ಸಚಿವ ಸ್ಥಾನ ಕಿತ್ತುಕೊಂಡಿದ್ದರಿಂದ ಮತ್ತಷ್ಟು ಪಿತ್ತ ನೆತ್ತಿಗೇರಿಸಿಕೊಂಡಿರುವ ರಮೇಶ್ ಜಾರಕಿಹೊಳಿ ಸರ್ಕಾರಕ್ಕೆ ಆಘಾತ ನೀಡಲು ಮುಂದಾಗಿದ್ದಾರೆ.

 ಸಂಪುಟ ವಿಸ್ತರಣೆಯಲ್ಲಿ ರಮೇಶ್​ ಜಾರಕಿಹೊಳಿ ಮತ್ತು ಶಂಕರ್​ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟು 8 ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿತ್ತು.

click me!