ಕಾಂಗ್ರೆಸ್ ನ ಐದನೇ ಪಟ್ಟಿ ರಿಲೀಸ್ ಆಗಿದ್ದು, ಈಗ ಕೇವಲ 4 ಜನರ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪುಲಿಕೇಶಿನಗರ ಟಿಕೆಟ್ ಅನ್ನು ಮುನಿಯಪ್ಪ ಆಪ್ತ ಎ.ಸಿ. ಶ್ರೀನಿವಾಸ್ ಅವರಿಗೆ ಘೋಷಣೆ ಮಾಡಲಾಗಿದೆ.
ಬೆಂಗಳೂರು (ಏ.19): ಕಾಂಗ್ರೆಸ್ ನ ಐದನೇ ಪಟ್ಟಿ ರಿಲೀಸ್ ಆಗಿದ್ದು, ಈಗ ಕೇವಲ 4 ಜನರ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪುಲಿಕೇಶಿನಗರ ಟಿಕೆಟ್ ಅನ್ನು ಮುನಿಯಪ್ಪ ಆಪ್ತ ಎ.ಸಿ. ಶ್ರೀನಿವಾಸ್ ಅವರಿಗೆ ಘೋಷಣೆ ಮಾಡಲಾಗಿದೆ. ಇನ್ನು ಒಟ್ಟು 5 ಕ್ಷೇತ್ರಗಳ ಟಿಕೆಟ್ ಅನ್ನು ಘೋಷಣೆ ಮಾಡಲಾಗಿದೆ.
ಶಿಗ್ಗಾವಿ - ಯಾಸಿರ್ ಅಹಮದ್ ಖಾನ್ ಪಠಾಣ್ (ಮೊಹಮ್ಮದ್ ಸವಣೂರು)
ಕಾಂಗ್ರೆಸ್ 4ನೇ ಪಟ್ಟಿ ಬಿಡುಗಡೆ: ಶೆಟ್ಟರ್‌ಗೆ ಟಿಕೆಟ್- ಪುಲಿಕೇಶಿನಗರ ಸೇರಿ 8 ಕ್ಷೇತ್ರ ಬಾಕಿ
ಇನ್ನೂ ಐದು ಕ್ಷೇತ್ರಗಳ ಟಿಕೆಟ್ ಬಾಕಿ: ಕರ್ನಾಟಕ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು, ನಾಮಪತ್ರ ಸಲ್ಲಿಕೆಗೆ ಇನ್ನೂ ಒಂದು ದಿನ ಮಾತ್ರ ಬಾಕಿಯಿದೆ. ಈಗ ಕಾಂಗ್ರೆಸ್‌ನಿಂದ 4 ಜನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್ ಈವರೆಗೆ 224 ವಿಧಾನಸಭಾ ಕ್ಷೇತ್ರಗಳ ಪೈಕಿ 219 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಬಾಕಿ ಇನ್ನೂ 5 ಕ್ಷೇತ್ರಗಳ ಟಿಕೆಟ್ ಬಾಕಿ ಉಳಿಸಿಕೊಂಡಿದ್ದು, ಇಂದು ತಡರಾತ್ರಿಯೊಳಗೆ ಪಟ್ಟಿ ಬಿಡುಗಡೆ ಆಗುವ ಸಾಧ್ಯತೆಯಿದೆ. ನಾಳೆ ಅಮವಾಸ್ಯೆ ಇದ್ದು, ನಾಮಪತ್ರ ಸಲ್ಲಿಕೆಗೂ ಕೊನೆಯ ದಿನವಾಗಿದೆ.
ಹಾಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿಗೆ ಟಿಕೆಟ್ ಇಲ್ಲ: ಹಾಲಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಗೆ ಪುಲಕೇಶಿನಗರ ಕ್ಷೇತ್ರದ ಟಿಕೆಟ್ ನೀಡಿಲ್ಲ. ಕಾಂಗ್ರೆಸ್ ನಾಯಕರೇ ನನಗೆ ಟಿಕೆಟ್ ತಪ್ಪಿಸುತ್ತಿದ್ದಾರೆ ಎಂದು ಬಹಿರಂಗವಾಗಿ ಕಿಡಿಕಾರಿದ್ದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಗೆ ಟಿಕೆಟ್ ಮಿಸ್ ಆಗಿದೆ. ಇನ್ನು ನಾನು ಸ್ವತಂತ್ರವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ತೋರಿಸುತ್ತೇನೆ ಎಂದು ಗುಡುಗಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್ ನೀಡದೇ ಕೈಬಿಡಲಾಗಿದೆ. ಇನ್ನು ಪುಲಕೇಶಿನಗರದಲ್ಲಿ ಕಾಂಗ್ರೆಸ್‌ನ ಮುಖಂಡ ಕೆ.ಹೆಚ್. ಮುನಿಯಪ್ಪ ಅವರ ಶಿಷ್ಯ ಎ.ಸಿ.ಶ್ರೀನಿವಾಸ್ ಗೆ ಟಿಕೆಟ್ ನೀಡಲಾಗಿದೆ. ಮುನಿಯಪ್ಪ ಆಪ್ತನಿಗೆ ಟಿಕೆಟ್ ಕೊಡಿಸುವ ಮೂಲಕ ಕಾಂಗ್ರೆಸ್ ಹೊಸ ರಣತಂತ್ರವನ್ನು ಹೆಣೆದಿದೆ.
ಮನೆಗೆ ಬೆಂಕಿ ಬಿದ್ದಾಗ ಸುಮ್ಮನಿದ್ದರೂ ಟಿಕೆಟ್ ಸಿಗಲಿಲ್ಲ: ಕಾಂಗ್ರೆಸ್‌ನ 5ನೇ ಪಟ್ಟಿಯಲ್ಲೂ ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಹೆಸರು ಇಲ್ಲದ ಹಿನ್ನೆಲೆಯಲ್ಲಿ ಇಂದು ಭೋವಿ ಸಮಾಜದ ಮುಖಂಡರು ಕಾಂಗ್ರೆಸ್ ಮುಖಂಡ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅಖಂಡ ಶ್ರೀನಿವಾಸ್ ಮೂರ್ತಿ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದರು. ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಾಟೆ ಪ್ರಕರಣದಲ್ಲಿ ಅಖಂಡ ಶ್ರೀನಿವಾಸ್ ಮೂರ್ತಿಯವರ ಮನೆಗೆ ಹಾಗೂ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲಾಗಿತ್ತು. ಈ ವೇಳೆ ಕಾಂಗ್ರೆಸ್ ನಾಯಕರು ಯಾರು ಅಖಂಡ ಶ್ರೀನಿವಾಸ್ ಮೂರ್ತಿ ಪರ ಮಾತನಾಡದೇ ಮೌನಕ್ಕೆ ಜಾರಿದ್ದರು. ಶ್ರೀನಿವಾಸ್ ಕೂಡ ತಮ್ಮ ವೋಟ್ ಬ್ಯಾಂಕ್‌ಗೆ ಹಾನಿಯಾಗುತ್ತದೆ ಎಂದು ಮೌನವಾಗಿದ್ದರು. ಆದರೆ ಈಗ ಕಾಂಗ್ರೆಸ್ ಅವರಿಗೆ ಟಿಕೆಟ್ ನೀಡದಿರುವುದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ಬಾಕಿ ಉಳಿಸಿಕೊಂಡಿರುವ ಕ್ಷೇತ್ರಗಳು ಇಲ್ಲಿವೆ:
ಕಾಂಗ್ರೆಸ್‌ನ 40 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ: ರಮ್ಯಾ, ಜಗದೀಶ್ ಶೆಟ್ಟರ್‌ಗೂ ಸ್ಥಾನ
ಒಂದೇ ದಿನದಲ್ಲಿ ಅಭ್ಯರ್ಥಿ ಬದಲು: ಶಿಗ್ಗಾಂವಿ ಕ್ಷೇತ್ರಕ್ಕೆ ಒಂದೇ ದಿನದಲ್ಲಿ ಬದಲಾದ ಕೈ ಅಭ್ಯರ್ಥಿ. ಮೊಹಮ್ಮದ್ ಯೂಸುಫ್ ಸವಣೂರ ಬದಲಾಯಿಸಿ ಯಾಸೀರ್ ಖಾನ್ ಪಠಾಣಗೆ ಟಿಕೆಟ್ ನೀಡಲಾಗಿದೆ. ನಿನ್ನೆ ರಾತ್ರಿಯಷ್ಟೇ ಶಿಗ್ಗಾಂವಿ ಕ್ಷೇತ್ರಕ್ಕೆ ಯೂಸುಫ್ ಸವಣೂರ ಹೆಸರು ಘೋಷಿಸಿದ್ದ ಪಕ್ಷ ಇಂದು ಯಾಸೀರ್ ಖಾನ್ ಗೆ ಟಿಕೆಟ್ ಕೊಟ್ಟಿದೆ. ಆ ಮೂಲಕ ಸಿಎಂ ವಿರುದ್ದ ಯಾರನ್ನು ಕಣಕ್ಕಿಳಿಸಬೇಕು ಎಂಬುದರ ಬಗ್ಗೆಯೇ ಗೊಂದಲಕ್ಕೊಳಗಾದ ಕೈ ನಾಯಕರು. ಸ್ಥಳೀಯ ಆಕಾಂಕ್ಷಿ ಕಡೆಗಣಿಸಿದ್ದರಿಂದ ಅಸಮಾಧಾನಗೊಂಡಿದ್ದ ಕ್ಷೇತ್ರದ ಅಲ್ಪಸಂಖ್ಯಾತರನ್ನು ಈಗ ಕಾಂಗ್ರೆಸ್ ತಣಿಸುವ ಕಾರ್ಯವನ್ನು ಮಾಡಿದೆ.