ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ 40 ಜನರನ್ನು ಒಳಗೊಂಡ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಜಗದೀಶ್ ಶೆಟ್ಟರ್, ಮಾಜಿ ಸಂಸದೆ ರಮ್ಯಾ, ಸಾಧುಕೋಕಿಲಾ ಹೆಸರಿದೆ.
ಬೆಂಗಳೂರು (ಏ.19): ಕರ್ನಾಟಕ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ನಾಳೆ ಕೊನೇ ದಿನವಾಗಿದ್ದು, ಅಬ್ಬರದ ಪ್ರಚಾರ ಆರಂಭವಾಗಲಿದೆ. ಹೀಗಾಗಿ, ಬೆಳಗ್ಗೆ ಬಿಜೆಪಿಯಿಂದ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಕಾಂಗ್ರೆಸ್ ಕೂಡ 40 ಜನರನ್ನು ಒಳಗೊಂಡ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಅಧಿಕಾರಕ್ಕೆ ಬರಬೇಕು ಎಂದು ಕಾಂಗ್ರೆಸ್ ಭರ್ಜರಿ ಸಿದ್ಧತೆಯಲ್ಲಿ ತೊಡಗಿದ್ದು, ಈಗಾಗಲೇ ನಾಲ್ಕು ಗ್ಯಾರಂಟಿಗಳನ್ನು ಬಿಡುಗಡೆ ಮಾಡಿದೆ. ಜೊತೆಗೆ 216 ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಿಕೊಂಡಿದೆ. ಈಗ 40 ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಗೊಂಡ ಜಗದೀಶ್ ಶೆಟ್ಟರ್‌ಗೂ ಅವಕಾಶ ನೀಡಲಾಗಿದೆ. ಉಳಿದಂತೆ ಸಿನಿಮಾ ಕ್ಷೇತ್ರದ ರಮ್ಯಾ, ಸಾಧುಕೋಕಿಲಾ, ಉಮಾಶ್ರೀ ಕೂಡ ಸ್ಟಾರ್ ಕ್ಯಾಂಪೇನರ್ ಪಟ್ಟಿಯಲ್ಲಿದ್ದಾರೆ.
12 ಜೆಡಿಎಸ್ ಅಭ್ಯರ್ಥಿಗಳ ಬದಲಿಸಿದ ಕುಮಾರಣ್ಣ: ಇದು ಗೆಲುವಿನ ಸೂತ್ರವೇ?
ಕಾಂಗ್ರೆಸ್‌ನ 40 ಸ್ಟಾರ್ ಪ್ರಚಾರಕರು ಪಟ್ಟಿ ಇಲ್ಲಿದೆ ನೋಡಿ:
1.ಮಲ್ಲಿಕಾರ್ಜುನ ಖರ್ಗೆ
2.ಸೋನಿಯಾ ಗಾಂಧಿ
3.ರಾಹುಲ್ ಗಾಂಧಿ
4. ಪ್ರಿಯಾಂಕಾ ಗಾಂಧಿ
5. ಡಿ ಕೆ ಶಿವಕುಮಾರ್
6. ಸಿದ್ದರಾಮಯ್ಯ
7. ಕೆ ಸಿ ವೇಣುಗೋಪಾಲ್
8. ರಣದೀಪ್ ಸಿಂಗ್ ಸುರ್ಜೆವಾಲಾ
9. ಬಿ ಕೆ ಹರಿಪ್ರಸಾದ್
10. ಎಂ ಬಿ ಪಾಟೀಲ್
11. ಡಾ. ಜಿ ಪರಮೇಶ್ವರ್
12. ಎಚ್ ಕೆ ಮುನಿಯಪ್ಪ
13.ಜಯರಾಮ್ ರಮೇಶ್
14.ವೀರಪ್ಪ ಮೊಯ್ಲಿ
15.ರಾಮಲಿಂಗ ರೆಡ್ಡಿ
16. ಸತೀಶ್ ಜಾರಕಿಹೊಳಿ
17.ಜಗದೀಶ್ ಶೆಟ್ಟರ್
18. ಡಿ ಕೆ ಸುರೇಶ
19. ಜಿ ಸಿ ಚಂದ್ರಶೇಖರ್
20. ಸಯ್ಯದ್ ನಾಸೀರ್ ಹುಸೇನ್
21. ಜಮೀರ್ ಅಹ್ಮದ್
22. ಎಚ್ ಎಂ ರೇವಣ್ಣ
23.ಉಮಾಶ್ರೀ
24. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೊಟ್
25.ಛತ್ತೀಸ್ ಘಡ ಸಿಎಂ ಭೂಪೇಶ್ ಬಗೇಲ್
26.ಸುಖ್ವಿಂದರ್ ಸಿಂಗ್ ಸುಖು , ಹಿಮಾಚಲ ಸಿಎಂ
27.ಪೃಥ್ವಿರಾಜ್ ಚೌವ್ಹಾಣ್,ಮಾಜಿ ಸಿಎಂ
28.ಅಶೋಕ್ ಚವ್ಹಾಣ್
29.ಶಶಿತರೂರ್
30.ರೇವಂತ್ ರೆಡ್ಡಿ
31.ರಮೇಶ್ ಚೆನ್ನಿತಲಾ
32. ಬಿ ವಿ ಶ್ರೀನಿವಾಸ
33. ರಾಜ್ ಬಾಬರ್
34.ಮಹಮದ್ ಅಜರುದ್ದೀನ್
35.ರಮ್ಯಾ
36.ಕನ್ಹಯ್ಯ ಕುಮಾರ್
37.ಸಾಧುಕೊಕಿಲಾ
38.ಇಮ್ರಾನ್ ಪ್ರತಾಪ್ಗರಿ
39.ರೂಪ ಶಶಿಧರ್
40. ಪಿ ಚಿದಂಬರಂ
ಕಾಂಗ್ರೆಸ್ ಬಿಡುಗಡೆ ಮಾಡಿದ ಸ್ಟಾರ್ ಕ್ಯಾಂಪೇನರ್ ಪಟ್ಟಿಯಲ್ಲಿ ಎಐಸಿಸಿ ವರಿಷ್ಠರಾದ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೆಸರಿದೆ. ಇನ್ನು ಪ್ರಮುಖರ ಜೊತೆಗೆ,ಕೆ.ಎಚ್ ಮುನಿಯಪ್ಪ, ವೀರಪ್ಪ ಮೊಯ್ಲಿ, ಎಂಬಿ ಪಾಟೀಲ್, ಸತೀಶ್ ಜಾರಕಿಹೊಳಿ, ಬಿ ಕೆ ಹರಿಪ್ರಸಾದ್, ಡಿಕೆ ಸುರೇಶ್, ಎಚ್‌ಎಂ ರೇವಣ್ಣ, ಜಿ ಸಿ ಚಂದ್ರಶೇಖರ್ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಕನ್ನಯ್ಯಾ ಕುಮಾರ್, ಮೊಹಮದ್ ಅಜರುದ್ದೀನ್, ಇಮ್ರಾನ್ ಪ್ರತಾಪ್‌ಗರಿಗೂ ಕೂಡ ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದೆ.
ಜೆಡಿಎಸ್ 3ನೇ ಪಟ್ಟಿ ಬಿಡುಗಡೆ: ಆಯನೂರು ಮಂಜುನಾಥ್‌ಗೆ ಟಿಕೆಟ್- 59 ಅಭ್ಯರ್ಥಿಗಳು
ಏಪ್ರಿಲ್ 13 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ. ಏಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.