ದುರಹಂಕಾರ ಇನ್ನು ಕಡಿಮೆಯಾಗಿಲ್ಲ, ಸಂಸದೆ ಸುಮಲತಾ ವಿರುದ್ಧ ಹೆಚ್‌ಡಿಕೆ ಕೆಂಡಾಮಂಡಲ!

By Gowthami KFirst Published Apr 19, 2023, 6:42 PM IST
Highlights

2019ರ ಚುನಾವಣೆಯ ಗುಂಗಿನ ದುರಹಂಕಾರ  ಇನ್ನು ಕಡಿಮೆ ಆಗಿಲ್ಲ. ಜನ ಒಂದು ದಿನ ಇಳಿಸುತ್ತಾರೆ, ನನಗೆ, ಯಾರಿಗೂ ಶಾಶ್ವತವಲ್ಲ ಎಂದು ಸಂಸದೆ ಸುಮಲತಾ ವಿರುದ್ಧ ಹೆಚ್‌ಡಿಕೆ ಕೆಂಡಕಾರಿದ್ದಾರೆ.

ಚಿಕ್ಕಮಗಳೂರು (ಏ.19): ಹೆಚ್ಡಿಕೆ ಬಂದ್ರೆ ತಾನೇ ಸ್ಪರ್ಧೆ ಮಾಡ್ತೇನೆ ಎಂದು ಹೇಳಿಕೊಂಡಿರುವ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಸವಾಲಿಗೆ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 2019ರ ಚುನಾವಣೆಯ ಗುಂಗಿನ ದುರಹಂಕಾರ ಇನ್ನು ಕಡಿಮೆ ಆಗಿಲ್ಲ. ಜನ ಒಂದು ದಿನ ಇಳಿಸುತ್ತಾರೆ, ನನಗೆ, ಯಾರಿಗೂ ಶಾಶ್ವತವಲ್ಲ ಎಂದು ಚಿಕ್ಕಮಗಳೂರು ಜಿಲ್ಲೆಯ  ಮೂಡಿಗೆರೆಯಲ್ಲಿ ಎಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಮಂಡ್ಯದಲ್ಲಿ ಸವಾಲು ಹಾಕಿ, ಚಾಲೆಂಜ್ ಮಾಡಲು ಹೊರಟಿದ್ದಾರೆ. ಚನ್ನಪಟ್ಟಣದಲ್ಲಿ ಈಗಾಗಲೇ ಅರ್ಜಿ ಹಾಕಿದ್ದೇನೆ, ನಾನು ಒಂದೇ ಕಡೆ ಸ್ಪರ್ಧಿಸುವುದು. ಸವಾಲು ಹಾಕಿ ಸೆಡ್ಡು ಹೊಡೀತಾರೆ ಅಂದ್ರೆ ದೇವೇಗೌಡರ ಕುಟುಂಬದ ಮೇಲಿನ ದ್ವೇಷ ತೋರಿಸುತ್ತೆ. ಅವರು ಬಹಳ ದೊಡ್ಡವರು ಈಗ ಬೆಳೆದುಬಿಟ್ಟಿದ್ದಾರೆ.

ದೇವೇಗೌಡರ ಕುಟುಂಬದ ಯುವಕನನ್ನು ಸೋಲಿಸಿ, ಜನತಾ ದಳದ ಕೋಟೆಯನ್ನು ಛಿದ್ರ ಮಾಡಿದ್ದಾರೆ. 2019ರ ಚುನಾವಣೆಯ ಗುಂಗಿನಲ್ಲಿ ಅವರು ಇನ್ನು ಇದ್ದಾರೆ. ಜನ ಒಂದು ಜನ ದಿನ ಎಲ್ಲವನ್ನು ಇಳಿಸುತ್ತಾರೆ ಎಂದು ಸುಮಲತಾ ವಿರುದ್ಧ ಎಚ್.ಡಿ ಕುಮಾರಸ್ವಾಮಿ ಕೆಂಡ ಕಾರಿದ್ದಾರೆ.

Latest Videos

ಇದಕ್ಕೂ ಮುನ್ನ ಚಿತ್ರದುರ್ಗದಲ್ಲಿ ಹೇಳಿಕೆ ನೀಡಿದ ಕುಮಾರಸ್ವಾಮಿ, ಮಂಡ್ಯದಲ್ಲಿ ನಾನು ಅಭ್ಯರ್ಥಿ ಆಗುತ್ತೇನೆಂದು ಹೇಳಿಲ್ಲ. ಆಗಲೇ ಹಲವರು ಸವಾಲು ಒಡ್ಡಿಕೊಂಡು ಹೊರಟಿದ್ದಾರೆ. ನಾನು ಯಾರಿಗೂ ಸವಾಲೊಡ್ಡುವ ಮಟ್ಟಿಗೆ ಬೆಳೆದಿಲ್ಲ. ನಮ್ಮದು ರೈತರ ಪಕ್ಷ ಸಣ್ಣ ಪಕ್ಷ ಎಂದು ಪರೋಕ್ಷವಾಗಿ ಸುಮಲತಾಗೆ ಟಾಂಗ್ ನೀಡಿದರು.

ಮಂಡ್ಯದಲ್ಲಿ ಜೆಡಿಎಸ್ ಮುಗಿಸುತ್ತೇನೆಂದು ಸವಾಲು ಹಾಕಿದ್ದಾರೆ. ಮಂಡ್ಯ ಜಿಲ್ಲೆಯ ಜನತೆಯೇ ಸವಾಲು ಸ್ವೀಕರಿಸಲಿದ್ದಾರೆ. ಮಂಡ್ಯದಿಂದ ಸ್ಪರ್ಧೆ ಮಾಡಲು ನಾನೇನು ಟೂರಿಂಗ್ ಟಾಕೀಸಾ? ಕಾರ್ಯಕರ್ತರಿಗಾಗಿ ರಾಮನಗರ, ಚನ್ನಪಟ್ಟಣದಲ್ಲಿ ತಲೆಕೊಟ್ಟೆನು. ಮಂಡ್ಯದಲ್ಲಿ ಹಲವಾರು ಅಭ್ಯರ್ಥಿ ಆಕಾಂಕ್ಷಿಗಳಿದ್ದಾರೆ, ಸಮರ್ಥರಿದ್ದಾರೆ. ಮಂಡ್ಯ ಸ್ಟೋರಿ ಸೃಷ್ಠಿಸಿ ಯಾರನ್ನೋ ಕ್ರೋಧಿಕರಿಸಲಾಗುತ್ತಿದೆ. ಮೇಲೇಳುವುದು, ಕೆಳಗೆ ಬೀಳುವುದು ಜನ ತೀರ್ಮಾನಿಸುತ್ತಾರೆ. ಜೆಡಿಎಸ್ 123 ಗುರಿಯೊಂದಿಗೆ ನಾನು ಹೊರಟಿದ್ದೇನೆ ಎಂದರು.

ವರುಣಾದಲ್ಲಿ ಸಿದ್ದರಾಮಯ್ಯ ಹವಾ, ತಾತನ ಜೊತೆ ಮೊಮ್ಮಗನ ರಾಜಕೀಯ ಕ್ರೇಜ್ ನೋಡಿ!

ಇನ್ನು ಮಂಗಳವಾರ ಈ ಬಗ್ಗೆ ಮಾತನಾಡಿದ್ದ ಕುಮಾರಸ್ವಾಮಿ, ಮಂಡ್ಯದಲ್ಲಿ ಚುನಾವಣೆ ನಿಲ್ತೀನಿ ಎಂಬುದು ಮಾಧ್ಯಮಗಳ ಸೃಷ್ಟಿ.ಇದಕ್ಕೆ ಸುಮಲತಾ ನನ್ನ ವಿರುದ್ಧ ಸ್ಪರ್ಧೆ ಮಾಡೋದಾಗಿ ಚಾಲೆಂಜ್ ಮಾಡಿದ್ದಾರೆ. ಅವರದು ದ್ವೇಷದ ರಾಜಕಾರಣ, ನಮ್ಮದಲ್ಲ. ನನ್ನ ಸ್ಪರ್ಧೆಯಿಂದ 7ಕ್ಷೇತ್ರಗಳಲ್ಲೂ ಪಕ್ಷಕ್ಕೆ ಅನುಕೂಲ ಇದೆ. ನಾನು ಸ್ಪರ್ಧೆ ಮಾಡದಿದ್ರು ಮಂಡ್ಯ ಜನ ಜೆಡಿಎಸ್‌ ಗೆಲ್ಲಿಸುತ್ತಾರೆ. ಅನಿವಾರ್ಯ ಅವಶ್ಯಕತೆ ಇದ್ರೆ ದೇವೇಗೌಡರು ಮಂಡ್ಯಕ್ಕೆ ಪ್ರಚಾರಕ್ಕೆ ಬರ್ತಾರೆ. ಸುಮಲತಾ ಅವರದ್ದು ದುರಹಂಕಾರದ ಪರಮಾವಧಿ. ನಮಗೆ ಅವರ ಪತಿಯಿಂದ ಯಾವುದೇ ಅನುಕೂಲ ಆಗಿಲ್ಲ. ಆದರೆ ನಾನು ಯಾವ ರೀತಿ ಗೌರವ ಕೊಟ್ಟಿದ್ದೇನೆ. ಮಂಡ್ಯ ಜಿಲ್ಲೆ ಗೌರವ ಉಳಿಸಿದ್ದೇನೆ, ಅದಕ್ಕೆ ಅವರು ನನಗೆ ಕೊಡ್ತಿರುವ ಕಾಣಿಕೆ ಇದು. ಅವರ ಕಾಣಿಕೆ ಸ್ವೀಕಾರ ಮಾಡಲು ತಯಾರಾಗಿದ್ದೇನೆ ಎಂದಿದ್ದರು.

ಮೋದಿ, ಶಾ, ಗಡ್ಕರಿ ಸೇರಿ 40 ಮಂದಿ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ರಿಲೀಸ್

ಏಪ್ರಿಲ್‌ 13 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ.  ಏಪ್ರಿಲ್‌ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್‌ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

click me!