
ಮಹಿಳೆಯರಿಗೆ ಕಾಂಗ್ರೆಸ್ ಬಂಪರ್ ಗಿಫ್ಟ್: ಮಾಸಿಕ 2 ಸಾವಿರ ರೂ. ಸಹಾಯಧನ
ಬೆಂಗಳೂರು (ಜ.16): ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅಧಿಕಾರಕ್ಕರ ಬಂದಾಗಿನಿಂದ ಮಹಿಳೆಯರಿಗೆ ಯಾವುದೇ ಕೊಡುಗೆಯನ್ನೂ ನೀಡಿಲ್ಲ. ಆದರೆ, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಗೇಹಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸಿ ಪ್ರತಿ ಮನೆಯ ಒಡತಿಗೆ ಮಾಸಿಕ 2 ಸಾವಿರ ರೂ. ಸಹಾಯಧನ ನೀಡಲಾಗುವುದು ಎಂದು ಕಾಂಗ್ರೆಸ್ ಘೋಷಣೆ ಮಾಡಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿದ್ದ 'ನಾ ನಾಯಕಿ' ಕಾರ್ಯಕ್ರಮದಲ್ಲಿ ಈ ಬಗ್ಗೆ ಘೋಷಣೆ ಮಾಡಲಾಗಿದೆ. ನಾನು ಸೋನಿಯಾ ಗಾಂಧಿ ನೋಡಿಕೊಂಡು ಬೆಳದಿದ್ದೇನೆ. ಸೋನಿಯಾ ಗಾಂಧಿ ರಾಜೀವ್ ಗಾಂಧಿ ಮದುವೆಯಾಗಿ ಭಾರತಕ್ಕೆ ಬಂದರು. ದೇಶದ ಸಂಸ್ಕೃತಿ ತಿಳಿದುಕೊಳ್ಳಲು ಸೋನಿಯಾ ಪ್ರಯತ್ನ ಪಟ್ಟರು. ಅನಿವಾರ್ಯ ಕಾರಣದಿಂದ ಜನರ ಸೇವೆ ರಾಜಕೀಯಕ್ಕೆ ಬಂದಿದ್ದಾರೆ. ನಂತರ, ಮಹಿಳೆಯರು ಜೀವನ ಸಾಗಿಸಲು ಎಷ್ಟು ಕಷ್ಟ ಪಡ್ತಾ ಇದ್ದಾರೆ. ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಎಲ್ಲ ಮಹಿಳೆಯರಿಗೆ ನೆರವಾಗುವ ನಿಟ್ಟಿನಲ್ಲಿ ಪ್ರತಿ ತಿಂಗಳು ಎಲ್ಲ ಮನೆಯ ಯಜಮಾನಿಗೆ ತಲಾ 2 ಸಾವಿರ ರೂ. ಸಹಾಯಧನ ನೀಡುವ ಗೃಹ ಲಕ್ಷ್ಮೀ ಯೋಜನೆ ಜಾರಿಗೆ ತರಲಾಗುತ್ತದೆ ಎಂದು ಹೇಳಿದರು.
ಎಲೆಕ್ಷನ್ ಗಿಮಿಕ್: ಬಳ್ಳಾರಿಯಲ್ಲಿ ಹಕ್ಕುಪತ್ರ ವಿತರಣೆಗೆ ಮುಂದಾದ ಶಾಸಕ ಸೋಮಶೇಖರ್ ರೆಡ್ಡಿ
ಆರ್ಥಿಕ ರಾಜಕೀಯ ಸ್ವಾವಲಂಬಿ ಆಗಬೇಕು: ಕರೋನ ಬಳಿಕ ಜೀವನ ದುಸ್ತರ ಆಗಿದೆ. ಕಷ್ಟ ನನಗೂ ಕೂಡ ಮನವರಿಕೆ ಆಗಿದೆ. ಸರ್ಕಾರ ಬದಲಿಸುವ ಸಮಯ ಬಂದಿದೆ. ನಿಮಗೆ ಉದ್ಯೋಗ, ಮಕ್ಕಳ ಭವಿಷ್ಯ, ಮಕ್ಕಳ ವಿಧ್ಯಾಭ್ಯಾಸ ಎಲ್ಲ ಸರಿಯಾಗಬೇಕು. ದೇಶದಲ್ಲಿ ಶೇ.50 ಮಹಿಳೆಯರು ಇದ್ದೇವೆ. ನಾವೆಲ್ಲರೂ ಆರ್ಥಿಕವಾಗಿ ಸ್ವಾವಲಂಬಿ ಆಗಬೇಕು. ನೀವು ಶಕ್ತಿವಂತರಗಬೇಕು, ನಿಮ್ಮ ಶಕ್ತಿ ಅರಿವಾಗಬೇಕು. ನೀವು ರಾಜಕೀಯ ಅರಿತುಕೊಳ್ಳಬೇಕು. ರಾಜಕೀಯ ಪಕ್ಷಗಳು ಮಹಿಳೆಯರ ಕಡಗಣನೆ ಮಾಡಿವೆ. ರಾಜಕೀಯ ಪಕ್ಷಗಳಿಗೆ ಈ ವೇದಿಕೆ ಸಂದೇಶ ನೀಡಬೇಕು ಎಂದು ತಿಳಿಸಿದರು.
ಮತ ಹಾಕುವ ಮುನ್ನ ಯೋಚನೆ ಮಾಡಿ: ಬಿಜೆಪಿ ಎಂಟು ವರ್ಷದಿಂದ ಆಡಳಿತ ಮಾಡುತ್ತಿದೆ. ನಿಮ್ಮ ಮಕ್ಕಳಿಗೆ ಉದ್ಯೋಗ ಸಿಕ್ಕಿದೇಯಾ..? ಮೂರು ತಿಂಗಳಲ್ಲಿ ಚುನಾವಣೆ ಬರ್ತಾ ಇದೆ. ನೀವೆಲ್ಲಾ ಯಾರಿಗೆ ಮತ ಹಾಕಬೇಕು ಎಂದು ವಿಚಾರ ಮಾಡಬೇಕು. ರಾಜ್ಯದಲ್ಲಿ ಶೇ. 40 ಸರ್ಕಾರ ಇದೆ. ನಿಮ್ಮ ತೆರಿಗೆ ಹಣ ಭ್ರಷ್ಟಾಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿ 8 ಸಾವಿರ ಕೋಟಿ ಬಜೆಟ್ ಇದೆ. ಅಷ್ಟು ಕೆಲಸ ಬಿಜೆಪಿ ಮಾಡಿದೇಯಾ..? ಸರ್ಕಾರ ಭ್ರಷ್ಟಾಚಾರದಲ್ಲಿ ನಿರತವಾಗಿದೆ ಎಂದು ಆರೋಪ ಮಾಡಿದರು.
200 ಯುನಿಟ್ ಫ್ರೀ ವಿದ್ಯುತ್ ಕೊಡಲು ನಾವು ಬದ್ಧ: ಡಿ.ಕೆ.ಶಿವಕುಮಾರ್
ಕಾಂಗ್ರೆಸ್ ಸರ್ಕಾರ ಇದ್ದಾಗ ಸಿಲಿಂಡರ್ ಬೆಲೆ ಎಷ್ಟಿತ್ತು..?
ಬಿಜೆಪಿ ಸರ್ಕಾರ ಬಂದ ಮೇಲೆ ಸಿಲಿಂಡರ್ ಬೆಲೆ ಎಷ್ಟು ಏರಿಕೆ ಆಗಿದೆ. ಮಕ್ಕಳ ಶಾಲೆ ಫೀಸ್ ಸೇರಿದಂತೆ ಎಲ್ಲ ಬೆಲೆ ಏರಿಕೆ ಆಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಬಿಜೆಪಿ ಬಂಡವಾಳಸಾಹಿ ಪರವಾಗಿ ಮಾತ್ರ ಕೆಲಸ ಮಾಡುತ್ತದೆ. ಜನರ ಪರವಾಗಿ ಬಿಜೆಪಿ ಕೆಲಸ ಮಾಡಲ್ಲ. ಸರ್ಕಾರಿ ಉದ್ಯೋಗಗಳು ಇವತ್ತು ಮಾರಟಕ್ಕಿವೆ. ಬಿಜೆಪಿ ಕೇವಲ ಉಳ್ಳವರ ಪರವಾಗಿದೆ, ಬಡವರ ಪರ ಇಲ್ಲ. ಸಿದ್ದರಾಮಯ್ಯ ಸರ್ಕಾರ ಅನೇಕ ಜನಪರ ಕಾರ್ಯಕ್ರಮ ಕೊಟ್ಟಿದ್ದಾರೆ. ಹಲವು ಭಾಗ್ಯ ಕಾರ್ಯಕ್ರಮ ನೀಡಿದ್ದಾರೆ. ಇಂದಿರಾ ಕ್ಯಾಂಟಿನ್ ನೀಡಿದ್ದಾರೆ. ಸ್ತ್ರೀ ಶಕ್ತಿ ಸಂಘ ಕೊಡುಗೆ ನೀಡಿದ್ದು ಕಾಂಗ್ರೆಸ್. ಈಗ ನಾ ನಾಯಕಿ ಕಾರ್ಯಕ್ರಮ ಕಾಂಗ್ರೆಸ್ ನೀಡುತ್ತಿದೆ ಎಂದರು.
ಮನುಸ್ಮೃತಿ ಮೂಲಕ ಮಹಿಳೆಯರ ದಮನ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಬಿಜೆಪಿ ನಾಯಕರು ವಚನ ಭ್ರಷ್ಟರು. 600 ಭರವಸೆಗಳಲ್ಲಿ ಶೇಕಡಾ 10 ರಷ್ಟು ಭರವಸೆ ಈಡೇರಿಸಿಲ್ಲ. ಈಗ ಮತ್ತೆ ಸುಳ್ಳು ಭರವಸೆ ಬಿಜೆಪಿಗರು ನೀಡುತ್ತಿದ್ದಾರೆ. ಬಿಜೆಪಿ ಯಾವತ್ತು ಮಹಿಳೆಯರ ಪರವಾಗಿಲ್ಲ. ಮನುಸ್ಮೃತಿ ಮೂಲಕ ಮಹಿಳೆಯರ ದಮನ ಮಾಡಿದ್ದಾರೆ. ಸಂವಿಧಾನ ಹತ್ತಿಕ್ಕುವ ಕೆಲಸ ಮಾಡಿದ್ದಾರೆ. ದೇಶದ ಅಭಿವೃದ್ಧಿ ಆಗಬೇಕಾದ್ರೆ ಮಹಿಳೆಯರ ಅಭಿವೃದ್ಧಿ ಆಗಬೇಕು. ಮಹಿಳೆಯರ ಅಭಿವೃದ್ಧಿ ಆದ್ರೆ ದೇಶ ಸಮೃದ್ದಿಯಾಗುತ್ತೆ. ನೆಹರು ಕಾಲದಲ್ಲಿ ಸತಿಸಹಗಮನ ಪದ್ಧತಿ ಇತ್ತು ಅದನ್ನು ತೊಡೆದು ಹಾಕುವ ಕೆಲಸ ಮಾಡಿದ್ದರು. ಹಿಂದೂ ವಿವಾಹ ಕಾಯ್ದೆ ಜಾರಿಗೆ ತಂದರು. 1961ರಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಗೆ ಬಂತು. 2011 ಜನಗಣತಿ ಪ್ರಕಾರ 64% ಮಹಿಳೆಯರು ಶಿಕ್ಷಣ ಪಡೆದಿದ್ದಾರೆ. ಇದಕ್ಕೆಲ್ಲ ಕಾಂಗ್ರೆಸ್ ಸರ್ಕಾರದ ಕೊಡುಗೆ ಕಾರಣ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.