ರಾಹುಲ್‌ ಬಂದ ಕಡೆಗೆಲ್ಲ ಕಾಂಗ್ರೆಸ್‌ ದಿವಾಳಿ: ಯತ್ನಾಳ ವಾಗ್ದಾಳಿ

By Kannadaprabha News  |  First Published May 5, 2023, 1:40 PM IST

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅರೆ ಹುಚ್ಚರಾಗಿದ್ದು, ಇವರು ಬಂದ ಕಡೆಗಳಲ್ಲಿ ಕಾಂಗ್ರೆಸ್‌ ದಿವಾಳಿಯಾಗುತ್ತಿದೆ ಎಂದು ಕೇಂದ್ರ ಮಾಜಿ ಸಚಿವ ಬಸವರಾಜ ಪಾಟೀಲ್‌ ಯತ್ನಾಳ ಲೇವಡಿ ಮಾಡಿದರು.


ಗಂಗಾವತಿ (ಮೇ.5) : ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅರೆ ಹುಚ್ಚರಾಗಿದ್ದು, ಇವರು ಬಂದ ಕಡೆಗಳಲ್ಲಿ ಕಾಂಗ್ರೆಸ್‌ ದಿವಾಳಿಯಾಗುತ್ತಿದೆ ಎಂದು ಕೇಂದ್ರ ಮಾಜಿ ಸಚಿವ ಬಸವರಾಜ ಪಾಟೀಲ್‌ ಯತ್ನಾಳ ಲೇವಡಿ ಮಾಡಿದರು.

ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ(Paranna munavalli BJP Candidate) ಪರ ಪ್ರಚಾರದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಾಹುಲ್‌ ಗಾಂಧಿ(Rahul gandhi) ಸಭೆಯಲ್ಲಿ ಏನು ಮಾತನಾಡುತ್ತಾರೆ ಎನ್ನುವುದು ಆತನಿಗೆ ಗೊತ್ತಿಲ್ಲ. ಇದರಿಂದ ಅರೆ ಹುಚ್ಚನಾಗಿದ್ದಾನೆ. ಈ ನಾಯಕ ರಾಜ್ಯಕ್ಕೆ ಬಂದು ಹೋಗಿದ್ದರಿಂದ ಬಿಜೆಪಿಗೆ ಲಾಭವಾಗುತ್ತದೆ ಎಂದು ಏಕವಚನದಲ್ಲೇ ಟೀಕಿಸಿದರು

Tap to resize

Latest Videos

undefined

ಬಿಜೆಪಿ ಗೆದ್ದರೆ ರಾಜ್ಯದಲ್ಲಿ ಯುಪಿ ರೀತಿ ಆಡಳಿತ: ಶಾಸಕ ಬಸನಗೌಡ ಯತ್ನಾಳ.

ಮಾಜಿ ಸಿಎಂ ಸಿದ್ದರಾಮಯ್ಯ(Siddaramaiha) ಅವರು ಮತ್ತೆ ಮುಖ್ಯಮಂತ್ರಿಯಾಗುವ ಕನಸು ಕಂಡಿದ್ದಾರೆ. ಅವರು ಹೋದ ಕಡೆಗಳಲ್ಲಿ ಬಿಜೆಪಿ ಪರ ಪ್ರಚಾರ ಮಾಡುತ್ತಿರುವುದರಿಂದ ನಮ್ಮ ಪಕ್ಷಕ್ಕೆ ಲಾಭವಾಗಿದೆ. ಸಿದ್ದರಾಮಯ್ಯ ಅವರು ಭಾಷಣದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ಕೊಡುತ್ತೇವೆ ಎನ್ನುವ ಬದಲು ಬಿಜೆಪಿ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ಕೊಡುತ್ತೇನೆ ಎಂದು ಹೇಳಿದ್ದರಿಂದ ಬಿಜೆಪಿಗೆ ಪ್ರಚಾರ ಸಿಗುತ್ತಿದೆ ಎಂದರು.

ಡಿ.ಕೆ. ಶಿವಕುಮಾರ(DK Shivakumar) ಸೋನಿಯಾ ಗಾಂಧಿ(Soniya gandhi)ಗೆ ನನ್ನ ತಾಯಿಯಂತೆ ಎನ್ನುತ್ತಾರೆ. ಈ ಪುಣ್ಯಾತ್ಮನಿಗೆ ಎಷ್ಟುಜನ ತಾಯಂದಿರು ಇದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಸೋನಿಯಾ ಗಾಂಧಿಗೆ ಭಾರತದ ಸಂಸ್ಕೃತಿ ಬಗ್ಗೆ ಗೊತ್ತಿಲ್ಲ. ಅವರಿಗೆ ನಮ್ಮ ದೇಶದ ನಾಗರಿಕತೆ ಇಲ್ಲ. ಈ ಕಾರಣಕ್ಕೆ ಪ್ರಧಾನಿ ಹುದ್ದೆ ಕೊಡಲಿಲ್ಲ. ಆದರೆ ಕಾಂಗ್ರೆಸ್ಸಿಗರು ಪ್ರಧಾನಿ ಹುದ್ದೆ ತ್ಯಾಗ ಮಾಡಿದ್ದಾರೆ ಎಂದು ಬಿಂಬಿಸುತ್ತಿದ್ದಾರೆ ಎಂದರು.

ವಿಧಾನಸಭೆ ಚುನಾವಣೆ(Karnataka assembly election 2023)ಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳು .2 ಲಕ್ಷ ನೀಡಿದ್ದಾರೆ. ಇಲ್ಲಿಯವರೆಗೆ ಟಿಕೆಟ್‌ ವಂಚಿತರಿಗೆ ಹಣ ನೀಡಿಲ್ಲ, ಹಣ ನುಂಗಿ ಹಾಕಿದ್ದಾರೆ. ಟಿಕೆಟ್‌ ತಪ್ಪಿದವರಿಗೆ .2 ಲಕ್ಷ ವಾಪಸ್‌ ನೀಡುವ ಗ್ಯಾರೆಂಟಿ ಇಲ್ಲ, ಇಂತಹ ಸಂದರ್ಭದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಯೋಜನೆಗಳ ಕುರಿತು ಏನು ಗ್ಯಾರಂಟಿ ಕೊಡುತ್ತಾರೆ ಎಂದು ಪ್ರಶ್ನಿಸಿದರು.

ದಲಿತರಿಗೆ, ಪಪ, ಲಿಂಗಾಯತರಿಗೆ ಮೀಸಲಾತಿ ಬಿಜೆಪಿ ನೀಡಿದೆ. ಆದರೆ ಕಾಂಗ್ರೆಸ್‌ ಸರ್ಕಾರ ಅದಿಕಾರಕ್ಕೆ ಬಂದರೆ ಇದನ್ನು ವಾಪಸ್‌ ಪಡೆಯುವ ಬಗ್ಗೆ ಹೇಳುತ್ತಿದ್ದಾರೆ. ಇದರಿಂದ ಜನರು ವಂಚಿತರಾಗುತ್ತಾರೆ. ಯಾವ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬುದನ್ನು ಮತದಾರರು ಅರಿತುಕೊಳ್ಳಬೇಕೆಂದರು.

ಬಜರಂಗದಳದವರು ಭಯೋತ್ಪಾದಕರಲ್ಲ, ಈ ಕುರಿತು ಕಾಂಗ್ರೆಸ್‌ ಮಾತನಾಡುವುದು ಸರಿಯಲ್ಲ ಎಂದರು.

ಗಣಿ ನಾಯಕರಿಂದ ರಾಜಧಾನಿ ಅವನತಿಯಾಗುತ್ತಿದೆ ಎಂದ ಅವರು, ಗಣಿ ರೊಕ್ಕ ತಗೊಳ್ಳಿ ಓಟು ಬಿಜೆಪಿಗೆ ಹಾಕಬೇಕು ಎಂದ ಅವರು, ಇನ್ನು ಮುಂದೆ ಗಣೇಶ ಹಬ್ಬದ ಸಂದರ್ಭದಲ್ಲಿ ಯಾವ ಇಲಾಖೆಯ ಅನುಮತಿ ಬೇಕಾಗಿಲ್ಲ. ಡಿಜೆ ಹಾಕ್ತಿವೆ, ರಾಮನ ಹಾಡು ಹಾಡುತ್ತೇವೆ. ಹಿಂದು ದೇಶದಲ್ಲಿರುವ ನಾವು ಅನುಮತಿ ಪಡೆಯಬೇಕೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ಮಾತನಾಡಿ, ತಾವು ಈ ಹಿಂದೆ ಎರಡು ಭಾರಿ ಶಾಸಕರಾಗಿದ್ದ ಸಂದರ್ಭದಲ್ಲಿ ಹಲವಾರು ಯೋಜನೆ ಕಾರ್ಯಗತಗೊಳಿಸಿದೆ. ಆಂಜನೇಯ ಸ್ವಾಮಿ ಜನ್ಮ ಸ್ಥಳ ಅಂಜನಾದ್ರಿಗೆ .120 ಕೋಟಿ ಅನುದಾನ ತಂದಿದೆ ಎಂದರು.

ಏಯ್.. ಸುಮ್ನ್ ಕುಂದ್ರ.. ನೀನ್ ಗುಂಡ್ ಹಾಕ್ಕೊಬಂದ್ ನಮಗ ಗುಂಡ್ ಹಾರಿಸೋಂಗ್ ಮಾಡಬ್ಯಾಡ!

ದೆಹಲಿ ಶಾಸಕ ಅಜೆಯ ಮಹಾವೀರ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ಮುಖಂಡ ನೆಕ್ಕಂಟಿ ಸೂರಿಬಾಬು, ಕಳಕನಗೌಡ, ಜೋಗದ ಹನುಮಂತಪ್ಪನಾಯಕ, ವೀರಭದ್ರಪ್ಪ ನಾಯಕ, ಜೋಗದ ನಾರಾಯಣಪ್ಪ ನಾಯಕ, ಕಾಶಿನಾಥ ಚಿತ್ರಗಾರ, ತಿಪ್ಪೇರುದ್ರಸ್ವಾಮಿ ಇತರರು ಇದ್ದರು.

click me!