ಚುನಾವಣೆಯಲ್ಲಿ 130 ರಿಂದ 150 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದ ಸಿದ್ದರಾಮಯ್ಯ
ಬೆಳಗಾವಿ(ನ.08): ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಆಡಳಿತದ ಚುಕ್ಕಾಣಿ ಹಿಡಿಯುವುದು ಶತಃಸಿದ್ಧ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಚುನಾವಣೆಯಲ್ಲಿ 130 ರಿಂದ 150 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದರು.
ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರ ರಚನೆ ನಾನೇ ಮಾಡಿದ್ದು. ಶೇ.75 ರಷ್ಟು ಕೆಲಸವಾಗಿದೆ. ಇನ್ನು ಶೇ.25 ರಷ್ಟುಬಾಕಿಯಿದೆ. 2016-17ರಲ್ಲಿ ಪ್ರಾಧಿಕಾರ ರಚನೆಯಾಗಿತ್ತು. ಆಗ ನಾನೇ .267.97 ಕೋಟಿ ಪ್ರಾಧಿಕಾರಕ್ಕೆ ಹಣ ಬಿಡುಗಡೆ ಮಾಡಿದ್ದೆ. ನಾನು ಸಿಎಂ ಆಗಿದ್ದ ವೇಳೆ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ನಿರ್ಮಾಣ ಮತ್ತು ರಾಕ್ ಗಾರ್ಡನ್ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಲಾಗಿತ್ತು. ಈಗ ಮೊದಲನೇ ಬ್ಯಾಚ್ ಆರಂಭವಾಗಿದೆ. ಇಲ್ಲಿಯವರೆಗೆ .240 ಕೋಟಿ ಹಣ ಖರ್ಚಾಗಿದೆ. ಇನ್ನು .100 ಕೋಟಿ ಬಿಡುಗಡೆಯಾಗಬೇಕಿದೆ. ಈ ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಯೊಂದಿಗೆ ಮಾತುಕತೆ ನಡೆಸಲಾಗಿದೆ. 2023ರ ಜನವರಿ ಇಲ್ಲವೇ ಫೆಬ್ರುವರಿಯಲ್ಲಿ ಈ ಕಾಮಗಾರಿ ಪೂರ್ಣವಾಗಿ ಮುಕ್ತಾಯವಾಗುತ್ತದೆ ಎಂದರು.
ಹಳಸಿದ ಬೊಮ್ಮಾಯಿ, ಯಡಿಯೂರಪ್ಪ ಸಂಬಂಧ: ಸಿದ್ದರಾಮಯ್ಯ
ಕಿತ್ತೂರು ಕೋಟೆಗೆ ಸಂಬಂಧಿಸಿದ ಎಲ್ಲ ನೈಜ ಚಿತ್ರಣಗಳನ್ನು ರಾಕ್ ಗಾರ್ಡನ್‌ನಲ್ಲಿ ನಿರ್ಮಿಸಲಾಗಿದೆ. ರಾಯಣ್ಣ ಸ್ಮರಣಾರ್ಥವಾಗಿ ಸಂಗೊಳ್ಳಿ ರಾಯಣ್ಣ ಸೈನಿಕ ಸ್ಕೂಲ್, ಸಮಾಧಿ ಸ್ಥಳ ಅಭಿವೃದ್ಧಿ, ಮ್ಯೂಸಿಯಂಗೆ . 70 ಕೋಟಿ, ರಾಕ್ ಗಾರ್ಡನ್‌ಗೆ . 14 ಕೋಟಿ, ಕಲ್ಯಾಣ ಮಂಟಪಕ್ಕೆ .2 ಕೋಟಿ ಬಿಡುಗಡೆ ಮಾಡಲಾಗಿತ್ತು. ಕೆರೆ ಅಭಿವೃದ್ಧಿಗೂ ನಾನೇ ಶ್ರಮಿಸಿದ್ದೇನೆ. ನಾನೇ ಶಂಕು ಸ್ಥಾಪನೆ ನೆರವೇರಿಸಿದ್ದೇನೆ. ಈಗ ಬಿಜೆಪಿ ಸರ್ಕಾರವಿದೆ. ತ್ವರಿತವಾಗಿ ಬಿಜೆಪಿ ಸರ್ಕಾರಸ್ಪಂದನೆ ಮಾಡಲಿಲ್ಲ. ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಲಿಲ್ಲ. ಬೊಮ್ಮಾಯಿ ಅವರು ನಾವು ಮಾಡಿದ್ದು ಎನ್ನುತ್ತಾರೆ. ಇದೆಲ್ಲ ಮಾಡಿದ್ದು ನಾನು ಸಿಎಂ ಆಗಿದ್ದ ವೇಳೆ. ರಕ್ಷಣಾ ಇಲಾಖೆಯವರು ಕೂಡ ಅನುದಾನ ಕೊಡಬೇಕು. ಪ್ರತಿವರ್ಷ 12 ಕೋಟಿ ರು. ಖರ್ಚು ಆಗುತ್ತದೆ. ಸಂಗೊಳ್ಳಿ ಗ್ರಾಮ ಅಭಿವೃದ್ಧಿಯಾಗಬೇಕು ಎಂದು ಹೇಳಿದರು.
ಬಿಜೆಪಿಯಲ್ಲಿ ಚುನಾವಣೆಯಾಗದೇ ಅಧ್ಯಕ್ಷರಾಗುತಾರೆ. ಬಿಜೆಪಿ ಸುಳ್ಳಿನ ಕಾರ್ಖಾನೆ ಇದ್ದ ಹಾಗೆ. ಕಾಗಿನೆಲೆ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಮಾಡಿದ್ದು ನಾನೇ. ಜೆಡಿಎಸ್ ಅಧ್ಯಕ್ಷ ಸಿಎಂ ಇಬ್ರಾಹಿಂ ಸುಳ್ಳು ಹೇಳುತ್ತಾನೆ. ಕಾಂಗ್ರೆಸ್‌ನಿಂದ ಯಾರೂ ಜೆಡಿಎಸ್‌ಗೆ ಹೋಗಲ್ಲ. ಜೆಡಿಎಸ್‌ನಿಂದಲೇ ನಮ್ಮ ಪಕ್ಷಕ್ಕೆ ಬರುತ್ತಾರೆ ಎಂದು ಹೇಳಿದರು.