ಬಿಜೆಪಿ ನಾಯಕರು ಕಾಂಗ್ರೆಸ್ ಬಗ್ಗೆ ಮಾತನಾಡುತ್ತಾರೆ. ಡಿಕೆಶಿ ಮತ್ತು ನನ್ನ ಜೊತೆಗಿನ ಸಂಬಂಧ ಸರಿಯಿದೆ. ನಾವಿಬ್ಬರೂ ಚೆನ್ನಾಗಿದ್ದೇವೆ. ನಾನು ಏಕಾಂಗಿಯಲ್ಲ. ಎಲ್ಲ ಧರ್ಮದವರು, ಜಾತಿಯವರು ನನ್ನ ಜೊತೆ ಇದ್ದಾರೆ ಎಂದ ಸಿದ್ದರಾಮಯ್ಯ
ಬೆಳಗಾವಿ(ನ.08): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿ.ಎಸ್.ಯಡಿಯೂರಪ್ಪ ಅವರ ನಡುವಿನ ಸಂಬಂಧ ಹಳಸಿಹೋಗಿದೆ. ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದರು.
ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಜೆಪಿ ನಾಯಕರು ಕಾಂಗ್ರೆಸ್ ಬಗ್ಗೆ ಮಾತನಾಡುತ್ತಾರೆ. ಡಿಕೆಶಿ ಮತ್ತು ನನ್ನ ಜೊತೆಗಿನ ಸಂಬಂಧ ಸರಿಯಿದೆ. ನಾವಿಬ್ಬರೂ ಚೆನ್ನಾಗಿದ್ದೇವೆ. ನಾನು ಏಕಾಂಗಿಯಲ್ಲ . ಎಲ್ಲ ಧರ್ಮದವರು, ಜಾತಿಯವರು ನನ್ನ ಜೊತೆ ಇದ್ದಾರೆ ಎಂದರು.
ಕೊಲೆ ಆರೋಪ ಎದುರಿಸುತ್ತಿರುವ ವಿನಯ ಕುಲಕರ್ಣಿ ಅದ್ಧೂರಿ ಜನ್ಮದಿನ ಆಚರಿಸುವ ಮೂಲಕ ಏನು ಸಂದೇಶ ಕೊಡುತ್ತೀರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸಚಿವ ಅಮಿತ ಶಾ ಇದ್ದಾರಲ್ಲ ಅವರ ಮೇಲೆ ಕೊಲೆ ಆರೋಪ ಇಲ್ವಾ? ಅವರು ಗಡಿ ಪಾರು ಆಗಿರಲಿಲ್ಲ ಏನ್ರಿ. ಬೇಕಾದಷ್ಟುಜನರ ಮೇಲೆ ಕೊಲೆ ಕೇಸ್ ಇದೆ. ಎಂಎಲ್‌ಎ, ಎಂಪಿ ಆಗಿದ್ದಾರೆ. ಅಪರಾಧ ಸಾಬೀತಾಗುವರೆಗೂ ಅವರು ಇನ್ನೋಸೆಂಟ್ ಎಂದರು.
undefined
ಹಿಂದು ಅನ್ನೋದು ಅಶ್ಲೀಲ ಪದ, ಇದು ಪರ್ಷಿಯಾದಿಂದ ಬಂದಿದ್ದು: ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ!
ಯಾವುದೇ ಕ್ಷೇತ್ರ ಇಲ್ಲದೇ ಹೋದರೆ ಬಹಳ ಜನ ನನಗೆ ಕರೆಯುತ್ತಾರೆಯೇ? ಬಿಜೆಪಿಯವರಿಗೆ ಬುದ್ದಿ ಇಲ್ಲ. ನನಗೆ ಕ್ಷೇತ್ರ ಇಲ್ಲವೆಂದು ಬಿಜೆಪಿ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧೆಗೆ ಹೆಚ್ಚಿನ ಒತ್ತಡ ಇದೆ. ಸಾವಿರಾರು ಜನ ಹೆಣ್ಣು ಮಕ್ಕಳು ಮನೆ ಎದುರು ಧರಣಿ ಮಾಡುತ್ತೇವೆ ಎಂದು ಒತ್ತಡ ಹಾಕಿ ಪತ್ರ ಬರೆದಿದ್ದಾರೆ. ವಾರಕ್ಕೊಮ್ಮೆಯಾದರೂ ಅಲ್ಲಿ ಇರಲಾಗುತ್ತಿಲ್ಲ. ಕಾರ್ಯಕರ್ತರಿಗೆ, ಜನರಿಗೆ ಸಿಗಲಾಗುತ್ತಿಲ್ಲ. ಅವರ ಕಷ್ಟಸುಖಕ್ಕೆ ಸ್ಪರ್ಧಿಸಲಾಗುತ್ತಿಲ್ಲ. ಅವರು ಹೇಳಬಹುದು ನೀವು ಬಂದು ನಿಂತುಕೊಳ್ಳಿಯೆಂದು. ನನಗೆ ಮನಸ್ಸು ಒಪ್ಪುತ್ತಿಲ್ಲ. ಬಾದಾಮಿಗೆ ಹೋಗಿ ಎರಡು ತಿಂಗಳಾಗಿದೆ ಎಂದು ಹೇಳಿದರು.
'ರಮೇಶ ಜಾರಕಿಹೊಳಿ ಜೆಡಿಎಸ್‌ಗೆ ಬಂದರೆ ಸ್ವಾಗತ'
ಕೋಲಾರದಲ್ಲೂ ನಿಂತುಕೊಳ್ಳಬೇಕು ಎಂದು ಹೇಳುತ್ತಿದ್ದಾರೆ. ವರುಣಾದಿಂದ ನಿಂತುಕೊಳ್ಳಬೇಕು ಎಂದು ನಮ್ಮ ಹುಡುಗ ಹೇಳುತ್ತಿದ್ದಾನೆ. ಚಾಮರಾಜಪೇಟೆಯಿಂದ ನಿಂತುಕೊಳ್ಳಬೇಕು ಎಂದು ಜಮೀರ್ ಅಹ್ಮದ ಹೇಳುತ್ತಿದ್ದಾನೆ. ವರುಣಾದಿಂದ ಸ್ಪರ್ಧೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸಲಹೆ ನೀಡಿದ್ದಾರೆ. ವೈಯಕ್ತಿಕವಾಗಿ ಸಿಎಂ ಇಬ್ರಾಹಿಂ ನನ್ನ ಒಳ್ಳೆಯಗೆಳೆಯ. ಆದರೆ, ನಮ್ಮನ್ನು ಬಿಟ್ಟು ಜೆಡಿಎಸ್‌ಗೆ ಹೋಗಿ ಅಧ್ಯಕ್ಷರಾಗಿದ್ದಾರೆ. ಅವರು ಭದ್ರಾವತಿಗೆ ಜೆಡಿಎಸ್‌ನಿಂದ ನಿಂತುಕೊಳ್ಳುವುದು ಒಳ್ಳೆಯದು. ಅಲ್ಲಿ ಯಾರೂ ಇಲ್ಲ. ಈಗ ಪಾಪ ಅಪ್ಪಾಜಿ ಮೃತಪಟ್ಟಿದ್ದಾರೆ. ನಾನು ಎಲ್ಲಿ ನಿಂತುಕೊಳ್ಳಬೇಕು ಎನ್ನುವ ಕುರಿತು ಪಕ್ಷ ತೀರ್ಮಾನ ಮಾಡುತ್ತದೆ. ಆತ್ಮೀಯವಾಗಿ ಹೇಳುವುದಾದರೆ ವೈಯಕ್ತಿಕವಾಗಿ ಬಂದು ಹೇಳಬೇಕು. ಭದ್ರಾವತಿಗೆಸಿಟ್ಟಿಂಗ್ ಎಂಎಲ್‌ಎ ಟಿಕೆಟ್ ತಪ್ಪಿಸಿ ಕೊಟ್ಟಿತ್ತು. ಆದರೆ, ಇಬ್ರಾಹಿಂ ಡಿಪಾಜಿಟ್ ಹೋಯಿತು. ಅವರ ಲೆಕ್ಕಾಚಾರ ತಪ್ಪಾಯ್ತಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಪರ ಘೋಷಣೆ
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಮಾನದ ಮೂಲಕ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ಅವರ ಬೆಂಬಲಿಗರು ಮುಂದಿನ ಸಿಎಂ ಸಿದ್ದರಾಮಯ್ಯಗೆ ಜೈ ಎಂದು ಘೋಷಣೆ ಕೂಗಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತೆರಳಿದ ಬಳಿಕ ಸಿದ್ದರಾಮಯ್ಯ ಆಗಮಿಸಿದರು. ಈ ವೇಳೆ ಅವರ ಅಭಿಮಾನಿಗಳು ಮುಂದಿನ ಸಿಎಂ ಸಿದ್ದರಾಮಯ್ಯಗೆ ಜೈ ಎಂದು ಘೋಷಣೆ ಕೂಗಿದರು.