ಕೇಂದ್ರ ಬಿಜೆಪಿ ಸರ್ಕಾರ ದೇಶವನ್ನು ಸರ್ವ ರಂಗಗಳಲ್ಲೂ ಸಶಕ್ತಗೊಳಿಸುವ ಮೂಲಕ ವಿಶ್ವದ ಬಲಾಢ್ಯ ರಾಷ್ಟ್ರವನ್ನಾಗಿ ರೂಪಿಸಿದೆ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಹೇಳಿದರು
ಚಿಕ್ಕೋಡಿ (ಜೂ.9) ಕೇಂದ್ರ ಬಿಜೆಪಿ ಸರ್ಕಾರ ದೇಶವನ್ನು ಸರ್ವ ರಂಗಗಳಲ್ಲೂ ಸಶಕ್ತಗೊಳಿಸುವ ಮೂಲಕ ವಿಶ್ವದ ಬಲಾಢ್ಯ ರಾಷ್ಟ್ರವನ್ನಾಗಿ ರೂಪಿಸಿದೆ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಹೇಳಿದರು.
ಹಿರೇಕೋಡಿ ಗ್ರಾಮದಲ್ಲಿ ಬುಧವಾರ ನಡೆದ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರ ಕೇಂದ್ರ ಸರ್ಕಾರಕ್ಕೆ 9 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಮಹಾಜನ ಸಂಪರ್ಕ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ 9 ವರ್ಷಗಳಲ್ಲಿ ಉಜ್ವಲ ಯೋಜನೆಯಡಿ ದೇಶದ 9.60 ಕೋಟಿ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ, ಎರಡು ವರ್ಷಗಳಿಂದ 80 ಕೋಟಿ ಕುಟುಂಬಗಳಿಗೆ ಉಚಿತ ಪಡಿತರ, ಪಿಎಂ ಆವಾಸ್ ಯೋಜನೆಯಡಿ 3 ಕೋಟಿಗೂ ಅಧಿಕ ಮನೆಗಳು, ಸ್ವಚ್ಛ ಭಾರತ ಯೋಜನೆಯಡಿ 11.72 ಕೋಟಿ ಶೌಚಾಲಯಗಳ ನಿರ್ಮಾಣ, ಜೆಜೆಎಂ ಯೋಜನೆಯಡಿ 12 ಕೋಟಿ ಅಧಿಕ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ, 27 ಕೋಟಿಗೂ ಹೆಚ್ಚು ಜನರಿಗೆ ಮುದ್ರಾ ಯೋಜನೆಯಡಿ ಸಾಲ ವಿತರಿಸಲಾಗಿದೆ ಎಂದು ತಿಳಿಸಿದರು.
ಸಾಹುಕಾರ್ ವಿರುದ್ದ ಸ್ವಪಕ್ಷೀಯ ಸಂಸದನ ಸಮರ: ರಮೇಶ್‌ಗೆ ಅಣ್ಣಸಾಹೇಬ್ ಎಚ್ಚರಿಕೆ
ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ರಾಜ್ಯದಲ್ಲಿ ಸುಳ್ಳು ಗ್ಯಾರಂಟಿಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್, ಜನರಿಗೆ ನೀಡಿರುವ ಭರವಸೆಗಳನ್ನು ಮರೆತು ಸುಳ್ಳು ಹೇಳಿದ ಸರ್ಕಾರವಾಗಿದೆ. ಜನ ಶೀಘ್ರದಲ್ಲೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಕಾಂಗ್ರೆಸ್ ಸರ್ಕಾರ ಖಜಾನೆ ಖಾಲಿ ಮಾಡಿಯಾದರೂ ಗ್ಯಾರಂಟಿಗಳನ್ನು ನೀಡಲೇ ಬೇಕು. ಇದರಿಂದ ಪಾಕಿಸ್ತಾನಕ್ಕೆ ಬಂದಿರುವ ಆರ್ಥಿಕ ದುಸ್ಥಿತಿ ಕರ್ನಾಟಕಕ್ಕೂ ಬರಲಿದೆ. ಅಲ್ಲದೇ ರಾಜ್ಯದಲ್ಲಿ ಅರಾಜಕತೆ ಉಂಟಾಗಲಿದೆ ಎಂದು ತಿಳಿಸಿದರು.
ಬಿಜೆಪಿ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ಡಾ.ರಾಜೇಶ ನೇರ್ಲೆ, ಮಂಡಳ ಅಧ್ಯಕ್ಷ ಸಂಜಯ ಪಾಟೀಲ ಮಾತನಾಡಿದರು. ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡೆ, ಬಿಜೆಪಿ ಚಿಕ್ಕೋಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ ಅಪ್ಪಾಜಿಗೋಳ, ಮುಖಂಡರಾದ ಸುಭಾಷ ಚೌಗಲೆ, ಸುದರ್ಶನ ಚೌಗಲೆ, ಹುಮಾಯೂನ್ ಪಟೇಲ್, ಅನ್ನಪ್ಪ ಮೋಳಕೆ, ಮಲ್ಲಿಕಾರ್ಜುನ ಚೌಗಲೆ, ರೇವಯ್ಯ ಹಿರೇಮಠ ಉಪಸ್ಥಿತರಿದ್ದರು. ಚಿಕ್ಕೋಡಿ ತಾಲೂಕಿನ ಕೇರೂರ ಮತ್ತು ನೇಜ್ ಜಿಲ್ಲಾ ಪಂಚಾಯತಿ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಅಭಿಯಾನ ನಡೆಸಲಾಯಿತು. ಪಿಪಿಟಿ ಮೂಲಕ ಸರ್ಕಾರದ ಸಾಧನೆಗಳನ್ನು ಪ್ರದರ್ಶಿಸಲಾಯಿತು.
ಭಾರತ ಅಭಿವೃದ್ಧಿ ಪಥವನ್ನು ಪ್ರಧಾನಿ ಮೋದಿ ಬದಲಿಸಿದ್ದಾರೆ: ಶಾಸಕ ಸಿ.ಸಿ.ಪಾಟೀಲ್
ದೇಶ ಸಾರಿಗೆ, ಸಂಪರ್ಕ ಕ್ಷೇತ್ರದಲ್ಲೂ ಅಮೂಲಾಗ್ರ ಬೆಳವಣಿಗೆ ಕಂಡಿದೆ. 24 ರಷ್ಟಿದ್ದ ವಿಮಾನ ನಿಲ್ದಾಣಗಳನ್ನು 144ಕ್ಕೆ ಹೆಚ್ಚಿಸಿದೆ. ಗ್ರಾಮೀಣ ಹಾಗೂ ರಾಷ್ಟಿ$›ೕಯ ಹೆದ್ದಾರಿಗಳನ್ನು ವಿಸ್ತರಿಸಿದೆ. ಮೇಟ್ರೊ ರೈಲು ಸೇವೆಯನ್ನು ಹಲವು ಮಹಾನಗರಗಳಿಗೆ ಪರಿಚಯಿಸಿದೆ. 58 ಕೋಟಿ ಜನರಿಗೆ ಆಯುಷ್ಮಾನ್ ಭಾರತ ಆರೋಗ್ಯ ಸೇವೆ ಒದಗಿಸಿದೆ. ವೈದ್ಯಕೀಯ ಕಾಲೇಜುಗಳನ್ನು 387 ರಿಂದ 697ಕ್ಕೆ ಹೆಚ್ಚಿದೆ ಇಂತಹ ಹತ್ತು ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದು, ದೇಶ ವಿಶ್ವಗುರುವಾಗುವತ್ತ ದಾಪುಗಾಲು ಇಟ್ಟಿದೆ.
ಅಣ್ಣಾಸಾಹೇಬ ಜೊಲ್ಲೆ, ಸಂಸದರು.