ಆಮ್ ಆದ್ಮಿ ಪಕ್ಷದ ವತಿಯಿಂದ ಜನರ ಸಮಸ್ಯೆಗಳನ್ನು ಅರಿಯುವ ಸಲುವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಎಲ್ಲಾ ಸೇರೋಣ ಬನ್ನಿ ಮಾತಾಡೋಣ ಸಂವಾದ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಎಎಪಿ ರಾಜಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು.
- ವರದಿ: ವರದರಾಜ್
ದಾವಣಗೆರೆ (ಸೆ.12 ) : ಆಮ್ ಆದ್ಮಿ ಪಕ್ಷದ ವತಿಯಿಂದ ಜನರ ಸಮಸ್ಯೆಗಳನ್ನು ಅರಿಯುವ ಸಲುವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಎಲ್ಲಾ ಸೇರೋಣ ಬನ್ನಿ ಮಾತಾಡೋಣ ಸಂವಾದ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಎಎಪಿ ರಾಜಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು.
undefined
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ 12ರಿಂದ ದಾವಣಗೆರೆ ಜಿಲ್ಲೆಯ ಗ್ರಾಮಾಂತರ ಜನರ ಬಳಿ ಬನ್ನಿ ಮಾತಾಡೋಣ ಎಂಬ ಶೀರ್ಷಿಕೆಯೊಂದಿಗೆ ಸ್ಥಳೀಯ ನಾಗರೀಕರ ರೈತರ ಹಾಗೂ ಜನ ಸಾಮಾನ್ಯರ ಕುಂದು ಕೊರತೆಗಳನ್ನು ನೇರವಾಗಿ ತಿಳಿದು ಕೊಳ್ಳಲು ದಾವಣಗೆರೆ ಜಿಲ್ಲೆಯ ಮಾಯಕೊಂಡ ಕ್ಷೇತ್ರದ ವಡ್ಡಿನಹಳ್ಳಿಯಲ್ಲಿ ಇಂದು ಸಂಜೆ 4ಕ್ಕೆ ಸಂವಾದ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಮುಂಬರುವ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಸ್ಥಳೀಯ ಚುನಾವಣೆಯ ಬಗ್ಗೆ ಜಿಲ್ಲೆಯ ಪದಾಧಿಕಾರಿಗಳ ಜೊತೆಗೆ ಸಂವಾದ ನಡೆಸಲಿದ್ದು ಇದರ ಜೊತೆಯಲ್ಲಿ ಹೊಸದಾಗಿ ಆಯ್ಕೆಗೊಂಡ ಜಿಲ್ಲಾ ಪದಾಧಿಕಾರಿಗಳಿಗೆ ಪದಗ್ರಹಣ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ದಾವಣಗೆರೆಯಲ್ಲಿ ಲೋಕಸಮರಕ್ಕೆ ತಯಾರಿ ಶುರು: ಶಾಮನೂರು ಕುಟುಂಬದಿಂದಲೇ ಕಣಕ್ಕಿಳೀತರಾ ಅಭ್ಯರ್ಥಿ..?
ಸಂವಾದದಲ್ಲಿ ಆರು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಅದರಲ್ಲಿ ಪ್ರಮುಖವಾಗಿ ಶಿಕ್ಷಣದ ಗುಣಮಟ್ಟ ಸರಿ ಪಡಿಸದೇ ಏಳಿಗೆ ಸಾಧ್ಯವೇ, ಆರೋಗ್ಯ ವ್ಯವಸ್ಥೆ ಸರಿ ಪಡಿಸದೇ ಸಮಾಜ ಸದೃಢವಾಗಿರಲು ಸಾಧ್ಯವೇ, ರೈತರ ಶ್ರಮಕ್ಕೆ ತಕ್ಕ ಬೆಲೆ ಸಿಗದಿದ್ದರೆ ರೈತನ ಋಣ ತೀರಿಸುವುದು ಸಾಧ್ಯವೇ, ಮಹಿಳೆಯರಿಗೆ ಸಮಾನ ಅವಕಾಶ ಇಲ್ಲದೆ, ಸಮಾಜದ ಏಳಿಗೆ ಸಾಧ್ಯವೇ, ಭ್ರಷ್ಟಾಚಾರ ತಾಂಡವಾಡುತ್ತಿದ್ದರೆ ಶಿಷ್ಟಾಚಾರದ ಜೀವನ ಸಾಧ್ಯವೇ, ಯುವಕರಿಗೆ ಅವಕಾಶ, ಉದ್ಯೋಗ, ಕಲ್ಪಿಸದೇ ದೇಶದ ಅಭಿವೃದ್ಧಿ ಸಾಧ್ಯವೆ ಹೀಗೆ ಹಲವಾರು ವಿಷಯಗಳು ಚರ್ಚಿಸಲಾಗುವುದು ಎಂದು ತಿಳಿಸಿದರು.
ಮೂರು ಪಾರ್ಟಿಯಲ್ಲಿ 100 ಕೋಟಿಗಿಂತಲು ಕಡಿಮೆ ಇರುವ ಜನಪ್ರತಿನಿಧಿಗಳಿಲ್ಲ..ಇದೆಲ್ಲಾ ಮೆಣಸಿನ ಕಾಯಿ ಆಲೂಗಡ್ಡೆ ಬೆಳೆದು ಮಾಡಿದ್ರಾ...ಇವರಿಂದ ಯಾವ ನೈತಿಕ ಸರ್ಕಾರವನ್ನು ನಿರೀಕ್ಷೆ ಮಾಡುವುದಕ್ಕೆ ಸಾಧ್ಯ.ಭ್ರಷ್ಟಾಚಾರ ರಹಿತ ಸರ್ಕಾರ ಕೋಡೊದಕ್ಕೆ ಇವರಿಂದ ಸಾಧ್ಯವಿಲ್ಲ. ಅಧಿಕಾರಿಗಳು ರಾಜಕಾರಣಿಗಳು ಶಾಮೀಲಾಗಿ ಖಜಾನೆ ಲೂಟಿ ಮಾಡುತ್ತಿದ್ದಾರೆ.ಗ್ಯಾರಂಟಿ ಯೋಜನೆಗಳಿಗೆ 80 ಸಾವಿರ ಕೋಟಿ ಹಣ ಕೊಟ್ಟು ಅಭಿವೃದ್ದಿ ಕೆಲಸಗಳು ಕುಂಠಿತವಾಗಿವೆ.ಉಚಿತವಾದ ಶಿಕ್ಷಣ ನೀಡಲು ಇವರಿಂದ ಸಾಧ್ಯವಿಲ್ಲ.ಒಳ್ಳೆ ಸ್ಕೂಲ್ ಮಾಡೋದಕ್ಕೆ ಎಂಪಿ ಎಂಎಲ್ ಗಳೇ ಬಿಡೋದಿಲ್ಲ.
ಪಕ್ಷದ ವಿರುದ್ಧ ಬಹಿರಂಗ ಹೇಳಿಕೆ: ರೇಣುಕಾಚಾರ್ಯ ವಿರುದ್ಧ ರಾಜ್ಯ ಸಮಿತಿಗೆ ದೂರು
ಡಿ ಸುಧಾಕರ್ ಇರಲಿ ಯಾರಾದ್ರು ಇರಲಿ ತಪ್ಪು ಮಾಡಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮಗಳಾಗಬೇಕು. ಒಬ್ಬ ಮಿನಿಸ್ಟರ್ ಎಂ ಎಲ್ ಗಳನ್ನು ಜೈಲಿಗೆ ಕಳಿಸಿದ್ರೆ ಸ್ವಲ್ಪನಾದ್ರು ಎಚ್ಚೆತ್ತುಕೊಳ್ಳುತ್ತಾರೆ.ಈಶ್ವರಪ್ಪನ ಪ್ರಕರಣದಲ್ಲಿ ಜೈಲಿಗೆ ಕಳಿಸಿದ್ರೆ ಒಂದು ಮೇಸೆಜ್ ಹೋಗುತ್ತಿತ್ತು. ಆದ್ರೆ ಆ ತರ ವಾತವರಣ ನಮ್ಮಲ್ಲಿ ಇಲ್ಲ ಎಂದು ಅಭಿಪ್ರಾಯಿಸಿದರು.