ನನ್ನ ಜೊತೆ ಚರ್ಚೆಗೆ ಬನ್ನಿ: ಎಚ್‌ಡಿಕೆಗೆ ಕಾಂಗ್ರೆಸ್‌ ಶಾಸಕ ರಾಯರಡ್ಡಿ ಸವಾಲು

By Govindaraj SFirst Published Dec 31, 2023, 4:23 AM IST
Highlights

‘ವಿಶ್ವದ ದೊಡ್ಡ ಅರ್ಥಿಕ ತಜ್ಞನೋ, ಗ್ರಾಮದ ಆರ್ಥಿಕ ತಜ್ಞನೋ ಕುಮಾರಸ್ವಾಮಿ ಅವರಿಗೆ ಯಾಕೆ ಬೇಕು. ನನ್ನ ಜತೆಗೆ ಚರ್ಚೆಗೆ ಕುಳಿತುಕೊಳ್ಳಲಿ, ನನಗೆ ಗೊತ್ತಿದೆಯೋ? ಅವರಿಗೆ ಗೊತ್ತಿದೆಯೋ? ಸಾಬೀತಾಗಲಿ’ ಎಂದು ಕಾಂಗ್ರೆಸ್‌ ಶಾಸಕ ಬಸವರಾಜ ರಾಯರಡ್ಡಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸವಾಲು ಎಸೆದಿದ್ದಾರೆ.
 

ಬೆಂಗಳೂರು (ಡಿ.31): ‘ವಿಶ್ವದ ದೊಡ್ಡ ಅರ್ಥಿಕ ತಜ್ಞನೋ, ಗ್ರಾಮದ ಆರ್ಥಿಕ ತಜ್ಞನೋ ಕುಮಾರಸ್ವಾಮಿ ಅವರಿಗೆ ಯಾಕೆ ಬೇಕು. ನನ್ನ ಜತೆಗೆ ಚರ್ಚೆಗೆ ಕುಳಿತುಕೊಳ್ಳಲಿ, ನನಗೆ ಗೊತ್ತಿದೆಯೋ? ಅವರಿಗೆ ಗೊತ್ತಿದೆಯೋ? ಸಾಬೀತಾಗಲಿ’ ಎಂದು ಕಾಂಗ್ರೆಸ್‌ ಶಾಸಕ ಬಸವರಾಜ ರಾಯರಡ್ಡಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸವಾಲು ಎಸೆದಿದ್ದಾರೆ.

ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿ ತಮ್ಮ ನೇಮಕವನ್ನು ಟೀಕಿಸಿರುವ ಕುಮಾರಸ್ವಾಮಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಅವರು, ನನ್ನ ಜೊತೆ ಚರ್ಚೆಗೆ ಕುಳಿತುಕೊಳ್ಳಲಿ. ನನಗೆ ಏನು ಗೊತ್ತಿದೆಯೋ ಮಾತನಾಡುತ್ತೇನೆ, ಅವರಿಗೆ ಏನು ಗೊತ್ತಿದೆಯೋ ಮಾತನಾಡಲಿ, ನನ್ನ ಬಗ್ಗೆ ಮಾತನಾಡುವ ಇವರು ದೊಡ್ಡ ಆರ್ಥಿಕ ತಜ್ಞರಾ? ಪ್ರತಿಯೊಬ್ಬರಿಗೂ ಅವರದೇ ಆದ ನೈಪುಣ್ಯತೆ ಇರುತ್ತೆ. ಹಾಗೆಲ್ಲಾ ಹಗುರವಾಗಿ ಮಾತಾಡಬಾರದು ಎಂದರು.

ನನ್ನದೇ ಆದ ಐಡಿಯಾ ಇದೆ: ಸಲಹೆಗಾರ ಸ್ಥಾನ ಕೊಡಿ ಎಂದು ನಾನು ಕೇಳಿಲ್ಲ. ಕರ್ನಾಟಕದಲ್ಲಿ ಮೊದಲ ಬಾರಿಗೆ ಆರ್ಥಿಕ ಸಲಹೆಗಾರ ಸ್ಥಾನ ಕೊಟ್ಟಿದ್ದಾರೆ. ಬಹಳ ದೊಡ್ಡ ಸವಾಲಿನ ಜವಾಬ್ದಾರಿ ಇದೆ. ಇದು. ಸುಮ್ಮನೆ ಕಾರು, ಬೇರೆ ಸೌಲಭ್ಯಕ್ಕಾಗಿ ತಗೊಂಡಿಲ್ಲ. ನನ್ನದೇ ಆದ ಆಲೋಚನೆಗಳಿವೆ. ಮುಖ್ಯಮಂತ್ರಿಗಳೂ ತಜ್ಞರಿದ್ದು ಅವರೊಂದಿಗೆ ಕೂಡಿ ಕೆಲಸ ಮಾಡುತ್ತೇನೆ ಎಂದರು.

ಕಟ್ಟಕಡೆಯ ವ್ಯಕ್ತಿಗೂ ಸರ್ಕಾರಿ ಸೌಲಭ್ಯ ತಲುಪಿಸುವೆ: ಸಂಸದ ಸಂಗಣ್ಣ ಕರಡಿ

ಖರ್ಗೆ ಪ್ರಧಾನಿ ಆಗಲಿ: ರಾಹುಲ್ ಗಾಂಧಿ‌ ಪ್ರಧಾನಮಂತ್ರಿ ಆಗಲಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಯರೆಡ್ಡಿ, ಅವರ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಿಂದೆಯೂ ನಾನು ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿ ಆಗಬೇಕು ಎಂದಿದ್ದೆ. ಈಗಲೂ ನನ್ನ ಮಾತಿಗೆ ಬದ್ಧವಾಗಿದ್ದೇನೆ. ಆದರೆ ಪಕ್ಷದ ತೀರ್ಮಾನ ಅಂತಿಮ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

click me!