ಸ್ವಾಭಿಮಾನಕ್ಕೆ ಪೆಟ್ಟು ಬಿದ್ರೆ ತಿರುಗಿ ಬೀಳೋದು ಗೊತ್ತಿದೆ: ಜಗದೀಶ್‌ ಶೆಟ್ಟರ್‌

By Govindaraj SFirst Published Dec 31, 2023, 3:30 AM IST
Highlights

ಬಣಜಿಗ ಸಮಾಜದವರು ಸ್ವಾಭಿಮಾನಿಗಳು. ನಮ್ಮ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದರೆ ಅದನ್ನು ಧೈರ್ಯದಿಂದ ಎದುರಿಸೋದೂ ಗೊತ್ತು, ಪೆಟ್ಟು ಕೊಟ್ಟವರಿಗೆ ಮರಳಿ ಪೆಟ್ಟು ಕೊಡುವುದೂ ಸಮಾಜಕ್ಕೆ ಗೊತ್ತಿದೆ ಎಂದು ಮಾಜಿ ಸಿಎಂ, ವಿಧಾನ ಪರಿಷತ್ ಸದಸ್ಯ ಜಗದೀಶ್‌ ಶೆಟ್ಟರ್‌ ಚುನಾವಣೆಗೆ ತಮಗೆ ಬಿಜೆಪಿ ಟಿಕೆಟ್ ತಪ್ಪಿದ್ದನ್ನು ನೆನೆದು ಮತ್ತೆ ಅಸಮಾಧಾನ ಹೊರಹಾಕಿದರು. 

ವಿಜಯಪುರ (ಡಿ.31): ಬಣಜಿಗ ಸಮಾಜದವರು ಸ್ವಾಭಿಮಾನಿಗಳು. ನಮ್ಮ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದರೆ ಅದನ್ನು ಧೈರ್ಯದಿಂದ ಎದುರಿಸೋದೂ ಗೊತ್ತು, ಪೆಟ್ಟು ಕೊಟ್ಟವರಿಗೆ ಮರಳಿ ಪೆಟ್ಟು ಕೊಡುವುದೂ ಸಮಾಜಕ್ಕೆ ಗೊತ್ತಿದೆ ಎಂದು ಮಾಜಿ ಸಿಎಂ, ವಿಧಾನ ಪರಿಷತ್ ಸದಸ್ಯ ಜಗದೀಶ್‌ ಶೆಟ್ಟರ್‌ ಚುನಾವಣೆಗೆ ತಮಗೆ ಬಿಜೆಪಿ ಟಿಕೆಟ್ ತಪ್ಪಿದ್ದನ್ನು ನೆನೆದು ಮತ್ತೆ ಅಸಮಾಧಾನ ಹೊರಹಾಕಿದರು. 

ಜಿಲ್ಲೆಯ ಬಬಲೇಶ್ವರ ತಾಲೂಕಿನ ಚಿಕ್ಕ ಗಲಗಲಿ ಬಳಿ ನಡೆದ ಬಣಜಿಗ ರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನನಗೆ ಟಿಕೆಟ್ ತಪ್ಪಿಸಿದ್ದರಿಂದಾಗಿ ಆ ವೇಳೆ ರಾಜ್ಯದ ಇಡೀ ನಮ್ಮ ಸಮಾಜದದಿಂದ ನನಗೆ ಸಿಕ್ಕ ಬೆಂಬಲವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರಲ್ಲದೆ, ಬರುವಂಥ ದಿನಗಳಲ್ಲಿ ಸರಿಯಾದ ದಾರಿಯಲ್ಲಿ ಹೋಗಬೇಕು. ಇಲ್ಲದಿದ್ದರೆ ಇದೇ ರೀತಿ ಪೆಟ್ಟುಗಳು ಬೀಳತ್ತಾ ಹೋಗುತ್ತವೆ ಎಂದೂ ಶೆಟ್ಟರ್‌ ಸಮುದಾಯಕ್ಕೆ ಎಚ್ಚರಿಕೆ ನೀಡಿದರು.

ಸಂಚಾರಿ ನಿಯಮ ಪಾಲಿಸಿದರೆ ಅಪಘಾತ ಆಗೋದಿಲ್ಲ: ಸಚಿವ ಮಧು ಬಂಗಾರಪ್ಪ

ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ನಮ್ಮ ತಂದೆಯವರು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಅವರ ಹಾದಿಯಲ್ಲಿ ಸಾಗಿ ನಾನೂ ಮಾಡುವೆ ಎಂದು ಹೇಳಿದರು. ರಾಮದುರ್ಗದ ಶಾಸಕ, ವಿಧಾನಸಭೆಯ ಮುಖ್ಯ ಸುಚೇತಕ ಅಶೋಕ ಪಟ್ಟಣ ಮಾತನಾಡಿ, ನಾನು ಯಾವತ್ತೋ ಮಂತ್ರಿ ಆಗಬೇಕಿತ್ತು. ಅತ್ತ ಶರಣಪ್ರಕಾಶ್ ಪಾಟೀಲ್‌ಗೆ ಖರ್ಗೆ ಬೆಂಬಲ ನೀಡುತ್ತಿದ್ದಾರೆ. ಈಶ್ವರ ಖಂಡ್ರೆ ಅವರಿಗೆ ವೀರಶೈವ ಮಹಾಸಭಾದವರೇ ಬೆಂಬಲ ನೀಡುತ್ತಿದ್ದಾರೆ. ನಮಗೆ ಯಾರದೂ ಬೆಂಬಲ ಇಲ್ಲ. ಸಿಎಂ ಸಿದ್ದರಾಮಯ್ಯ ಅವರಿಗೆ ನಾನು ಒಂದ್ ಸಾರಿ ಮಂತ್ರಿ ಆಗಬೇಕು ಅಂದಿದ್ದೇನೆ. ಎರಡು ವರ್ಷ ಆದ್ಮೇಲೆ ಮಾಡ್ತೀನಿ ಅಂದಿದ್ದಾರೆ ಎಂದರು.

ಯತ್ನಾಳ್‌ ಮಾಹಿತಿ ಮೇಲೆ ತನಿಖೆ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ: ಭ್ರಷ್ಟಾಚಾರದ ಬಗ್ಗೆ ಬಿಜೆಪಿಯವರಿಗೆ ಮಾತನಾಡುವ ಯಾವ ನೈತಿಕ ಹಕ್ಕಿಲ್ಲ. ಇದೀಗ ಎಲ್ಲಾ ಹೊರಗೆ ಬರುತ್ತಿದೆ. ಬಿಜೆಪಿಯ ಯತ್ನಾಳ್‌ರಿಂದಲೇ ಮಾಹಿತಿ ಪಡೆದು ತನಿಖೆ ಮಾಡಿದಲ್ಲಿ ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ ನಾಯಕ ಜಗದೀಶ್‌ ಶೆಟ್ಟರ್‌ ಹೇಳಿದರು. ನಗರದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಿದ್ದರಾಮಯ್ಯನವರ ಸರ್ಕಾರ ತನಿಖೆ ಸಮಿತಿ ರಚಿಸಿದೆ. ತನಿಖೆಯೂ ನಡೆಯುತ್ತಿದೆ ಎಂದರು.

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬಿಎಂಟಿಸಿ ಬಸ್‌ ನಿಲ್ದಾಣ ಲೋಕಾರ್ಪಣೆ: ರಾಮಲಿಂಗಾರೆಡ್ಡಿ, ಮುನಿಯಪ್ಪ ಭಾಗಿ

ಇನ್ನು, ಕೋವಿಡ್‌ ಸಂದರ್ಭ ಬಿಜೆಪಿಯ 40 ಪರ್ಸೆಂಟ್ ಸರ್ಕಾರದ ಬಗ್ಗೆ ಕಾಂಗ್ರೆಸ್ ಆರೋಪ ಮಾಡಿತ್ತು ಎಂದು ನೆನಪಿಸಿದರಲ್ಲದೆ, ಇದಕ್ಕೆ ಪೂರಕವಾಗಿ ಬಿಜೆಪಿ ಸರ್ಕಾರದ ವಿರುದ್ಧ ಬಸನಗೌಡ ಪಾಟೀಲ್‌ ಯತ್ನಾಳ್ 40,000 ಕೋಟಿ ರು. ಅಕ್ರಮ ಆರೋಪಿಸಿದ್ದಾರೆ. ಈ ವಿಚಾರದ ಬಗ್ಗೆ ಯತ್ನಾಳ್ ಸರಿಯಾದ ದಾಖಲೆ ಕೊಟ್ಟರೆ ತನಿಖೆಗೆ ಅನುಕೂಲ ಆಗಲಿದೆ ಎಂದವರು ಹೇಳಿದರು.

click me!