ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಕಳೆದುಕೊಂಡಿದ್ದು 55 ಕೋಟಿ ರೂ. ಜಮೀನು, ಅವರಿಗೆ ಸಿಕ್ಕಿದ್ದು 15 ಕೋಟಿ ಆಸ್ತಿ

By Sathish Kumar KHFirst Published Jul 4, 2024, 1:00 PM IST
Highlights

ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಂದ ಮುಡಾ ವಶಕ್ಕೆ ಪಡೆದ 3 ಎಕೆರೆ 16 ಗುಂಟೆ ಜಮೀನು 55 ಕೋಟಿ ರೂ. ಮೌಲ್ಯದ್ದಾಗಿದೆ. ಆದರೆ, ಅವರಿಗೆ ಕೇವಲ 15 ಕೋಟಿ ರೂ. ಮೌಲ್ಯದ ಜಮೀನನ್ನು ಕೊಟ್ಟಿದೆ.

ಬೆಂಗಳೂರು (ಜು.04): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಯವರು  ಕಳೆದುಕೊಂಡಿರುವ ಜಮೀನಿನ ಮೌಲ್ಯ 55 ಕೋಟಿ ರೂಪಾಯಿ. ಆದರೆ, ಅವರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಕೊಟ್ಟಿರುವ ನಿವೇಶನ ಕೇವಲ 15 ಕೋಟಿ ರೂ. ಮೌಲ್ಯದ್ದಾಗಿದೆ. ಇದರಿಂದ ಅವರಿಗೇ ಹೆಚ್ಚು ನಷ್ಟವಾಗಿದ್ದರೂ, ವಿಪಕ್ಷದವರು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪ್ರತಿಭಟನೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಸಿಎಂ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ಧಿಗೋಷ್ಠಿ ಏರ್ಪಡಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿಗೆ ಕೊಟ್ಟಿರುವ ಸೈಟ್ ಬಗ್ಗೆ ವಿಪಕ್ಷಗಳು ಆರೋಪ ಮಾಡುತ್ತಿವೆ. ಇದೊಂದು ಹಗರಣ ಎಂಬ ರೀತಿಯಲ್ಲಿ ಮಾಡಲು ವಿಪಕ್ಷಗಳು ಹೊರಟಿದೆ. ಇದರಲ್ಲಿ ವಿಪಕ್ಷಗಳು ರಾಜಕೀಯ ಮಾಡಲು ಹೊರಟಿದೆ. ಪಾವರ್ತಿ ಅವರಿಗೆ ಸೇರಿದ್ದ 3 ಎಕರೆ 16 ಗುಂಟೆ ಜಮೀನು ಮುಡಾ ವಶಕ್ಕೆ ಪಡೆದು ನಿವೇಶನಗಳನ್ನಾಗಿ ಮಾಡಿ ಮಾರಾಟ ಮಾಡಿದೆ.

ಮುಡಾ ಬಹುಕೋಟಿ ಹಗರಣ; ಗೋಲ್ಮಾಲ್ ಸಿಎಂ, ₹ 4,000 ಕೋಟಿ ಗುಳುಂ : ಆರ್. ಅಶೋಕ ಟೀಕೆ

ಆದರೆ, ಪಾರ್ವತಮ್ಮ ಅವರಿಗೆ ಅವರ ಸಹೋದರ ಖರೀದಿ ಮಾಡಿದ್ದ ಜಮೀನನ್ನು ದಾನದ ರೀತಿಯಲ್ಲಿ ವರ್ಗಾವಣೆ ಮಾಡಿರುತ್ತಾರೆ. ಮೈಸೂರು ನಗರ ಹೊರ ವರ್ತುಲ ರಸ್ತೆ (ರಿಂಗ್ ರೋಡ್) ಪಕ್ಕದಲ್ಲಿದ್ದ ಈ ಜಮೀನು ಅಂದು ಕಾಲಿ‌ ಜಾಗವಾಗಿತ್ತು. ಇಲ್ಲಿ ಯಾವುದೇ ಬೆಳೆಯನ್ನು ಬೆಳೆಯುತ್ತಿರಲಿಲ್ಲ. ಆದರೆ, ಅದನ್ನು ಮೂಡಾದವರು ವಶಕ್ಕೆ ಪಡೆದುಕೊಂಡು ಅಲ್ಲಿ ಕಾಮಗಾರಿ ನಿವೇಶನದ ರೂಪ ಕೊಡಲು ಕಾಮಗಾರಿ ಆರಂಭಿಸಿದ್ದಾರೆ. ಅದನ್ನು ನೋಡಿದ ಸಿಎಂ ಪತ್ನಿ ಪಾರ್ವತಮ್ಮ ಅವರು ಮೂಡಾಗೆ ತಮ್ಮ ಜಾಗದಲ್ಲಿ ಕಾಮಗಾರಿ ಮಾಡುತ್ತಿದ್ದು, ಸ್ಥಗಿತ ಮಾಡುವಂತೆ ಮನವಿ ಸಲ್ಲಿಸುತ್ತಾರೆ. ಆದರೆ, ಇದನ್ನು ಮೂಡಾದಿಂದ ವಶಕ್ಕೆ ಪಡೆದು ನಿವೇಶನ ಮಾಡಲಾಗುತ್ತಿದ್ದು, ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಸೂಚಿಸುತ್ತಾರೆ.

ಅದರಂತೆ ಪಾರ್ವತಿ ಅವರು ನನ್ನ ಸೈಟ್ ನ ಅಕ್ವೈರ್ ಮಾಡಿದ್ದಕ್ಕೆ ಪರಿಹಾರ ಕೊಡಿ ಎಂದು ಮುಡಾಗೆ ಮನವಿ ಸಲ್ಲಿಸುತ್ತಾರೆ. ಇದಕ್ಕೆ ಪರಿಹಾರ ರೂಪದಲ್ಲಿ ಮುಡಾ ವತಿಯಿಂದ ಪಾರ್ವತಿ ಅವರಿಗೆ ಪ್ರತ್ಯೇಕವಾಗಿ ಜಮೀನು ಕೊಟ್ಟಿದ್ದಾರೆ. ಇನ್ನು ಹಣದ ಬದಲಿಯಾಗಿ 50:50 ನಿಯಮದ ಅಡಿಯಲ್ಲಿ ಕಡಿಮೆ ಜಮೀನು ಕೊಟ್ಟಿದ್ದಾರೆ. ಇದರಿಂದ ಪಾರ್ವತಿಯವರು  ಕಳೆದುಕೊಂಡಿರುವ ಜಮೀನಿನ ಮೌಲ್ಯ 55 ಕೋಟಿ ರೂ. ಆಗಿದ್ದರೆ, ಅವರಿಗೆ ಸಿಕ್ಕಿರುವ ಜಮೀನಿನ ಮೌಲ್ಯ ಕೇವಲ 15 ರಿಂದ 16 ಕೋಟಿ ರೂ. ಆಗಿದೆ ಅಷ್ಟೇ ಎಂದು ಹೇಳಿದರು. ಪಾವರ್ತಿಯವರು 50 - 50 ಅನುಪಾತದಲ್ಲಿ ಅವರು ಅಂದು ಒಪ್ಪದೆ  ಕೋರ್ಟ್ ಗೆ ಹೋಗಿ ಅವರು ಜಮೀನು 3.16 ಎಕರೆ ಅವರು ಪಡೆದುಕೊಳ್ಳಬಹುದಿತ್ತು. ಆದರೆ, ಅದನ್ನು ಮಾಡದೇ ಸುಮ್ಮನಾಗಿದ್ದರು.

ಪಬ್ಲಿಕ್ ಪ್ಲೇಸ್‌ನಲ್ಲಿ ಕಾಲೇಜು ಪ್ರೇಮಿಗಳ ಖುಲ್ಲಂ ಖುಲ್ಲಾ ಹಗ್ಗಿಂಗ್, ಕಿಸ್ಸಿಂಗ್ ಅಂಡ್ ರೊಮ್ಯಾನ್ಸ್!

ಒಟ್ಟಾರೆ, ಮುಖ್ಯಮಂತ್ರಿ ಸಿದ್ದರಾಂಯ್ಯ ಅವರ ಪತ್ನಿ ಪಾರ್ವತಿಯವರು ಕಳೆದುಕೊಂಡ ಜಮೀನಿಗಿಂತ ಕಡಿಮೆ ಪರಿಹಾರ ಸಿಕ್ಕಿದೆ. ಕಳೆದುಕೊಂಡಿದ್ದಕ್ಕಿಂತ ಮೂರರಷ್ಟು ಕಡಿಮೆ ಪರಿಹಾರ ಸಿಕ್ಕಿದೆ. ಅವರು ಹೋರಾಟ ಮಾಡಿ, ಸರಿಯಾದ ಪರಿಹಾರ ಸಿಗದೇ ಸಿಕ್ಕಿದ್ದನ್ನೆ ಒಪ್ಪಿಕೊಂಡಿದ್ದಾರೆ. ಇದಕ್ಕೆ ನೀವೆಲ್ಲರೂ ಶ್ಲಾಘನೆ ಮಾಡಬೇಕು ಎನ್ನುವ ಮೂಲಕ ಮೂಡಾ ಪ್ರಕರಣ ಸಂಬಂಧ ಸಿಎಂ ಮೇಲೆ ವಿಪಕ್ಷಗಳು ಹೊರಿಸಿದ್ದ ಎಲ್ಲಾ ಆರೋಪಗಳನ್ನ ತಳ್ಳಿ ಹಾಕಿದ್ದಾರೆ. ಈ ಪ್ರಕರಣವನ್ನ ತನಿಖೆ‌ ಮಾಡುವ ಅವಶ್ಯಕತೆ ಇಲ್ಲ. ಇದರಲ್ಲಿ ಯಾವುದೇ ಹಗರಣ ನಡೆದಿಲ್ಲ, ಎಲ್ಲವೂ ಪಾರದರ್ಶಕವಾಗಿದೆ ಎಂದು ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ವಿಪಕ್ಷಗಳ ನಾಯಕರಿಗೆ ತಿರುಗೇಟು ನೀಡಿದರು.

click me!