ಕೇಂದ್ರ ಸರ್ಕಾರ ನಮ್ಮಿಂದ ತೆರಿಗೆ ಕಟ್ಟಿಸಿಕೊಂಡು ಬರ ಪರಿಹಾರ ನೀಡಲು ಮೀನಮೇಷ ಎಣಿಸುತ್ತಿದೆ. ಬಿಜೆಪಿ ಆಡಳಿತ ಸಮಯದಲ್ಲಿ ಹಣವನ್ನು ತಿಂದು ಹೋಗಿದ್ದಾರೆ. ನೀರಾವರಿ ಇಲಾಖೆಯಲ್ಲಿ 13 ಸಾವಿರ ಕೋಟಿ, ಲೋಕೋಪಯೋಗಿಯಲ್ಲಿ 9 ಸಾವಿರ ಕೋಟಿ, ಸಣ್ಣ ನೀರಾವರಿಯಲ್ಲಿ 4 ಸಾವಿರ ಕೋಟಿ, ಆರ್ಡಿಪಿಎಸ್ನಲ್ಲಿ 3 ಸಾವಿರ ಕೋಟಿಯನ್ನು ಬಾಕಿ ಉಳಿಸಿದ್ದು, ಇಂತಹ ಕಷ್ಟ ಕಾಲದಲ್ಲಿಯೂ ನಾವು ನಿಮ್ಮ ಜೊತೆಗಿದ್ದು ಕೆಲಸ ಮಾಡುತ್ತಿದ್ದೇವೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಸಿಂಧನೂರು(ಡಿ.31): ಬರ ಪರಿಹಾರ ಬಿಡುಗಡೆ ಗೊಳಿಸುವಂತೆ ಮನವಿ ಮಾಡಿದರು ನಯಾಪೈಸೆ ನೀಡದ ಬಿಜೆಪಿಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಾತು ಎತ್ತಿದರೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಹೇಳುವರು ಆದರೆ ನಮಗೆ ಸಾಥ್ ನೀಡುತ್ತಿಲ್ಲ. ಬಡವರ ಬದುಕನ್ನು ಸುಧಾರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿರುವ ಕಾಂಗ್ರೆಸ್ಸಿನದ್ದು ನಿಜವಾದ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಕೇಂದ್ರ ಸರ್ಕಾರ ನಮ್ಮಿಂದ ತೆರಿಗೆ ಕಟ್ಟಿಸಿಕೊಂಡು ಬರ ಪರಿಹಾರ ನೀಡಲು ಮೀನಮೇಷ ಎಣಿಸುತ್ತಿದೆ. ಬಿಜೆಪಿ ಆಡಳಿತ ಸಮಯದಲ್ಲಿ ಹಣವನ್ನು ತಿಂದು ಹೋಗಿದ್ದಾರೆ. ನೀರಾವರಿ ಇಲಾಖೆಯಲ್ಲಿ 13 ಸಾವಿರ ಕೋಟಿ, ಲೋಕೋಪಯೋಗಿಯಲ್ಲಿ 9 ಸಾವಿರ ಕೋಟಿ, ಸಣ್ಣ ನೀರಾವರಿಯಲ್ಲಿ 4 ಸಾವಿರ ಕೋಟಿ, ಆರ್ಡಿಪಿಎಸ್ನಲ್ಲಿ 3 ಸಾವಿರ ಕೋಟಿಯನ್ನು ಬಾಕಿ ಉಳಿಸಿದ್ದು, ಇಂತಹ ಕಷ್ಟ ಕಾಲದಲ್ಲಿಯೂ ನಾವು ನಿಮ್ಮ ಜೊತೆಗಿದ್ದು ಕೆಲಸ ಮಾಡುತ್ತಿದ್ದೇವೆ ಎಂದರು.
ವೈಚಾರಿಕ ಪ್ರಜ್ಞೆ ಮೂಡಿಸುವುದೆ ನಮ್ಮ ಉದ್ದೇಶ: ಸಚಿವ ಸತೀಶ್ ಜಾರಕಿಹೊಳಿ
ಎಲ್ಲ ಶಾಸಕರು ಕ್ರಿಯಾಶೀಲರಾಗಿದ್ದುಕೊಂಡು ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚು ಒತ್ತನ್ನು ನೀಡಿದರೆ ಇಡೀ ರಾಜ್ಯವೂ ಸಹ ಅಭಿವೃದ್ಧಿಯಾಗುತ್ತದೆ. ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಸಜ್ಜನ ಮತ್ತು ಅಭಿವೃದ್ಧಿ ಬಗ್ಗೆ ಹೆಚ್ಚು ಶ್ರಮಿಸುವ ಶಾಸಕರು. ಇವರಂತೆಯೇ ಎಲ್ಲಾ ಶಾಸಕರು ಶ್ರಮಿಸಿದರೆ ಇಡಿ ರಾಜ್ಯ ಮತ್ತು ಹೈದರಾಬಾದ್ ಕರ್ನಾಟಕ ಹೆಚ್ಚು ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.