ಮೋದಿ ಸುನಾಮಿ ತಡೆಯಲು ಅಸಾಧ್ಯ: ತೇಜಸ್ವಿ ಸೂರ್ಯ

By Kannadaprabha News  |  First Published Dec 31, 2023, 6:35 AM IST

ಇಡೀ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪರ ಸುನಾಮಿ ಅಲೆ ಇದೆ. ದೇಶದ ಜನರು ಮೋದಿ ಅಧಿಕಾರದಲ್ಲಿ ಹೊಸ ಕನಸು ಕಾಣುತ್ತಿದ್ದಾರೆ. ಈ ಬಾರಿ ರಾಜ್ಯದಲ್ಲಿ ಸುಮಾರು 25 ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ. ಇಂತಹ ಗೆಲುವನ್ನು ಯಾರೂ ತಡೆಯಲಾಗದು. ಯಾವುದೇ ಗೋಡೆ, ಅಣೆಕಟ್ಟು ಸಹ ಸುನಾಮಿಯನ್ನು ತಡೆಯಲು ಸಾಧ್ಯವಿಲ್ಲ ಎಂದ ಬೆಂಗಳೂರು ಸಂಸದ ತೇಜಸ್ವಿ ಸೂರ್ಯ 


ಕಲಬುರಗಿ(ಡಿ.31):  ಪ್ರಧಾನಿ ನರೇಂದ್ರ ಮೋದಿಯವರ ಪರ ಇರುವ ಸುನಾಮಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಅವರು ಹೇಳಿದರು.

ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪರ ಸುನಾಮಿ ಅಲೆ ಇದೆ. ದೇಶದ ಜನರು ಮೋದಿ ಅಧಿಕಾರದಲ್ಲಿ ಹೊಸ ಕನಸು ಕಾಣುತ್ತಿದ್ದಾರೆ. ಈ ಬಾರಿ ರಾಜ್ಯದಲ್ಲಿ ಸುಮಾರು 25 ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ. ಇಂತಹ ಗೆಲುವನ್ನು ಯಾರೂ ತಡೆಯಲಾಗದು. ಯಾವುದೇ ಗೋಡೆ, ಅಣೆಕಟ್ಟು ಸಹ ಸುನಾಮಿಯನ್ನು ತಡೆಯಲು ಸಾಧ್ಯವಿಲ್ಲ ಎಂದರು.

Latest Videos

undefined

PSI SCAM: ಎಚ್ಡಿಕೆ, ಇತರರಿಗೆ ಯಾಕೆ ನೋಟಿಸ್‌ ನೀಡಿದ್ದಾರೆಂದು ಗೊತ್ತಿಲ್ಲ: ಸಚಿವ ಪರಮೇಶ್ವರ್‌

ಸಂಸತ್ತಿನಲ್ಲಿ ಒಂದು ಸ್ಥಾನ ಕಡಿಮೆ ಆದರೂ ರಾಜಸ್ಥಾನ್‌ ಆಗುವ ಕುರಿತು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ತೇಜಸ್ವಿ ಸೂರ್ಯ, ಅದು ಅವರ ವೈಯಕ್ತಿಕ ಹೇಳಿಕೆಯಾಗಿದೆ. ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ 28 ಸ್ಥಾನಗಳು ಬರುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ 9 ಜನ ಕಾಂಗ್ರೆಸ್ ಸರ್ಕಾರದಲ್ಲಿನ ಸಚಿವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕುತ್ತಿರುವ ಕುರಿತು ಮಾತನಾಡಿದ ಅವರು, ಹಗಲು ಕಂಡ ಬಾವಿಯಲ್ಲಿ ಯಾರಾದರೂ ರಾತ್ರಿ ಬೀಳುತ್ತಾರೆಯೇ. ಹೀಗಾಗಿ ಕಾಂಗ್ರೆಸ್ ಸಚಿವರು ಲೋಕಸಭೆಗೆ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದರು.

click me!