ಲೋಕಸಭಾ ಚುನಾವಣೆ ವೇಳೆ ಡಾ| ಮಂಜುನಾಥ್‌ರನ್ನು ಗೆಲ್ಲಿಸಲು ಯೋಗೇಶ್ವರ್ ಸಹಾಯ ಮಾಡಿದರು. ಆದರೂ ಉಪ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡದೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿಯವರು ಅನ್ಯಾಯ ಮಾಡಿದರು. ಈ ಚುನಾವಣೆಯಲ್ಲಿ ನೀರು ಕೊಟ್ಟ ಭಗೀರಥ ಬೇಕಾ?, ಕಣ್ಣೀರು ಹಾಕುವ ನಿಖಿಲ್ ಬೇಕಾ ನಿರ್ಧರಿಸಿ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಚನ್ನಪಟ್ಟಣ(ನ.07): ಚುನಾವಣಾ ಪ್ರಚಾರದ ವೇಳೆ ಮಾಜಿ ಪ್ರಧಾನಿ ದೇವೇಗೌಡರು ಸಿದ್ದರಾಮಯ್ಯನಿಗೆ ಗರ್ವ ಇದೆ, ಅದನ್ನು ಮುರಿಯಬೇಕು ಎಂದಿದ್ದಾರೆ. ನಾನು ಅಧಿಕಾರದಲ್ಲಿದ್ದಾಗ ಗರ್ವಪಟ್ಟಿಲ್ಲ. ಅಧಿಕಾರ ಇಲ್ಲದಿದ್ದಾಗ ಕಣ್ಣೀರೂ ಹಾಕಿಲ್ಲ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಚನ್ನಪಟ್ಟಣದಲ್ಲಿ ಬುಧವಾರ ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ನಡೆಸಿದ ಅವರು, ಲೋಕಸಭಾ ಚುನಾವಣೆ ವೇಳೆ ಡಾ| ಮಂಜುನಾಥ್‌ರನ್ನು ಗೆಲ್ಲಿಸಲು ಯೋಗೇಶ್ವರ್ ಸಹಾಯ ಮಾಡಿದರು. ಆದರೂ ಉಪ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡದೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿಯವರು ಅನ್ಯಾಯ ಮಾಡಿದರು. ಈ ಚುನಾವಣೆಯಲ್ಲಿ ನೀರು ಕೊಟ್ಟ ಭಗೀರಥ ಬೇಕಾ?, ಕಣ್ಣೀರು ಹಾಕುವ ನಿಖಿಲ್ ಬೇಕಾ ನಿರ್ಧರಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಸಿದ್ದುಗೆ ತಾಕತ್ತಿದ್ದರೆ ಮುಡಾ ಪ್ರಕರಣ ಸಿಬಿಐ ತನಿಖೆಗೆ ವಹಿಸಲಿ: ಯಡಿಯೂರಪ್ಪ ಸವಾಲು
ದೇವೇಗೌಡರು ಮೂರ್ನಾಲ್ಕುದಿನ ರಾಮನಗರದಲ್ಲಿ ಠಿಕಾಣಿ ಹೂಡಿದ್ದಾರೆ. ಏನಾದರೂ ಮಾಡಿ ಈ ಬಾರಿ ಮೊಮ್ಮಗನನ್ನು ಗೆಲ್ಲಿಸಬೇಕು ಎಂದು ಹೊರಟಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಮಂಡ್ಯದಲ್ಲಿ ಸೋತಿದ್ದ, ನಂತರ ರಾಮನಗರದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ. ಇದೀಗ ಆತನನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ-ಜೆಡಿಎಸ್‌ನವರು ಸುಳ್ಳು ಆರೋಪ ಮಾಡಿ ನನ್ನ ಮೇಲೆ ಮಸಿ ಬಳಿದು ತಾವು ಮತ್ತೆ ಅಧಿ ಕಾರಕ್ಕೆ ಬರಬೇಕು ಎಂದು ಹುನ್ನಾರ ನಡೆಸಿದ್ದಾರೆ. ಆದರೆ ಅವರ ಈ ದುಷ್ಟ ಪ್ರಯತ್ನ ಯಶಸು ಕಾಣಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿ ದರು. ಬಿಜೆಪಿ-ಜೆಡಿಎಸ್‌ನವರು ಎಷ್ಟೇ ಆರೋಪ ಮಾಡಲಿ, ಸತ್ಯ ನಮ್ಮ ಪರವಾಗಿದೆ. ನಮ್ಮ ಸರ್ಕಾರ ಇನ್ನು ಮೂರೂವರೆ ವರ್ಷ ಇರಲಿದೆ ಎಂದರು.
ಸಿ.ಪಿ.ಯೋಗೇಶ್ವರ್ ಕನ್ವರ್ಟಡ್ ಕಾಂಗ್ರೆಸ್ ಜೆಂಟಲ್‌ಮೆನ್: ದೇವೇಗೌಡ ವಾಗ್ದಾಳಿ
ಗೌಡರು ಈಗ ತಮ್ಮ ಮೊಮ್ಮಗ ನಿಖಿಲ್‌ಗೂ ಅಳೋದು ಕಲಿಸಿದ್ದಾರೆ
'ಆಳು ನಮ್ಮ ಪರಂಪರೆ, ನೀನು ಅಳೋಕೆ ಶುರು ಮಾಡು ಎಂದು ನಿಖಿಲ್‌ಗೂ ಹೇಳಿಕೊಟ್ಟಿದ್ದಾರೆ. ಈಗ ನಿಖಿಲ್ ಸಹ ಅಳುವುದನ್ನು ಕಲಿತುಕೊಂಡಿ ದ್ದಾನೆ. ದೇವೇಗೌಡರ ಕುಟುಂಬದವರಿಗೆ ಸೋಲಿನ ಭಯ ಕಾಡುತ್ತಿದೆ. ಹೀಗಾಗಿ ಎಲ್ಲರೂ ಕಣ್ಣೀರು ಹಾಕುತ್ತಿದ್ದಾರೆ. ದೇವೇಗೌಡರ ಕುಟುಂ ಬದವರಿಗೆ ಭಾವನಾತ್ಮಕವಾಗಿ ಮಾತನಾಡು ವುದು, ಅಳುವುದು ಮಾತ್ರ ಗೊತ್ತು' ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಪ್ರಜ್ವಲ್ ಕೇಸ್ ನೆನೆದು ಹಾಸನದಲ್ಲಿ ಏಕೆ ಅಳಲಿಲ್ಲ?
ದೇವೇಗೌಡರು ಕಟುಕರಿಗೆ ಕಣ್ಣೀರು ಬರಲ್ಲ ಅನ್ನುತ್ತಾರೆ. ಹಾಸನದಲ್ಲಿ ಅನೇಕ ಲೈಂಗಿಕ ಶೋಷಣೆಗಳು ಆದವಲ್ಲ, ಆಗ ದೇವೇಗೌಡರು ಆಳಲಿಲ್ಲ. ಕುಮಾರಸ್ವಾಮಿ, ನಿಖಿಲ್ ಸಹ ಅಳಲಿಲ್ಲ, ಹಾಸನದಲ್ಲಿ ನಿಮ್ಮ ಮೊಮ್ಮಗನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ನೂರಾರು ಹೆಣ್ಣುಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ಅಲ್ಲಿ ಹೋಗಿ ಅಳಿ ಗೌಡ್ರ, ಇಲ್ಲಿ ಅತ್ತರೆ ಏನು ಪ್ರಯೋಜನ? ಎಂದು ಸಿದ್ದರಾಮಯ್ಯ ಕಟುಕಿದರು.