ಸಿಎಂ ಸಿದ್ದರಾಮಯ್ಯನವರೇ ಹಠಮಾರಿತನ ಬಿಟ್ಟು ರಾಜೀನಾಮೆ ನೀಡಿ: ಎಚ್.ವಿಶ್ವನಾಥ್

By Kannadaprabha News  |  First Published Aug 18, 2024, 11:15 AM IST

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು. ಹಠಮಾರಿತನ ಬಿಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಕಿವಿಮಾತು ಹೇಳಿದರು. ಸುದ್ದಿಗಾರರೊಡನೆ ಮಾತನಾಡಿದ ಅವರು, ಕಾನೂನಿಗೆ ತಲೆ ಬಾಗವುದು ಒಳ್ಳೆಯದು. ನಾನು ಸಿದ್ದರಾಮಯ್ಯರಿಗೆ ಮೊದಲೇ ಹೇಳಿದ್ದೆ. ಕೇವಲ 14 ಸೈಟ್ಗಳಿಗೆ ಯಾಕೆ ಹೀಗೆ ಆಡ್ತಿರಾ. 


ಮೈಸೂರು (ಆ.18): ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು. ಹಠಮಾರಿತನ ಬಿಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಕಿವಿಮಾತು ಹೇಳಿದರು. ಸುದ್ದಿಗಾರರೊಡನೆ ಮಾತನಾಡಿದ ಅವರು, ಕಾನೂನಿಗೆ ತಲೆ ಬಾಗವುದು ಒಳ್ಳೆಯದು. ನಾನು ಸಿದ್ದರಾಮಯ್ಯರಿಗೆ ಮೊದಲೇ ಹೇಳಿದ್ದೆ. ಕೇವಲ 14 ಸೈಟ್ಗಳಿಗೆ ಯಾಕೆ ಹೀಗೆ ಆಡ್ತಿರಾ. ಅದೆಲ್ಲವನ್ನೂ ಹಿಂದಕ್ಕೆ ಕೊಟ್ಟು, ತನಿಖೆಗೆ ಸಹಕರಿಸಿ. ನಿಮ್ಮ ದೊಡ್ಡತನ ತೋರಿಸಿ, ನಿಮ್ಮ ಕುರ್ಚಿಗೆ ಗೌರವ ಕೊಡಿ ಅಂದಿದ್ದೆ ಎಂದರು. ಆನಂತರ ತನಿಖೆ ಆದ ಮೇಲೆ ಎಲ್ಲವೂ ಸರಿಯಾಗುತ್ತಿತ್ತು. ಸಿದ್ದರಾಮಯ್ಯ ಅವರಿಗೆ ನಾವು ಹೇಳಿದ ಮಾತುಗಳು ಮುಖ್ಯವಲ್ಲ. 

ಅವರ ಸುತ್ತ ಇರೋರು ಹೇಳೋದು ಮುಖ್ಯ ಅನ್ನಿಸಿದೆ. ಅದಕ್ಕೆ ಈಗ ಈ ಸ್ಥಿತಿ ಬಂದಿದೆ. ನಾನು ರಾಜೀನಾಮೆ ಕೊಡಲ್ಲ ನಾನು ಜಗ್ಗಲ್ಲ, ಬಗ್ಗಲ್ಲ ಅನ್ನೋದೆಲ್ಲ ಬಿಡಬೇಕು. ಕಾನೂನಿಗೆ ಪ್ರತಿಯೊಬ್ಬರು ಗೌರವ ಕೊಡಬೇಕು ಎಂದು ಅವರು ಕಿವಿಮಾತು ಹೇಳಿದರು. ಹಿಂದುಳಿದ ವರ್ಗಗಳ ನಾಯಕರು ಎನಿಸಿಕೊಂಡಿದ್ದೀರಿ. ಒಳ್ಳೆಯ ಕೆಲಸ ಮಾಡಿದ್ದೀರಿ. ಈಗಲೂ ನಿಮ್ಮ ಗೌರವ ಹೆಚ್ಚುತ್ತೆ. ತಕ್ಷಣ ರಾಜೀನಾಮೆ ಕೊಟ್ಟು. ಕುರ್ಚಿಬಿಟ್ಟು ಬನ್ನಿ. ನಿಮ್ಮ ಬಗ್ಗೆ ನಮಗೆ ಗೌರವವಿದೆ ಎಂದು ಅವರು ಹೇಳಿದರು.

Tap to resize

Latest Videos

undefined

ತಮ್ಮ ಕಾರ್ಯಕ್ಷೇತ್ರದ ಅನುಭವ ಕೃತಿಯ ರೂಪ ತಾಳಲಿ: ಮುಂಬೈನ ಕೆಂಪುದೀಪ ಪ್ರದೇಶದ ಹೆಣ್ಣು ಮಗಳೂ ಕೂಡಾ ತನ್ನ ಒಡಲಾಳದಲ್ಲಿ ಅಡಗಿದ್ದ ನೋವು, ಅನುಭವಿಸಿದ ಹಿಂಸೆಯನ್ನು ಕೃತಿ ರೂಪದಲ್ಲಿ ಪ್ರಕಟಿಸಿದ್ದಾಳೆ. ಅಂತವುದದರಲ್ಲಿ ರಾಜಕೀಯ ನಾಯಕರೂ ಕೂಡ ತಮ್ಮ ಅನುಭವವನ್ನು ಪುಸ್ತಕ ರೂಪದಲ್ಲಿ ದಾಖಲಿಸುವ ಪ್ರಯತ್ನ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದರು. ರಾಜಕೀಯವಾಗಿ ಇಂದು ಮಾತನಾಡದವರಿಲ್ಲ. ಅಷ್ಟರಮಟ್ಟಿಗೆ ಸಾಮಾಜಿಕ ಜೀವನದ ಒಳಹೊಕ್ಕಿದೆ. ಆದ್ದರಿಂದ ರಾಜಕೀಯ ಸಾಹಿತ್ಯದ ಕೃತಿಗಳು ಹೆಚ್ಚು ಪ್ರಕಟವಾಗಬೇಕು. 

ಪಶ್ಚಿಮ ಬಂಗಾಳ: ಮಮತಾ ಬ್ಯಾನರ್ಜಿ ಸರ್ಕಾರದಿಂದ ಮಹಿಳಾ ವೈದ್ಯರ ಒಳಿತಿಗಾಗಿ ಹಲವು ಕ್ರಮ

ಅನೇಕರು ತಮ್ಮ ತಮ್ಮ ಕಾರ್ಯಕ್ಷೇತ್ರದ ಅನುಭವವನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಬರೆಯಲು ಬರದಿದ್ದರೆ ಉತ್ತಮ ಲೇಖಕರನ್ನು ಆಯ್ಕೆ ಮಾಡಿಕೊಂಡು ನಿಮ್ಮ ಅನುಭವ ಹೇಳಿ ಬರೆಸಬಹುದು. ಇದರಿಂದ ಮುಂದಿನ ಪೀಳಿಗೆಗೆ ಹಾಗೂ ರಾಜಕೀಯ ಪ್ರವೇಶ ಮಾಡುವವರಿಗೆ ನೆರವಾಗುತ್ತದೆ ಎಂದು ಅವರು ಹೇಳಿದರು. ನನ್ನ ಈ ಕೃತಿಯು ಸ್ನಾತಕೋತ್ತರ ಪದವಿಗೆ ಪಠ್ಯವಾಗಬೇಕು. ನೂತನ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕೂಡ ಪುಸ್ತಕ ಬರೆಯಲಿ ಎಂದು ಅವರು ಕಿವಿಮಾತು ಹೇಳಿದರು.

click me!