ಹಿಂದೆ ಯಡಿಯೂರಪ್ಪ ಅವಧಿಯಲ್ಲಿ ಹಂಸರಾಜ್ ಭಾರದ್ವಾಜ್ ಹಾಕಿ ಕೊಟ್ಟ ಹಾದಿಯಲ್ಲೇ ಈಗಿನ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ನಾನು ಒಂದು ತಿಂಗಳ ಹಿಂದೆಯೇ ಎಲ್ಲಾನಿ ವೇಶನಗಳನ್ನು ಹಿಂದಕ್ಕೆ ಕೊಟ್ಟು ತನಿಖೆ ಮಾಡಿಸಿ ಮೇಲ್ಪಂತಿ ಹಾಕಿ. ಎಲ್ಲಾ ಕಳ್ಳರನ್ನು ಒಳಗೆ ಹಾಕಿಸಿ ಎಂದು ಹೇಳಿದ್ದೆ. ನನ್ನ ಮಾತನ್ನು ಸಿಎಂ ಕೇಳಲಿಲ್ಲ ಎಂದ ಮಾಜಿ ಸಂಸದ ಪ್ರತಾಪ ಸಿಂಹ
ಮೈಸೂರು(ಆ.18): ನಿವೇಶನ ಹಿಂದಿರುಗಿಸಿ ಹಾಲಿ ನ್ಯಾಯಾಧೀಶರಿಂದ ತನಿಖೆ ಮಾಡಿಸಿ ಎಂಬ ನನ್ನ ಕಾಳಜಿ ಅಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅರ್ಥವಾಗಲಿಲ್ಲ. ಹೀಗಾಗಿ ಗಂಡಾಂತರ ಮೈಮೇಲೆ ಎಳೆದು ಕೊಂಡಿರು ಎಂದು ಮಾಜಿ ಸಂಸದ ಪ್ರತಾಪ ಸಿಂಹ ಹೇಳಿದರು.
ಶನಿವಾರ ಸುದ್ದಿಗಾರರೊಡನೆ ಮಾತನಾಡಿದ ಅವರು, ಹಿಂದೆ ಯಡಿಯೂರಪ್ಪ ಅವಧಿಯಲ್ಲಿ ಹಂಸರಾಜ್ ಭಾರದ್ವಾಜ್ ಹಾಕಿ ಕೊಟ್ಟ ಹಾದಿಯಲ್ಲೇ ಈಗಿನ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ನಾನು ಒಂದು ತಿಂಗಳ ಹಿಂದೆಯೇ ಎಲ್ಲಾನಿ ವೇಶನಗಳನ್ನು ಹಿಂದಕ್ಕೆ ಕೊಟ್ಟು ತನಿಖೆ ಮಾಡಿಸಿ ಮೇಲ್ಪಂತಿ ಹಾಕಿ. ಎಲ್ಲಾ ಕಳ್ಳರನ್ನು ಒಳಗೆ ಹಾಕಿಸಿ ಎಂದು ಹೇಳಿದ್ದೆ. ನನ್ನ ಮಾತನ್ನು ಸಿಎಂ ಕೇಳಲಿಲ್ಲ ಎಂದರು.
undefined
ನಿನಗೆ ತಾಕತ್ತು, ಧಮ್ಮು ಇದ್ದರೇ ಸಿಎಂರನ್ನ ಜೈಲಿಗೆ ಕಳುಹಿಸು ನೋಡೋಣ, ಬಿಜೆಪಿ ಶಾಸಕನಿಗೆ ಲಕ್ಷ್ಮಣ್ ಚಾಲೆಂಜ್
ಹವಾಲಾ ಹಗರಣ ದಲ್ಲಿ ಅಡ್ವಾಣಿ ಹೆಸರು ಕೇಳಿ ಬಂದ ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಪ್ರಾಸಿಕ್ಯೂಷನ್ ಗೆ ಆದೇಶವಾದ ಕಾರಣ ಯಡಿಯೂರಪ್ಪ ಅವರೂ ರಾಜೀನಾಮೆ ಕೊಟ್ಟರು. ಕೇಜಿ ವಾಲ್ ಈಗ ಜೈಲಿನಿಂದಲೇ ಆಡಳಿತ ಮಾಡುತ್ತಿದ್ದಾರೆ. ಸಿಎಂ ಯಾವ ಹಾದಿ ಹಾಯ್ದು ಕೊಳ್ಳುತ್ತಾರೋ ನೋಡೋಣ ಎಂದು ಮಾರ್ಮಿಕವಾಗಿ ನುಡಿದರು.
ಪ್ರತಾಪ್‌ಗೆ ಮುಖಾಮುಖಿಯಾದ ಕಾಂಗ್ರೆಸ್ಸಿಗರು ಮಾಜಿ ಸಂಸದ ಪ್ರತಾಪ ಸಿಂಹ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀ ಡುತ್ತಿರುವಾಗಲೇ ಕಾಂಗ್ರೆಸ್ ಪ್ರತಿಭಟನಾಕಾರರು ಮುಖಾಮುಖಿಯಾದರು.