ಕೆಪಿಸಿಸಿ ಕಚೇರಿಯಲ್ಲಿ 'ಸಿಎಂ ಸ್ಪಂದನ: ಹಾಸನ ಡೀಸಿ ಮೇಲೆ ಸಿದ್ದು ಗರಂ..!

By Kannadaprabha News  |  First Published Jul 14, 2024, 8:38 AM IST

ನೂರಾರು ಮಂದಿಯಿಂದ ಮನವಿ ಸ್ವೀಕರಿಸಿದ ಅವರು ಕೆಲವರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದ್ದು, ಉಳಿದವುಗಳನ್ನು ವಿಭಾಗವಾರು ವಿಂಗಡಿಸಿ ಮರು ಮಂಡನೆ ಮಾಡಬೇಕು. ತ್ವರಿತಗತಿ ಯಲ್ಲಿ ಇತ್ಯರ್ಥ ಮಾಡಿ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ


ಬೆಂಗಳೂರು(ಜು.14):  ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಕೆಪಿಸಿಸಿ ಕಚೇರಿಯಲ್ಲಿ 'ಕಾರ್ಯಕರ್ತರೊಂದಿಗೆ ನಿಮ್ಮ ಮುಖ್ಯಮಂತ್ರಿ' ಎಂಬ ಅಹವಾಲು ಸ್ವೀಕಾರ ಕಾರ್ಯಕ್ರಮದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಕಾರ್ಯಕರ್ತರ ಅಹವಾಲು ಆಲಿಸಿದ್ದಾರೆ.

ನೂರಾರು ಮಂದಿಯಿಂದ ಮನವಿ ಸ್ವೀಕರಿಸಿದ ಅವರು ಕೆಲವರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದ್ದು, ಉಳಿದವುಗಳನ್ನು ವಿಭಾಗವಾರು ವಿಂಗಡಿಸಿ ಮರು ಮಂಡನೆ ಮಾಡಬೇಕು. ತ್ವರಿತಗತಿ ಯಲ್ಲಿ ಇತ್ಯರ್ಥ ಮಾಡಿ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Tap to resize

Latest Videos

ಮನವಿ ಪತ್ರ ಕಸದ ಪಾಲು! ಸಿಎಂ ಸ್ವೀಕರಿಸಿದ್ದ ಅಹವಾಲು ಕಸದ ರಾಶಿಯಲ್ಲಿ ಪತ್ತೆ !

ಪಹಣಿಗೆ ಸಂಬಂಧಿಸಿದ ಸಮಸ್ಯೆ ಪರಿಹಾರಕ್ಕಾಗಿ ಹಾಸನ ಜಿಲ್ಲಾಧಿಕಾರಿಗೆ, ಬೀದಿ ಬದಿ ವ್ಯಾಪಾರಿಗಳ ಸಮಸ್ಯೆಗೆ ಹುಬ್ಬಳ್ಳಿ-ಧಾರವಾಡ ಪಾಲಿಕೆ ಆಯುಕ್ತರಿಗೆ ಹೀಗೆ ಹಲವು ಅಧಿಕಾರಿಗಳಿಗೆ ಖುದ್ದು ದೂರವಾಣಿ ಮೂಲಕ ಸೂಚಿಸಿದರು.
ಜತೆಗೆ ಕೆಪಿಸಿಸಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪೌರ ಕಾರ್ಮಿಕರಿಗೆ ರಾಜೀವ್‌ಗಾಂಧಿ ವಸತಿ ನಿಗಮದಿಂದ ಮನೆ ನೀಡುವುದಾಗಿ ಭರವಸೆ ನೀಡಿದರು.

ಸರ್ಕಾರ ಹಾಗೂ ಕಾರ್ಯಕರ್ತರ ನಡುವೆ ಸಮನ್ವಯ ಸಾಧಿಸುವಸಲುವಾಗಿ ಪ್ರತಿತಿಂಗಳು ಕೆಪಿಸಿಸಿ ಕಚೇರಿಯಲ್ಲಿ ಎಲ್ಲಾ ಸಚಿವರು ಅಹವಾಲು ಆಲಿಸಬೇಕು. ಇದಕ್ಕೆ ಮುಖ್ಯಮಂತ್ರಿಗಳೇ ಜುಲೈ ಮೊದಲ ವಾರದಲ್ಲಿ ಖುದ್ದು ಚಾಲನೆ ನೀಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಕಾರಣಾಂತರ ಗಳಿಂದ ಮುಖ್ಯಮಂತ್ರಿಗಳ ಅಹವಾಲು ಸ್ವೀಕಾರ ಕಾರ್ಯಕ್ರಮವನ್ನು ಜು.13ರ ಶನಿವಾರಕ್ಕೆ ಮುಂದೂಡಲಾಗಿತ್ತು. ಶನಿವಾರ ಕೆಪಿಸಿಸಿಯ ಭಾರತ್ ಜೋಡೋಸಭಾಂಗಣ ದಲ್ಲಿ ನಡೆದ ಮುಖ್ಯಮಂತ್ರಿಗಳ ಮೊದಲ ಅಹವಾಲು ಸ್ವೀಕಾರ ಕಾರ್ಯಕ್ರಮಕ್ಕೆ ನೂರಾರು ಪಕ್ಷ ನಿಷ್ಠ ಕಾರ್ಯ ಕರ್ತರು ಆಗಮಿಸಿದ್ದರು. ಮೊದಲಿಗೆ ಅಂಗವಿಕಲರ ಬಳಿಗೆ ಹೋಗಿ ಅಹವಾಲುಗಳನ್ನು ಸ್ವೀಕರಿಸುವ ಮೂಲಕ ಕಾರ್ಯಕ್ರಮಕ್ಕೆ ನೀಡಿದರು.

ಮುಖ್ಯಮಂತ್ರಿಗಳು ಚಾಲನೆ

ತ್ರಿಚಕ್ರ ವಾಹನ, ಸರ್ಕಾರಿ ಉದ್ಯೋಗ, ನಿಗಮ- ಮಂಡಳಿಯಲ್ಲಿ ಅವಕಾಶ, ಗುತ್ತಿಗೆ ನೌಕರಿ, ಸ್ವಂತ ಉದ್ಯೋಗಕ್ಕೆ ಅನುದಾನ, ಸಾಲ ಸವಲತ್ತು ಸೇರಿ ನಾನಾ ಬೇಡಿಕೆಗಳನ್ನು ಅಂಗವಿಕಲ ಕಾಂಗ್ರೆಸ್ ಕಾರ್ಯಕರ್ತರು ಮುಖ್ಯಮಂತ್ರಿಗಳ ಮುಂದಿಟ್ಟರು. ನಾನು ಪಕ್ಷಕ್ಕೆ ದುಡಿಯುತ್ತಿದ್ದು, ಒಂದು ಮನೆ ಮಂಜೂರು ಮಾಡಿಕೊಡಿ ಎಂದು ಯಾದಗಿರಿ ಜಿಲ್ಲೆಯ ರಾಮಸಮುದ್ರದ ಚಾಂದ್‌ಪಾಷ ಅವರ ಮನವಿಗೆ ಸ್ಪಂದಿಸಿದ ಸಿದ್ದರಾಮಯ್ಯ ಅವರು 'ನಿಮ್ಮ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಸಿಇಓ ಅವರಿಗೆ ಹೇಳುವೆ ಹಾಗೂ ಸಿಎಂ ಪರಿಹಾರ ನಿಧಿ ಮೂಲಕ ನೀಡುತ್ತೇನೆ' ಎಂದು ಭರವಸೆ ನೀಡಿದರು.

ಪೌರ ಕಾರ್ಮಿಕರರಿಗೆ ಮನೆ ಭಾಗ್ಯ: 

ಅಹವಾಲು ಸಲ್ಲಿಕೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಐದು ಮಂದಿ ಮಹಿಳಾ ಪೌರ ಕಾರ್ಮಿಕರು, 'ನಾವು ಕಾಂಗ್ರೆಸ್ ಕಚೇರಿಯಲ್ಲಿ ಹಲವಾರು ವರ್ಷಗಳಿಂದ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದೇವೆ. ನಮಗೆ ಮನೆ ಕೊಡಿ' ಎಂದು ಮನವಿ ಸಲ್ಲಿಸಿದರು.

ಈ ವೇಳೆ ಸಿದ್ದರಾಮಯ್ಯ, 'ನಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೀರಾ? ನಿಮಗೆ ರಾಜೀವ್‌ ಗಾಂಧಿ ವಸತಿ ನಿಗಮದಿಂದ ಮನೆ ಕೊಡಿಸುತ್ತೇನೆ' ಎಂದು ಭರವಸೆ ನೀಡಿ ಜಯಂತಿ, ಅರ್ಚನಾ, ಸುಗಂಧಿ, ಆಶಾ, ಸಂಧ್ಯಾ ಎಂಬುವವರಿಗೆ ಮನೆ ನೀಡಲು ಅಧಿಕಾರಿ ಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು.

ಹಲವಾರು ಬೇಡಿಕೆ ಸಲ್ಲಿಕೆ: 

ಜೀವನಕ್ಕೆ ಅನುಕೂಲ ಮಾಡಿಕೊಡುವಂತೆ, ಮಕ್ಕಳ ಶಾಲಾ ಶುಲ್ಕ, ಮೂರು ಚಕ್ರ ವಾಹನ, ಆರ್ಥಿಕ ಸಹಾಯ, ಸೈಬರ್ ಸೆಂಟರ್, ಗುತ್ತಿಗೆ ನೌಕರಿ, ಆ್ಯಂಬುಲೆನ್ಸ್ ಹೀಗೆ ವಿವಿಧ ಬೇಡಿಕೆ ಸಲ್ಲಿಸಿದರು. ಮಹಿಳೆಯೊಬ್ಬರು ನನಗೆ ಪಕ್ಷದಲ್ಲಿ ಸ್ಥಾನಮಾನ ಕೊಡಿಸಿ ಪಕ್ಷ ಕಟ್ಟುತ್ತೇನೆ ಎಂದು ಬೇಡಿಕೆ ಇಟ್ಟರು. ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷರು ನಾಳೆಯೇ ಅವಕಾಶ ಕೊಡುವುದಾಗಿ ಭರವಸೆ ನೀಡಿದರು.

ಹಾಸನ ಡೀಸಿ ಮೇಲೆ ಗರಂ: 

ಪಹಣಿ ಮಾಡಿಕೊಡಲು ವಿಳಂಬ ಮಾಡುತ್ತಿದ್ದಾರೆ ಎಂಬ ಬಾಗೂರು ಹೋಬಳಿ ವ್ಯಕ್ತಿಯ ದೂರಿನ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾಧಿಕಾರಿಗೆ ದೂರವಾಣಿ ಕರೆ ಮಾಡಿದ ಸಿದ್ದರಾಮಯ್ಯ, 'ಪಹಣಿ ಮಾಡಿಕೊಡಲು ಯಾಕೆ ಇಷ್ಟು ವಿಳಂಬ? ನಮ್ಮ ಕಾರ್ಯಕರ್ತರು ಬರುತ್ತಾರೆ ಮೊದಲು ಕೆಲಸ ಮಾಡಿಕೊಡಿ' ಎಂದು ಹೇಳಿದರು.

ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗೆ ಕರೆ ಮಾಡಿ, ಮಾನವೀ ಯತೆಯಿಂದ ವರ್ತಿಸಿ. ಪರ್ಯಾಯ ವ್ಯವಸ್ಥೆ ಮಾಡಿದ ಬಳಿಕವೇ ತೆರವು ಮಾಡಿ ಎಂದು ಸೂಚಿಸಿದರು.

ಡಿಸಿಗಳು ಮಹಾರಾಜರ ಥರ ಆಡಬೇಡಿ: ಸಿದ್ದರಾಮಯ್ಯ ಗರಂ..!

ಕೆಎಂಎಫ್ ವೆಬ್ ಸೈಟ್‌ನಲ್ಲಿ ಕನ್ನಡದಲ್ಲಿ ಮಾಹಿತಿ ಅಳವಡಿಸದ ಬಗ್ಗೆ ಚಾಮರಾಜನಗರದ ಎಸ್.ಶಿವನಾಗಪ್ಪ ಅವರ ದೂರಿನ ಹಿನ್ನೆಲೆ ಕೆಎಂಎಫ್ ಅಧಿಕಾರಿಗೆ ಕರೆ ಮಾಡಿ ಕೂಡಲೇ ಕನ್ನಡ ಅಳವಡಿಸುವಂತೆ ಸೂಚಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್, ಶಾಸಕರಾದ ಹಾಜರಿದ್ದರು.

ಫೋಟೋಗಾಗಿ ಪೈಪೋಟಿ

ಅಹವಾಲು ಆಲಿಕೆ ವೇಳೆ ಆಹವಾಲು ಸಲ್ಲಿಕೆಗಿಂತ ಮುಖ್ಯಮಂತ್ರಿಗಳ ಜತೆಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಹೆಚ್ಚು ಮಂದಿ ಮುಗಿ ಬಿದ್ದಿದ್ದರಿಂದ ಕೆಲ ಹೊತ್ತು ನೂಕುನುಗ್ಗಲು ಉಂಟಾಯಿತು. ಕೆಲ ವರು ಸಿಎಂಗೆ ಕೈ ಕುಲುಕಿ ಫೋಟೋ ಕ್ಲಿಕ್ಕಿಸಿಕೊಂಡು ಅಹವಾಲು ಸಲ್ಲಿಸದೆಯೇ ಹೊರಟು ಹೋದರು. ಇದರಿಂದ ಬೇಸತ್ತ ಜಿ.ಸಿ. ಚಂದ್ರ ಶೇಖ‌ರ್, 'ಫೋಟೋ ಬೇಡ ಮನವಿ ಕೊಡಿ ಸಾಕು' ಎಂದು ಮನವಿ ಮಾಡಿದರು.

ನಿಗಮ-ಮಂಡಳಿ ಹುದ್ದೆಗೆ ಬೇಡಿಕೆ

ಅಹವಾಲು ಸ್ವೀಕಾರ ವೇಳೆ ಹಲವರು ನಿಗಮ-ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ । ಇಟ್ಟಿದ್ದು ಗ ಗಮನ ಸೆಳೆಯಿತು. ಈ ವೇಳೆ ಸಿದ್ದರಾಮಯ್ಯ, ನಿಗಮ-ಮಂಡಳಿ ನೇಮಕ ಬಹುತೇಕ ಮುಗಿದು ಹೋಗಿದೆ. ಇನ್ನು 10-12 ಸ್ಥಾನ ಮಾತ್ರ ಇರಬ ಹುದು. ನಾನು ಹಾಗೂ ಅಧ್ಯಕ್ಷರು ಕುಳಿತು ಚರ್ಚಿಸಿ ಕಾರ್ಯಕರ್ತರನ್ನೇ ಆಯ್ಕೆ ಮಾಡುತ್ತೇವೆ. ಆದರೆ ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಹೀಗಾಗಿಯೇ ಎರಡು ಅವಧಿಗೆ ಅಧ್ಯಕ್ಷರು, ಸದಸ್ಯರ ನೇಮಕ ಮಾಡುತ್ತಿದ್ದೇವೆ. ಆಗ ಇನ್ನೂ ಹಲವರಿಗೆ ಅವಕಾಶ ಸಿಗಲಿದೆ ಎಂದು ಸಮಜಾಯಿಷಿ ನೀಡಿದರು.

click me!