ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಗಮನವು, ಸಾರ್ವಜನಿಕರಲ್ಲಿ ಜಿಲ್ಲೆಗೆ ಏನಾದರೂ ವಿಶೇಷ ಕೊಡುಗೆ, ಅನುದಾನ ಬಿಡುಗಡೆಯ ನಿರೀಕ್ಷೆ ಮೂಡಿಸಿತ್ತು. ಅದರೆ ಕೆ.ಡಿ.ಪಿ. ಸಭೆಯು ಮ್ಯಾಚ್ ಫಿಕ್ಷಿಂಗ್ ಮಾದರಿಯಲ್ಲಿ ನಡೆಯಿತು.
ಕೋಲಾರ (ಡಿ.28): ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಗಮನವು, ಸಾರ್ವಜನಿಕರಲ್ಲಿ ಜಿಲ್ಲೆಗೆ ಏನಾದರೂ ವಿಶೇಷ ಕೊಡುಗೆ, ಅನುದಾನ ಬಿಡುಗಡೆಯ ನಿರೀಕ್ಷೆ ಮೂಡಿಸಿತ್ತು. ಅದರೆ ಕೆ.ಡಿ.ಪಿ. ಸಭೆಯು ಮ್ಯಾಚ್ ಫಿಕ್ಷಿಂಗ್ ಮಾದರಿಯಲ್ಲಿ ನಡೆಯಿತು, ನಮಗೆ ಮಾತನಾಡುವ ಅವಕಾಶವಿರದೇ ಅವರ ಪಕ್ಷದವರೇ ಪ್ರಶ್ನೆ ಮಾಡುವುದು, ಉತ್ತರಿಸುವುದು ಎಲ್ಲವೂ ಮೊದಲೇ ಮಾತನಾಡಿಕೊಂಡಂತೆ ರೆಡಿಮೇಡ್ ಆಗಿತ್ತು ಎಂದು ಸಂಸದ ಎಸ್.ಮುನಿಸ್ವಾಮಿ ವ್ಯಂಗವಾಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಕೆ.ಡಿ.ಪಿ. ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದಲ್ಲಿ ನೇಮಕಾತಿ ಹಗರಣಗಳು, ಶ್ರೀನಿವಾಸಪುರದಲ್ಲಿ ರೈತರನ್ನು ಒಕ್ಕಲೆಬ್ಬಿಸಿದ ಪ್ರಕರಣಗಳಿಗೆ ಜಿಲ್ಲಾಧಿಕಾರಿ ಮತ್ತು ಅರಣ್ಯಾಧಿಕಾರಿಗಳ ಪಿತೂರಿಯಾಗಿದೆ ಎಂದು ಆರೋಪಿಸಿದಾಗ, ಈ ಕುರಿತು ಕಂದಾಯ ಮತ್ತು ಅರಣ್ಯ ಇಲಾಖೆಯ ಜಂಟಿ ಸರ್ವೇ ನಡೆಸಲು ಸೂಚನೆ ನೀಡಿದ್ದಾರೆ. ಈಗಾಗಲೇ ಶೇ.೫೦ರಷ್ಟು ಮಾತ್ರ ಜಂಟಿ ಸರ್ವೇಯಾಗಿದೆ ಎಂಬ ಸಿಎಂ ಉತ್ತರದ ಬಗ್ಗೆ ತಿಳಿಸಿದರು.
ಜನತೆ ಎಚ್ಚೆತ್ತುಕೊಳ್ಳದಿದ್ದರೆ ಪ್ರಜಾಪ್ರಭುತ್ವ ಧ್ವಂಸ: ಸಿಎಂ ಸಿದ್ದರಾಮಯ್ಯ
ಕೋಲಾರದಲ್ಲಿ ಈ ಹಿಂದೆ ಜಮೀರ್ ಪಾಷ ಎಂಬ ಜಿಲ್ಲಾಧಿಕಾರಿ ಇದ್ದಾಗ ರಹಸ್ಯವಾಗಿ ಸರ್ಕಾರಿ ಜಾಗಗಳನ್ನು ವಕ್ಪ್ ಸಮಿತಿಗೆ ಪರಬಾರೆ ಮಾಡಿದ್ದು, ಎಷ್ಟೋ ವರ್ಷಗಳ ನಂತರ ಸಾರ್ವಜನಿಕರ ಗಮನಕ್ಕೆ ಬಂದಿತು, ಈಗ ಅದೇ ಕೆಲಸವನ್ನು ಈಗಿನ ಜಿಲ್ಲಾಧಿಕಾರಿ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಸಹ ನೀಡಲಾಗಿದೆ. ಈ ಕುರಿತು ತನಿಖೆ ಮಾಡಿಸುವುದಾಗಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ವಿಶ್ವಕರ್ಮ ಯೋಜನೆಯಲ್ಲಿ ಸಾವಿರಾರು ಅರ್ಜಿಗಳು ಬಂದಿದ್ದರೂ ಒಂದೇ ಸಮುದಾಯದ ೩೯೫ ಜನರನ್ನು ಆಯ್ಕೆ ಮಾಡಿ ಕೆ.ಜಿ.ಎಫ್ ನಲ್ಲಿ ಟೈಲರಿಂಗ್ ಗೆ ಕಳುಹಿಸುತ್ತಿದ್ದಾರೆ. ಈ ಸಂಬಂಧ ಅವರಿಗೆ ಜಿಲ್ಲಾಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ಮಾಡಲು ಬನ್ನಿ ಎಂದು ಆಹ್ವಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿರುದ್ಧ ಕಿಡಿಕಾರಿದರು,
ಮುಖ್ಯಮಂತ್ರಿಯು ಜಿಲ್ಲೆಗೆ ಯಾವುದೇ ಕೊಡುಗೆ ನೀಡಿಲ್ಲ, ಇದೊಂದು ಮ್ಯಾಚ್ ಫೀಕ್ಸಿಂಗ್, ಹೇಳಿಕೊಳ್ಳಲು ಕೋಲಾರದಲ್ಲಿ ಕೆ.ಡಿ.ಪಿ. ಸಭೆ ಅಷ್ಟೇ, ಆದ್ದರಿಂದ ಜನರ ನಿರೀಕ್ಷೆಗಳು ಹುಸಿಯಾಗಿವೆ, ರೈತರಿಗೆ ಕನಿಷ್ಟ ೨ ಸಾವಿರ ರು. ನೀಡಲು ಸಹ ಸರ್ಕಾರದಲ್ಲಿ ಹಣವಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಸಮರ್ಪಕ ಕಾಸಿಲ್ಲದೆ ಪೂರ್ಣಗೊಳಿಸಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಇವರೇ ಬೇರೆ ಕಡೆ ಸಾಲ ಮಾಡುತ್ತಿದ್ದಾರೆ, ಇನ್ನು ಅಭಿವೃದ್ದಿಗೆ ಹಣ ಎಲ್ಲಿಂದ ತರುತ್ತಾರೆ ಎಂದು ವ್ಯಂಗ್ಯವಾಡಿದರು. ರೈತರು, ದಲಿತರ ವಿರುದ್ಧ ಕಾಂಗ್ರೆಸ್ ಆಡಳಿತ ನಿರ್ವಹಿಸುತ್ತಿದೆ.
ಕಾಂಗ್ರೆಸ್ 6ನೇ ಗ್ಯಾರಂಟಿಯಾಗಿ ತೆಂಗು ಬೆಳೆಗೆ ಪರಿಹಾರ ಘೋಷಿಸಿ: ಎಚ್.ಡಿ.ರೇವಣ್ಣ ಒತ್ತಾಯ
ಎಲ್ಲರಿಗೂ ನೀಡಿದ ಭರವಸೆಗಳಿಗೆ ಚಂದಮಾಮನನ್ನು ತೋರಿಸಿ ಕಾಲಹರಣ ಮಾಡುತ್ತಿದೆ, ರಾಜ್ಯದ ಜನತೆಗೆ ನೀಡಿರುವಂತ ೫ ಗ್ಯಾರಂಟಿಗಳನ್ನು ಕಾಂಗ್ರೆಸ್ ಪಕ್ಷದ ಸೋನಿಯಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಅವರ ಹಣದಿಂದ ಈಡೇರಿಸುವಂತಾಗಲಿ, ಕಾಂಗ್ರೆಸ್ ನ ಓರ್ವ ಲೋಕಸಭಾ ಸದಸ್ಯನ ಮನೆಯಲ್ಲಿಯೇ ೩೫೦ ಕೋಟಿಗೂ ಹೆಚ್ಚು ಹಣ ಸಿಕ್ಕಿದೆ, ಇನ್ನು ಇತರೆ ನಾಯಕರ ಬಳಿ ಎಷ್ಟು ಹಣ ಇರಬಹುದು ಎಂದು ಪ್ರಶ್ನಿಸಿದ ಅವರು, ಹಾಲು ಒಕ್ಕೂಟದ ನೇಮಕಾತಿಗಳಿಗೆ ಮರು ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು. ದಿಶಾ ಸಮಿತಿ ಸದಸ್ಯ ಅಪ್ಪಿನಾರಾಯಣಸ್ವಾಮಿ, ನಗರಸಭೆ ಸದಸ್ಯ ಪ್ರವೀಣ್ ಗೌಡ, ಗಾಂಧಿನಗರ ವೆಂಕಟೇಶ್, ಕೆಂಬೋಡಿ ನಾರಾಯಣಸ್ವಾಮಿ ಇದ್ದರು.