ಕಾಂಗ್ರೆಸ್‌ 6ನೇ ಗ್ಯಾರಂಟಿಯಾಗಿ ತೆಂಗು ಬೆಳೆಗೆ ಪರಿಹಾರ ಘೋಷಿಸಿ: ಎಚ್.ಡಿ.ರೇವಣ್ಣ ಒತ್ತಾಯ

By Kannadaprabha News  |  First Published Dec 28, 2023, 8:27 PM IST

ರಾಜ್ಯದಲ್ಲಿ ಸಂಕಷ್ಟಕ್ಕೆ ಎಡೆ ಮಾಡಿರುವ ಕೊಬ್ಬರಿ ಖರೀದಿಗೆ ಕೇಂದ್ರ ಸರ್ಕಾರ ಜನವರಿ ತಿಂಗಳಲ್ಲಿ ನಫೇಡ್ ಮೂಲಕ ಖರೀದಿ ಮಾಡುವ ಭರವಸೆ ನೀಡಿದ್ದು, ಇನ್ನು ೬ನೇ ಗ್ಯಾರಂಟಿಯಾಗಿ ತೆಂಗು ಬೆಳೆಯನ್ನು ಪರಿಹಾರ ಘೋಷಣೆ ಮಾಡಬೇಕೆಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಒತ್ತಾಯಿಸಿದರು. 


ಹಾಸನ (ಡಿ.28): ರಾಜ್ಯದಲ್ಲಿ ಸಂಕಷ್ಟಕ್ಕೆ ಎಡೆ ಮಾಡಿರುವ ಕೊಬ್ಬರಿ ಖರೀದಿಗೆ ಕೇಂದ್ರ ಸರ್ಕಾರ ಜನವರಿ ತಿಂಗಳಲ್ಲಿ ನಫೇಡ್ ಮೂಲಕ ಖರೀದಿ ಮಾಡುವ ಭರವಸೆ ನೀಡಿದ್ದು, ಇನ್ನು ೬ನೇ ಗ್ಯಾರಂಟಿಯಾಗಿ ತೆಂಗು ಬೆಳೆಯನ್ನು ಪರಿಹಾರ ಘೋಷಣೆ ಮಾಡಬೇಕೆಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಒತ್ತಾಯಿಸಿದರು. ನಗರದ ಸಂಸದರ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಕೊಬ್ಬರಿ ಖರೀದಿ ಹಾಗೂ ಬರದಿಂದ ಈ ವರ್ಷ ತೆಂಗು ಬೆಳೆ ನಷ್ಟವಾಗಿದ್ದು, ಈ ವಿಚಾರವಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಸಂಸದ ಪ್ರಜ್ವಲ್ ರೇವಣ್ಣ ನೇತೃತ್ವದಲ್ಲಿ ಪ್ರಧಾನಿ ಅವರನ್ನು ಭೇಟಿಯಾಗಿ ಚರ್ಚಿಸಿ ಮನವಿ ಮಾಡಲಾಗಿದೆ. 

ಭರವಸೆ ನೀಡಿರುವಂತೆ ಕೂಡಲೇ ಕೊಬ್ಬರಿ ಖರೀದಿಗೆ ಮುಂದಾಗಬೇಕು. ಇಲ್ಲವಾದರೇ ಕುಮಾರಸ್ವಾಮಿ ನೇತೃತ್ವದಲ್ಲಿ ಪಾದಯಾತ್ರೆ ಮಾಡುವುದಾಗಿ ಎಚ್ಚರಿಸಿದರು. ರಾಜ್ಯದ ತೆಂಗು ಬೆಳೆಗಾರರು ಸಂಕಷ್ಟದಲ್ಲಿ ಇದ್ದು ಅವರಿಗೆ ನೆರವಾಗುವ ನಿಟ್ಟಿನಲ್ಲಿ ನಫೆಡ್ ಮೂಲಕ ಕೊಬ್ಬರಿ ಖರೀದಿಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ೫ ಲಕ್ಷ ೯೫ ಸಾವಿರ ಎಕರೆ ಪ್ರದೇಶದಲ್ಲಿ ತೆಂಗು ಬೆಳೆ ಬೆಳೆದಿದ್ದು, ತೆಂಗು ಬೆಳೆಗಾರರಿಗೆ ಸರಿಯಾದ ಬೆಲೆ, ಸಿಗದ ಹಿನ್ನೆಲೆಯಲ್ಲಿ ಪ್ರತಿ ಎಕರೆಗೆ ೫೦ ಸಾವಿರ ರು. ಪರಿಹಾರ ನೀಡಬೇಕು ಎಂದು ಕೇಂದ್ರದ ಬಳಿ ಮನವಿ ಮಾಡಲಾಗಿದೆ. ಪ್ರಧಾನಿ ಮೋದಿ ಜತೆಗೆ, ಸಚಿವ ಅರ್ಜುನ್ ಮುಂಡ, ಶೋಭಾ ಕರಂದ್ಲಾಜೆ ಎಲ್ಲರನ್ನೂ ಭೇಟಿ ಮಾಡಿ ಕೊಬ್ಬರಿ ಬೆಳೆಗಾರರ ಸಮಸ್ಯೆ ಬಗ್ಗೆ ಮನವರಿಕೆ ಮಾಡಲಾಗಿದೆ. ಜನವರಿ ಮೊದಲ.ಅಥವಾ ಎರಡನೇ ವಾರದಲ್ಲಿ ನಬಾರ್ಡ್ ಮೂಲಕ ಕೊಬ್ಬರಿ ಖರೀದಿ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

Tap to resize

Latest Videos

ಮೋದಿ ಗೆಲ್ಲಿಸಿ -ಭಾರತ ಉಳಿಸಿ ಅಭಿಯಾನಕ್ಕೆ ಮಾಜಿ ಸಿಎಂ ಎಚ್‌ಡಿಕೆಗೆ ಆಹ್ವಾನ

‘ಇತ್ತೀಚೆಗೆ ತಾನು ಸೇರಿದಂತೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ, ಶಾಸಕ ಬಾಲಕೃಷ್ಣ ಸೇರಿ ಎಲ್ಲರೂ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಕಾಡು ಗೊಲ್ಲ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕು ಎಂದು ಮನವಿ ಮಾಡಲಾಗಿದೆ. ೧೯೩೦ ರಿಂದ ಈ ಬಗ್ಗೆ ಹೋರಾಟ ಮಾಡಿಕೊಂಡು ಬಂದಿದ್ದು ದೇವೇಗೌಡರ ಸತತ ಪರಿಶ್ರಮದಿಂದ ಇಂದು ಪ್ರಧಾನಿ ಅವರು ಬೇಡಿಕೆ ಈಡೇರಿಸುವಂತೆ ಭರವಸೆ ನೀಡಿದ್ದಾರೆ. ರಾಜ್ಯದಲ್ಲಿ ಒಟ್ಟು ೬ ಲಕ್ಷದ ೬೫ ಸಾವಿರದ ೫೦೪ ಜನಕ್ಕೂ ಹೆಚ್ಚು ಕಾಡು ಗೊಲ್ಲರು ಇದ್ದಾರೆ, ಅವರ ಹಲವಾರು ಬೇಡಿಕೆಗಳ ಬಗ್ಗೆ ನಾವು ಸರ್ಕಾರದ ಗಮನ ಸೆಳೆದಿದ್ದು ವಿಧಾನಸಭಾ ಚುನಾವಣೆಗೂ ಮುನ್ನ ಪತ್ರ ಮುಖೇನ ಕೋರಲಾಗಿತ್ತು. ಸುಮಾರು ೩೦ ನಿಮಿಷಗಳ ಕಾಲ ನಮ್ಮ ಬಳಿ ಚರ್ಚೆ ಮಾಡಿ ಅವರನ್ನು ಎಸ್ಟಿ ಸಮುದಾಯಕ್ಕೆ ಸೇರಿಸಲು ಒಪ್ಪಿಗೆ ಸೂಚಿಸಿದ್ದಾರೆ’ ಎಂದು ಹೇಳಿದರು.

click me!