ಬಾಗಲಕೋಟೆ ಟಿಕೆಟ್ ಬದಲಾವಣೆ ಇಲ್ಲ, ವೀಣಾ ಕಾಶಪ್ಪನವರ್‌ಗೆ ಸಿಎಂ ಸಿದ್ದರಾಮಯ್ಯ ಸಂದೇಶ!

Published : Mar 28, 2024, 08:45 PM IST
ಬಾಗಲಕೋಟೆ ಟಿಕೆಟ್ ಬದಲಾವಣೆ ಇಲ್ಲ, ವೀಣಾ ಕಾಶಪ್ಪನವರ್‌ಗೆ ಸಿಎಂ ಸಿದ್ದರಾಮಯ್ಯ ಸಂದೇಶ!

ಸಾರಾಂಶ

ಟಿಕೆಟ್ ಬದಲಾವಣೆಗೆ ಪಟ್ಟು ಹಿಡಿದು ಹೋರಾಟ ನಡೆಸಿದ ವೀಣಾ ಕಾಶಪ್ಪನವರ್‌ಗೆ ಹಿನ್ನಡೆಯಾಗಿದೆ. ಬಾಗಲಕೋಟೆ ಕ್ಷೇತ್ರದ ಟಿಕೆಟ್ ಬದಲಾವಣೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಈ ಮಾತು ಹೇಳುತ್ತಿದ್ದಂತೆ ವೀಣಾ ಮತ್ತೆ ಕಣ್ಣೀರಾಗಿದ್ದಾರೆ.  

ಬೆಂಗಳೂರು(ಮಾ.28) ಬಾಗಲಕೋಟೆ ಕ್ಷೇತ್ರದ ಟಿಕೆಟ್ ಕೈತಪ್ಪಿದ ಬಳಿಕ ಕಾಂಗ್ರೆಸ್ ನಾಯಕಿ ವೀಣಾ ಕಾಶಪ್ಪನವರ್‌ ಹಾಗೂ ಅವರ ಬೆಂಬಲಿಗರು ಟಿಕೆಟ್‌ಗಾಗಿ ಭಾರಿ ಹೋರಾಟ ನಡೆಸಿದ್ದರು. ಬಂಡಾಯ ಸ್ಪರ್ಧೆ ಸುಳಿವು ನೀಡುವ ಮೂಲಕ ಕಾಂಗ್ರೆಸ್‌ಗೆ ತಲೆನೋವಾಗಿದ್ದರು. ಇದರ ನಡುವೆ ಕೊನೆಯ ಹಂತದಲ್ಲಿ ಬಾಗಲಕೋಟೆ ಟಿಕೆಟ್ ಬದಲಾಯಿಸಿ ತನ್ನ ಕೈಸೇರಲಿದೆ ಎಂದು ಭಾವಿಸಿದ್ದ ವೀಣಾ ಕಾಶಪ್ಪನವರ್ ಹಾಗೂ ಅವರ ಬೆಂಬಲಿಗರಿಗೆ ಹಿನ್ನಡೆಯಾಗಿದೆ. ಯಾವುದೇ ಕಾರಣಕ್ಕೂ ಬಾಗಲಕೋಟೆ ಕ್ಷೇತ್ರದ ಟಿಕೆಟ್ ಬದಲಾವಣೆ ಮಾಡಲ್ಲ ಎಂದು ವೀಣಾಕಾಶಪ್ಪನವರ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟ ಸಂದೇಶ ನೀಡಿದ್ದಾರೆ.

ಮುಖ್ಯಮಂತ್ರಿ ನಿವಾಸದಲ್ಲಿ ಸಿದ್ದರಾಮಯ್ಯ ಭೇಟಿ ಮಾಡಿದ ವೀಣಾ ಕಾಶಪ್ಪನವರ್ ಹಾಗೂ ಅವರ ಬೆಂಬಲಿಗರು ಟಿಕೆಟ್‌ಗಾಗಿ ಪಟ್ಟು ಹಿಡಿದಿದ್ದರು. ಬಂಡಾಯ ಸ್ಪರ್ಧೆ, ತಮ್ಮ ಸ್ಪರ್ಧೆಯಿಂದ ಆಗುವ ಅನುಕೂಲ ಕುರಿತು ಸಿದ್ದರಾಮಯ್ಯಗೆ ವಿವರಿಸುವ ಪ್ರಯತ್ನ ಮಾಡಿದ್ದಾರೆ. ಪತಿ ವಿಜಯಾನಂದ ಕಾಶಪ್ಪನವರ್ ಕೂಡ ಸಭೆಯಲ್ಲಿ  ಹಾಜರಿದ್ದರು. ಆದರೆ ಕಾಶಪ್ಪನವರ್ ಅವರ ವಾದವನ್ನು ಕೇಳಿಸಿಕೊಂಡ ಸಿದ್ದರಾಮಯ್ಯ, ಟಿಕೆಟ್ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

'ಕೈ'ಭಿನ್ನಮತಕ್ಕೆ ಬ್ರೇಕ್ ಹಾಕುತ್ತಾ ಸಿಎಂ ನೇತೃತ್ವದ ಸಭೆ? ಪಕ್ಷೇತರವಾಗಿ ನಿಲ್ಲುವಂತೆ ವೀಣಾ ಕಾಶಪ್ಪನವರ ಅಭಿಮಾನಿಗಳು ಪಟ್ಟು!

ನಿಮಗೆ ಟಿಕೆಟ್ ಕೊಡುವಂತೆ ಯಾವುದೇ ಜಿಲ್ಲಾ ನಾಯಕರು ಹೇಳಿಲ್ಲ. ಇದಕ್ಕೂ ಮೊದಲೇ ನಿಮಗೆ ಕೆಲ ಸೂಚನೆ ನೀಡಲಾಗಿತ್ತು. ಜಿಲ್ಲೆಯಲ್ಲಿನ ಸಮಸ್ಯೆ ಪರಿಹಾರ ಮಾಡಿಕೊಳ್ಳುವಂತೆ ಮೊದಲೇ ಹೇಳಿದ್ದೇವು. ಜಿಲ್ಲಾ ನಾಯಕರು, ಸ್ಥಳೀಯ ನಾಯಕರ ಜೊತೆಗಿನ ಭಿನ್ನಾಭಿಪ್ರಾಯ ಸೇರಿದಂತೆ ಹಲವು ಸಮಸ್ಯೆಗಳಿಗೆ ತಾರ್ಕಿಕ ಅಂತ್ಯಕೋರಲು ಸೂಚಿಸಲಾಗಿತ್ತು. ಆದರೆ ಈ ಸಮಸ್ಯೆಗಳಿಗೆ ನೀವು ಪರಿಹಾರ ಕಂಡುಕೊಂಡಿಲ್ಲ. ಲೋಕಸಭಾ ಕ್ಷೇತ್ರ ಉಸ್ತುವಾರಿ ಪ್ರಿಯಾಂಕಾ ಖರ್ಗೆಯಿಂದಲೂ ವೀಣಾ ಹೆಸರು ಪ್ರಸ್ತಾಪವಾಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಔದು ಜಿಲ್ಲೆಯ ಯಾವ ನಾಯಕರು ವೀಣಾ ಹೆಸರು ಹೇಳಿಲ್ಲ. ಇದೀಗ ಕೊನೆಯ ಕ್ಷಣದಲ್ಲಿ ಅಭ್ಯರ್ಥಿ ಬದಲಾವಣೆ ಮಾಡುವುದಿಲ್ಲ. ಸಂಯುಕ್ತ ಪಾಟೀಲ್ ಉತ್ತಮ ಕೆಲಸ ಮಾಡಿದ್ದಾರೆ. ಪಕ್ಷ ನೀಡಿದ್ದ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಹೀಗಾಗಿ ಸಂಯುಕ್ತ ಪಾಟೀಲ್‌ಗೆ ಟಿಕೆಟ್ ನೀಡಲಾಗಿದೆ. ಟಿಕೆಟ್ ವಿಚಾರ ಬಿಟ್ಟು ಬೇರೆ ಏನಾದರು ಇದ್ದರೆ ಹೇಳಿ ಎಂದು ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದ್ದಾರೆ.  

ಹೊರಗಿನವರಿಗೆ ಟಿಕೆಟ್ ಕೊಟ್ಟಿರುವುದು ಯಾಕೆ ಎಂದು ವೀಣಾ ಕಾಶಪ್ಪನವರ್ ಬೆಂಬಲಿಗರು ಪ್ರಶ್ನಿಸಿದ್ದರು. ಇದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ನಾನು ಮೈಸೂರಿನಿಂದ ಬದು ಬಾದಾಮಿಯಲ್ಲಿ ಸ್ಪರ್ಧೆ ಮಾಡಿಲ್ಲವೇ? ನನ್ನನ್ನು ಬಾದಾಮಿ ಜನರು ಆಯ್ಕೆ ಮಾಡಲಿಲ್ಲವೇ? ಈ ವಾದಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಖಡಕ್ ತಿರುಗೇಟು ನೀಡಿದ್ದಾರೆ. 

5 ಸಚಿವರ ಮಕ್ಕಳು ಸೇರಿ 10 ಕ್ಷೇತ್ರದಲ್ಲಿ ಫ್ಯಾಮಿಲಿ ಪಾಲಿಟಿಕ್ಸ್: ಸಚಿವರ ಸಹೋದರರಿಗೂ ಲೋಕಸಭೆ ಟಿಕೆಟ್ ಭಾಗ್ಯ !

ಇದೇ ವೇಳೆ ವೀಣಾ ಕಾಶಪ್ಪನವರ್‌ನ್ನು ಸಿಎಂ ಸಮಾಧಾನಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಜಕೀಯ ಅಧಿಕಾರ ನೀಡುತ್ತೇನೆ ಎಂದಿದ್ದಾರೆ . ಆದರೆ ಯಾವುದೇ ನಿರ್ದಿಷ್ಟ ಹುದ್ದೆ ಅಂತ ಹೇಳಲಾರೆ ಎಂದಿದ್ದಾರೆ. ಸಿದ್ದರಾಮಯ್ಯ ಖಡಕ್ ಸೂಚನೆ ಸಿಗುತ್ತಿದ್ದಂತೆ ವೀಣಾ ಕಾಶಪ್ಪನವರ್ ಮತ್ತೆ ಕಣ್ಣೀರಾಗಿದ್ದಾರೆ. ಮಾಧ್ಯಮಕ್ಕೂ ಪ್ರತಿಕ್ರಿಯೆ ನೀಡಿದ ತೆರಳಿದ್ದಾರೆ.  
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕರ್ನಾಟಕ ಸಂಸದರ ಬಗ್ಗೆ ಪ್ರಧಾನಿ ಮೋದಿ ಅಸಮಾಧಾನ, ತೀವ್ರ ಕ್ಲಾಸ್, ಆ 45 ನಿಮಿಷ ಸಭೆಯಲ್ಲಿ ಹೇಳಿದ್ದೇನು?
ಸಿಎಂ ಪುತ್ರ ಯತೀಂದ್ರ ಹೇಳಿಕೆ ವಿವಾದ; ಬೆಳಗಾವಿಯಲ್ಲಿ ಡಿಕೆಶಿ ಅಲರ್ಟ್, ಆಪ್ತರ ಲಂಚ್ ಮೀಟಿಂಗ್!