ಪಾರ್ವತಿ ಸಿದ್ದರಾಮಯ್ಯಗೆ 14 ಸೈಟು ಕೊಟ್ಟ ಮೂಡಾ ನಿಯಮಗಳ ಮಾಹಿತಿ ಬಿಚ್ಚಿಟ್ಟ ಸಿಎಂ ಆಪ್ತ ಎಂ. ಲಕ್ಷ್ಮಣ್!

By Sathish Kumar KH  |  First Published Jul 4, 2024, 1:42 PM IST

ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರಿಗೆ ವಿಜಯನಗರದಲ್ಲಿ 14 ಸೈಟುಗಳ ಹಂಚಿಕೆ ಮಾಡಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನಿಯಮಗಳ ಬಗ್ಗೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಇಂಚಿಂಚು ಮಾಹಿತಿ ಬಿಚ್ಚಿಟ್ಟಿದ್ದಾರೆ.


ಬೆಂಗಳೂರು (ಜು.04): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದ ನೋಟಿಫೈ ಮತ್ತು ನಿವೇಶನದ ಹಂಚಿಕೆಯ ಇಂಚಿಂಚೂ ಮಾಹಿತಿ ಇಲ್ಲಿದೆ ನೋಡಿ.. ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಮ್ಮ ಅವರ ಜಮೀನನ್ನು ವಶಕ್ಕೆ ಪಡೆದ ಮುಡಾಗೆ ಇದೇ ಏರಿಯಾದಲ್ಲಿ ಕೊಡಿ ಅಂತ ಅಪ್ಲಿಕೇಶನ್ ಹಾಕಿಕೊಂಡಿಲ್ಲ. ವಿಪಕ್ಷ ನಾಯಕರು ಸುಳ್ಳು ಆರೋಪ ಮಾಡದೇ ಮಾನ ಮರ್ಯಾದೆ ಇದ್ದರೆ ದಾಖಲೆಗಳನ್ನು ಮುಂದಿಟ್ಟು ಮಾತನಾಡಲಿ ಎಂದು ಸಿಎಂ ಆಪ್ತ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯವರು ಕಳೆದ ಒಂದು ವಾರದ ಒದರುತ್ತಿದ್ದಾರೆ. ಮುಡಾ ಸೈಟ್ ಹಂಚಿಕೆಯಲ್ಲಿ ಭಾರೀ ಗೋಲ್ ಮಾಲ್ ಆಗಿದೆ ಅಂತ ಹೇಳ್ಕೊಂಡು ಓಡಾಡ್ತಿದ್ದಾರೆ. ಸಿಎಂ ಪತ್ನಿ ಹೆಸರು ತಂದು ಆರೋಪ ಮಾಡ್ತಿದ್ದಾರೆ. ನಾನು ಹೇಳ್ತೇನೆ ಕೇಳಿ ಅಲ್ಲಿ ಏನೇನು ಆಗಿದೆ ಎಂದು ಪಾರ್ವತಮ್ಮ ಅವರ ಹೆಸರಿನಲ್ಲಿದ್ದ ಜಮೀನಿನ ಮೂಲ ಹಾಗೂ ಅದನ್ನು ವಶಕ್ಕೆ ಪಡೆದ ಮುಡಾದ ನಿಯಮಗಳು, ಬೇರೆಡೆ ಸೈಟು ಹಂಚಿಕೆ ಮಾಡಿದ್ದರ ಬಗ್ಗೆ ಮಾಹಿತಿ ನೀಡಿದ್ದಾರೆ.

Tap to resize

Latest Videos

undefined

ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಕಳೆದುಕೊಂಡಿದ್ದು 55 ಕೋಟಿ ರೂ. ಜಮೀನು, ಅವರಿಗೆ ಸಿಕ್ಕಿದ್ದು 15 ಕೋಟಿ ಆಸ್ತಿ

ಮೈಸೂರು ರಿಂಗ್ ರಸ್ತೆಯ ಪಕ್ಕದಲ್ಲಿ ಸರ್ವೇ ನಂಬರ್ 464 ರಲ್ಲಿ 3 ಎಕರೆ 16 ಗುಂಟೆ ಜಮೀನು ಜವರಯ್ಯ ಅನ್ನೋ ರೈತನ ಹೆಸರಿನಲ್ಲಿ ಇತ್ತು. 1992ರಲ್ಲಿ ನೋಟಿಫೈ ಮಾಡ್ತಾರೆ. ನಂತರ, 1998ರಲ್ಲಿ ಡೀ ನೋಟಿಫೈ ಮಾಡ್ತಾರೆ. ಆದರೆ, ತಮ್ಮ ಜಮೀನು ಬೇರೆಡೆ ಹೋಗುತ್ತದೆಂದು 2005ನೇ ಇಸವಿಯಲ್ಲಿ ಜವರಯ್ಯ ಅವರು ತಮ್ಮ ಜಮೀನನ್ನು ಮಲ್ಲಿಕಾರ್ಜುನ ಸ್ವಾಮಿ ಅವರುಗೆ ಮಾರಾಟ ಮಾಡುತ್ತಾರೆ. ಇನ್ನು ತಾನು ಖರೀದಿ ಮಾಡಿದ ಜಮೀನನ್ನು ಮಲ್ಲಿಕಾರ್ಜುನ ಸ್ವಾಮಿ ಅವರು ತಮ್ಮ ಸಹೋದರಿ ಪಾರ್ವತಮ್ಮ (ಸಿಎಂ ಸಿದ್ದರಾಮಯ್ಯ ಅವರ ಪತ್ನಿ) ಅವರಿಗೆ 2010ರಲ್ಲಿ ದಾನ ಪತ್ರದ ಮೂಲಕ ಅವರ ಹೆಸರಿಗೆ ವರ್ಗಾವಣೆ ಮಾಡುತ್ತಾರೆ.

ಇನ್ನು 2015ರಲ್ಲಿ ಮೂಡ ನೋಟಿಫೈ ಮಾಡದೆಯೇ ಈ ಜಾಗ ಜೊತೆಗೆ ಅಕ್ಕಪಕ್ಕದ ಜಮೀನು ಪಡೆದು ಸೈಟ್ ಹಂಚಿಕೆ ಮಾಡ್ತಾರೆ. 2017ರಲ್ಲಿ ನಮ್ಮ ಗಮನಕ್ಕೆ ತಾರದೇ ಜಮೀನು ಪಡೆದು ಸೈಟ್ ಹಂಚಿಕೆ ಮಾಡಿದ್ದಾರೆ ಅಂತ ಮುಡಾಕ್ಕೆ ದೂರು ಕೊಡ್ತಾರೆ. ಆಗ 2015ರಲ್ಲಿ 59 ಸೈಟ್ ಮಾಡಿ ಹಂಚುತ್ತಾರೆ. ಇನ್ನು ಜಾಗವನ್ನು ಪಡೆದು ಸೈಟ್ ಆಗಿ ಪರಿರ್ವತಿಸಿ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 2021ರಲ್ಲಿ ಮೂಡಾ ಒಂದು ತೀರ್ಮಾನಕ್ಕೆ ಬರುತ್ತದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಮಾದರಿಯಲ್ಲಿ 50:50 ನಿಯಮದ ಅಡಿ ನಿವೇಶನ ಹಂಚುವ ನಿರ್ಣಯ ಮಾಡುತ್ತದೆ.

ಪಬ್ಲಿಕ್ ಪ್ಲೇಸ್‌ನಲ್ಲಿ ಕಾಲೇಜು ಪ್ರೇಮಿಗಳ ಖುಲ್ಲಂ ಖುಲ್ಲಾ ಹಗ್ಗಿಂಗ್, ಕಿಸ್ಸಿಂಗ್ ಅಂಡ್ ರೊಮ್ಯಾನ್ಸ್!

ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಮ್ಮ ಅವರಿಗೆ ಸೇರಿದ್ದ 1,49,104 ಚದರ ಅಡಿ ನಿವೇಶನದ ಬದಲು ಮುಡಾ 38,284 ಚದರ ಅಡಿ ಜಾಗ ಕೊಟ್ಟಿದ್ದಾರೆ. ಎಲ್ಲಿ ಖಾಲಿ ಇದೆ ಅಲ್ಲಿ ಸೈಟ್ ಕೊಟ್ಟಿದ್ದಾರೆ. ವಿಜಯನಗರದಲ್ಲಿ 14 ಸೈಟ್ ಕೊಟ್ಟಿದ್ದಾರೆ. ಮುಡಾ ಸೈಟು ಹಂಚಿಕೆ ಮಾಡಿರುವ ಕಾಯ್ದೆ ಬಹಳ ಸ್ಪಷ್ಟವಾಗಿದೆ. ಎಲ್ಲಿ ಜಾಗ ಪಡೆಯುತ್ತಾರೆ, ಅದರ ಬದಲಿಗೆ ನಿವೇಶನ ಕೊಡಬೇಕು ಅಂತ ಇದೆ. ಆದರೆ, ಅದೇ ಜಾಗದಲ್ಲೇ ಕೊಡಬಹುದು ಅಥವಾ ಅಭಿವೃದ್ಧಿ ಪಡಿಸಿದ ಜಾಗದಲ್ಲೇ ಕೊಡಬಹುದು ಅಂತ ಕಾಯ್ದೆ ಇದೆ. ಇಲ್ಲಿ ಮುಖ್ಯವಾಗಿ ಪಾರ್ವತಮ್ಮ ಅವರು ಇದೇ ಏರಿಯಾದಲ್ಲಿ ಕೊಡಿ ಅಂತ ಅಪ್ಲಿಕೇಶನ್ ಹಾಕಿಕೊಂಡಿಲ್ಲ. ಆದ್ದರಿಂದ ಪಾರ್ವತಮ್ಮ ಅವರಿಗೆ ವಿಜಯನಗರದಲ್ಲಿ ನಿವೇಶನ ಹಂಚಿಕೆ ಮಾಡಲಾಗಿದೆ. ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಮಾನ ಮರ್ಯಾದೆ ಇದ್ದರೆ ಅಕ್ರಮ ಆಗಿರುವ ಬಗ್ಗೆ ದಾಖಲೆ ಇಟ್ಟು ಮಾತನಾಡಲಿ ಎಂದು ಸವಾಲು ಹಾಕಿದರು.

click me!