ದೇವರ ಹೆಸರಲ್ಲಿ ಯಡಿಯೂರಪ್ಪ ದೇವದುರ್ಗ ಭೇಟಿ ರಹಸ್ಯ ಬಯಲು

By Web DeskFirst Published Feb 8, 2019, 10:33 AM IST
Highlights

ಬಜೆಟ್ ಮಂಡನೆಗೆ ಸಕಲ ಸಿದ್ಧತೆ ನಡೆದ ಬೆನ್ನಲ್ಲೇ, ಮುಖ್ಯಮಂತ್ರಿ ಕುಮಾರಸ್ವಾಮಿ ದಿಢೀರ್ ಸುದ್ದಿಗೋಷ್ಠಿ ಕರೆದಿದ್ದರು. ಯಾವ ಬಾಂಬ್ ಸಿಡಿಸಬಹುದೆಂಬ ಕುತೂಹಲದಲ್ಲಿದ್ದ ಕರುನಾಡ ಮಂದಿಗೆ, ಯಡಿಯೂರಪ್ಪ ಅವರು ಆಪರೇಷನ್ ಕಮಲಕ್ಕೆ ಯತ್ನಿಸಿದ ಆಡಿಯೋ ರಿಲೀಸ್ ಮಾಡಿದ್ದಾರೆ.

ಬೆಂಗಳೂರು (ಫೆ.08): ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರಕಾರದ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದಿಢೀರ್ ಸುದ್ದಿಗೋಷ್ಠಿ ಕರೆದಿದ್ದರು. ಯಡಿಯೂರಪ್ಪ ಅವರು ಆಪರೇಷನ್ ಕಮಲಕ್ಕೆ ಯತ್ನಿಸಿದ್ದ ಆಡಿಯೋ ರಿಲೀಸ್ ಮಾಡುವ ಮೂಲಕ, ಬಿಜೆಪಿಯ ನಡೆ ಬಗ್ಗೆ ಸಿಎಂ ಆಕ್ರೋಶ ವ್ಯಕ್ತಪಡಿಸಿದರು.

'ರಾತ್ರಿ 1.30ಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೇವರ ಹೆಸರಿನಲ್ಲಿ ದಿಢೀರ್ ದೇವದುರ್ಗಕ್ಕೆ ಭೇಟಿ ನೀಡಿರುವ ಕಾರಣದ ಬಗ್ಗೆ JDSನ ನಿಷ್ಠಾವಂತ ಕಾರ್ಯಕರ್ತರೊಬ್ಬರಿಂದ ಮಾಹಿತಿ ಸಿಕ್ಕಿದೆ. ರಾಜ್ಯದಲ್ಲಿ ಸ್ನೇಹಿತರನ್ನು ಬಿಟ್ಟು, ಮೈತ್ರಿ ಸರಕಾರವನ್ನು ಉರುಳಿಸಲು ಬಿಜೆಪಿಯಿಂದ ಷಡ್ಯಂತ್ರ ನಡೆಯುತ್ತಿದೆ. ಜೆಡಿಎಸ್‌ನ ಯಾದಗಿರಿ ಜಿಲ್ಲೆಯ ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ್ ಅವರ ಮಗನೊಂದಿಗೆ ಯಡಿಯೂರಪ್ಪ ಮಾತನಾಡಿದ ಆಡಿಯೋ ಸಿಕ್ಕಿದ್ದು, ಆಪರೇಷನ್ ಕಮಲಕ್ಕೆ ಯತ್ನಿಸಿದ್ದಾರೆ. 20 ಶಾಸಕರಿಂದ ರಾಜೀನಾಮೆ ಕೊಡಿಸಲು ಅವರು ಯತ್ನಿಸಿದ್ದಾರೆ. ಅವರು ಆಪರೇಷನ್ ಕಮಲದ ಹಳೇ ಚಾಳಿ ಮುಂದುವರಿಸಿದ್ದಾರೆ,' ಎಂದರು.

'ಮೋದಿ ಪ್ರಧಾನಿಯಾದ ಬಳಿಕ ಈ ಎಲ್ಲರೂ ಬದಲಾಗುವ ನಿರೀಕ್ಷೆ ಇತ್ತು. ಆದರೆ, ಇದೀಗ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅಣತಿಯಂತೆಯೇ ಎಲ್ಲವೂ ನಡೀತಿದೆ,' ಎಂದು ಆರೋಪಿಸಿದರು. 

ಸಿದ್ಧವಾಗಿದೆ ರೈತ ಪರ ಬಜೆಟ್

ಸಂಸತ್ತಿನ ಮೋದಿ ಭಾಷಣಕ್ಕೆ ಆಕ್ರೋಶ:
ಪ್ರಧಾನಿ ಮೋದಿ ಸಂಸತ್ತಿನಲ್ಲಿ ಮಾಡಿರುವ ಕೊನೆಯ ಭಾಷಣಕ್ಕೆ ಆಕ್ಷೇಪ ಎತ್ತಿರುವ ಸಿಎಂ, ರಾಜ್ಯದಲ್ಲಿ ರೈತರ ಸಾಲಮನ್ನಾವನ್ನು ಟೀಕಿಸಿದ್ದಕ್ಕೆ ತರಾಟೆಗೆ ತೆಗೆದುಕೊಂಡರು.

ಬಜೆಟ್‌ಗೂ ಮುನ್ನ ಅತೃಪ್ತರ ರಾಜೀನಾಮೆ

'ಸಂಸತ್ ಪ್ರವೇಶಿಸುವಾಗ ತಲೆಬಾಗಿ ಒಳ ಪ್ರವೇಶಿಸಿದ್ದರು ಮೋದಿ. ಆದರೆ, ಅದರ ಗೌರವಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ. ಕಾಂಗ್ರೆಸ್ 60 ವರ್ಷಗಳಲ್ಲಿ ಮಾಡದ್ದನ್ನು, ತಾವು 5 ವರ್ಷಗಳಲ್ಲಿ ಮಾಡಿದ್ದಾಗಿ ಹೇಳಿಕೊಳ್ಳುತ್ತಿದ್ದಾರೆ,' ಎಂದು ಪಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

'ರಾಜ್ಯದ ರೈತರಿಗೆ ಹಾಗೂ ಸಹಕಾರ ಸಂಘಗಳಿಗೆ ನಮ್ಮ ಸರಕಾರ ನೀಡಿರುವ ನೆರವಿನ ಬಗ್ಗೆ ಜಾಹೀರಾತುಗಳ ಮೂಲಕ ಆಗಾಗ ಸ್ಪಷ್ಟ ಮಾಹಿತಿ ನೀಡಿದ್ದೇನೆ. ಆದರೂ, ದೇವಸ್ಥಾನದಂತಿರುವ ಸಂಸತ್ತಿನಲ್ಲಿ ಸುಳ್ಳು ಮಾಹಿತಿ ನೀಡುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ,' ಎಂದು ಆರೋಪಿಸಿದರು.

ಪತನವಾಗುತ್ತಾ ಸರಕಾರ? ಅಧಿಕಾರಕ್ಕೇರುತ್ತಾ ಬಿಜೆಪಿ?

ಬಜೆಟ್ ಮಂಡನೆಗೂ ಮುನ್ನ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರಾಜ್ಯಪಾಲರನ್ನು ಅಡ್ಡಪಡಿಸಿದ ರಾಜ್ಯ ಬಿಜೆಪಿ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಸಿಎಂ, ನಮ್ಮ ಸರಕಾರಕ್ಕೆ ಸ್ಪಷ್ಟ ಬಹುಮತವಿಲ್ಲವೆಂದು ಕಿರುಚುತ್ತಿದೆ. ಸರಕಾರಕ್ಕೆ ಬಹುಮತ ಇಲ್ಲದಿದ್ದಲ್ಲ ಅವಿಶ್ವಾಸ ನಿರ್ಣಯ ಮಂಡಿಸುವ ಹಕ್ಕು ಸಂವಿಧಾನದಲ್ಲಿದೆ. ಹಾಗೆ ಮಾಡಲಿ. ಅದು ಬಿಟ್ಟು, ಸುಗಮ ಕಲಾಪಕ್ಕೆ ಅಡ್ಡಿ ಪಡಿಸುತ್ತಿರುವುದೇಕೆ,' ಎಂದು ಪ್ರಶ್ನಿಸಿದರು. 

ಬಿಜೆಪಿ ಶಾಸಕರ ಸಸ್ಪೆಂಡ್: ಸರಕಾರದ ಹೊಸ ರಣತಂತ್ರ


 

click me!