ಬಿಗ್‌ ಬ್ರೇಕಿಂಗ್: ದೋಸ್ತಿ ಏಟಿಗೆ ಸ್ಥಾನ ಕಳೆದುಕೊಂಡ ಅತೃಪ್ತ ಶಾಸಕ

By Web DeskFirst Published Feb 7, 2019, 10:36 PM IST
Highlights

ಅತೃಪ್ತರ ಪಾಳಯದಲ್ಲಿ ಕಾಣಿಸಿಕೊಂಡಿದ್ದ ಪ್ರಭಾವಿ ಶಾಸಕನ ಮೇಲೆ ಶಿಸ್ತು ಕ್ರಮ ಜಾರಿಯಾಗಿದೆ. ದೋಸ್ತಿ ಸರಕಾರ ತನ್ನ ಮೊದಲ ಅಸ್ತ್ರ ಪ್ರಯೋಗಿಸಿದ್ದು ಅತೃಪ್ತ ಶಾಸಕ ಉಮೇಶ್ ಜಾಧವ್ ಬಲಿಯಾಗಿದ್ದಾರೆ.

ಬೆಂಗಳೂರು[ಫೆ.07]  ಉಗ್ರಾಣ ನಿಗಮದ ಅಧ್ಯಕ್ಷರಾಗಿ ನೇಮಕವಾಗಿದ್ದ ಉಮೇಶ್ ಜಾಧವ್ ಅವರಿಗೆ ನೀಡಿದ್ದ ಹುದ್ದೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ರದ್ದು ಮಾಡಲಾಗಿದೆ. ಚಿಂಚೊಳ್ಳಿ ಶಾಸಕ ಉಮೇಶ್ ಜಾಧವ್ ಅವರ ಹುದ್ದೆಯನ್ನು ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲರಿಗೆ ನೀಡಿ ಸಿಎಂ ಕುಮಾರಸ್ವಾಮಿ ಆದೇಶ ನೀಡಿದ್ದಾರೆ.

ಮುಂಬೈನಲ್ಲಿದ್ದ ಉಮೇಶ್ ಜಾಧವ್‌ಗೆ ಇದು ಬಿಗ್ ಶಾಕ್ ಆಗಿದ್ದು ಉಮೇಶ್ ಬಿಜೆಪಿ ಕಡೆ ತೆರಳುತ್ತಾರೆ ಎಂಬ ಸಾಧ್ಯತೆ ಮತ್ತಷ್ಟು ಹೆಚ್ಚಾಗಿದೆ. ಗೋಕಾಕ ಶಾಸಕ ಮತ್ತು ಉಮೇಶ್ ಜಾಧವ್ ಶಿಸ್ತು ಕ್ರಮದ ಭೀತಿಯಲ್ಲಿದ್ದರು. ಇದೀಗ ಕಾಂಗ್ರೆಸ್ ಸಿಎಂ ಕುಮಾರಸ್ವಾಮಿ ಅವರ ಮೂಲಕ ಮೊದಲ ಅಸ್ತ್ರ ಪ್ರಯೋಗ ಮಾಡಿದೆ. ಉಮೇಶ್ ಜಾಧವ್ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ ಕಳೆದುಕೊಂಡಿದ್ದಾರೆ.

ಮುಂಬೈನಿಂದ ಬೆಂಗ್ಳೂರಿಗೆ ಅತೃಪ್ತ ಶಾಸಕರು ವಾಪಸ್, ರಾಜಿನಾ?, ರಾಜೀನಾಮೆನಾ?

ರಾಯಚೂರು ಶಾಸಕ ಬಸನಗೌಡ ದದ್ದಲ್ ಅವರಿನ್ನು ಸಂಪುಟ ದರ್ಜೆ ಸ್ಥಾನದೊಂದಿಗೆ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಈ ಮೂಲಕ ಅತೃಪ್ತರಿಗೆ ದೋಸ್ತಿ ಸರಕಾರ ಮೊದಲ ಬಿಸಿ ಮುಟ್ಟಿಸಿದ್ದು ನಾವು ಸುಮ್ಮನೆ ಕೂರುವುದಿಲ್ಲ ಎಂಬ ಎಚ್ಚರಿಕೆ ರವಾನಿಸಿದೆ.

click me!