ಬಿಜೆಪಿ ಎಂಎಲ್‌ಎ ರಮೇಶ್ ಜಾರಕಿಹೊಳಿ ಜೆಡಿಎಸ್‌ಗೆ ಬಂದ್ರೆ ಸ್ವಾಗತ: ಸಿ.ಎಂ.ಇಬ್ರಾಹಿಂ

By Ravi JanekalFirst Published Nov 6, 2022, 3:04 PM IST
Highlights

ಬಿಜೆಪಿಯವರು ಬೀಜ ಇಲ್ಲದವರು ನೀವು, ಇನ್ನೊಬ್ಬರ ಬೀಜ ತಗೆದುಕೊಂಡು ಹೋಗಿ ನಮ್ಮ ಬೀಜ ಅಂತೀರಾ ಬಿಜೆಪಿ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ವಾಗ್ದಾಳಿ.

ಬೆಳಗಾವಿ (ನ.6) : ಬಿಜೆಪಿಯವರು ಬೀಜ ಇಲ್ಲದವರು ನೀವು, ಇನ್ನೊಬ್ಬರ ಬೀಜ ತಗೆದುಕೊಂಡು ಹೋಗಿ ನಮ್ಮ ಬೀಜ ಅಂತೀರಾ ಬಿಜೆಪಿ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ವಾಗ್ದಾಳಿ ನಡೆಸಿದರು. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಏನೋ ಹೇಳ್ತಿದ್ದರಲ್ಲಾ ನಾವು ಗಂಡಸರು, ಹುಟ್ಟಿಸುವ ಶಕ್ತಿ ಇದೆ ಅಂತ್ಹೇಳಿ ಆ ನನ್ನ ಮಕ್ಕಳಿಗೆ ಮಕ್ಕಳನ್ನು ಹುಟ್ಟಿಸುವ ಶಕ್ತಿ ಇಲ್ಲ. ಆದರೆ ನಾವು ಹುಟ್ಟಿಸಿದ ಮಕ್ಕಳನ್ನು ತಗೆದುಕೊಂಡು ಹೋಗ್ತಾರಲ್ಲ ಎಂತಹ ಗಂಡಸರೀ ಇವ್ರು? ಬಿಜೆಪಿ ವಿರುದ್ಧ ಕಿಡಿಕಾರಿದು.

ಕೈಗೊಂಬೆಯಂತೆ ಮಲ್ಲಿಕಾರ್ಜುನ ಖರ್ಗೆ ಕೆಲಸ: ಸಿ.ಎಂ.ಇಬ್ರಾಹಿಂ

ಇನ್ನೊಬ್ಬರ ಬೀಜ ತಗೊಂಡು ಹೋಗಿ ನಮ್ಮ ಬೀಜ ಅಂತೀರಲ್ಲ ನಾಚಿಕೆ ಆಗಲ್ವಾ? ಇದೇನಾ ನಿಮಗೆ ಮೋದಿ ಕಳಿಸಿರೋದು? ಇನ್ನು ನೂರು ಕರೆದುಕೊಂಡು ಹೋಗ್ರಿ ಹುಟ್ಟಿಸುವ ಶಕ್ತಿ ನಮಗಿದೆ. ನನಗೆ ಕೇಳಿದ್ರು ಅವರು, ನೂರು ಜನ ಇದಾರೆ ನೀವು ಒಬ್ಬರು ಏನು ಮಾಡ್ತೀರಿ ಅಂತಾ ಅದಕ್ಕೆ ನಾನು ಹೇಳಿದೆ  ನಾವು ರೈತರು,  50 ಆಕಳು ಕಟ್ಟಿದ್ರೆ ಹೋರಿ ಒಂದೇ ಕಟ್ಟೋದು ನಾವು. 50 ಹೋರಿ ಕಟ್ಟಲ್ಲಾ ಸಾಕು ನಮಗೆ ಅಂತಾ ಹೇಳಿದೆ. ಇವತ್ತು ಜನತಾದಳ, ದೇವೇಗೌಡರು, ದೇವೇಗೌಡರ ಬೀಜ ಬಲವಾಗಿದೆ.  ಈ ರಾಜ್ಯದಲ್ಲಿ ಮತ್ತೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗ್ತಾರೆ. ಇವರು ಎಷ್ಟು ಬೇಕಾದ್ರೆ ತಗೊಳ್ಳಲಿ ಎಂದು ಬಿಜೆಪಿ ಪಕ್ಷದ ನಾಯಕರ ವಿರುದ್ಧ ಅಬ್ಬರಿಸಿದರು.

ಚುನಾವಣೆ ಬಳಿಕ ಮತ್ತೆ ಬೇರೆಯವರ ಜೊತೆಯೇ ಕೈ ಜೋಡಿಸ್ತೀರಲ್ಲಾ ಅಂತಾ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿ.ಎಂ.ಇಬ್ರಾಹಿಂ ಅವರು, ನಾವಲ್ಲ, ನಮ್ಮ ಮನೆ ಬಾಗಿಲಿಗೆ ಬಂದವರು ಅವರು ಕುಮಾರಸ್ವಾಮಿ ಅವರು ಸಿಎಂ ಆಗಬೇಕು ಅಂತಾ ಅವರ ಮನೆಗೆ ಹೋದವರು ಯಾರು? ಅವರನ್ನ ಕೆಳಗೆ ಇಳಿಸಿದವರು ಯಾರು? ಅವರ ಅವಧಿಯಲ್ಲಿ ಕೆಲಸ ಮಾಡಬೇಕಿದ್ದಿದ್ದು ಅರ್ಧಕ್ಕೆ ನಿಂತಿದೆ. ಅದನ್ನ ಪೂರ್ಣಗೊಳಿಸಲಿ ಅಂತಾ ಕುಮಾರಸ್ವಾಮಿ ಅವರ ಹೆಸರು ಘೋಷಣೆ. ಮುಂದಿನ ದಿನಗಳಲ್ಲಿ ಸಿಎಂ ಸ್ಥಾನ ನಮಗೂ ಸಿಗಬಹುದು ಇಲ್ಲಾ ಅನ್ನಲ್ಲಾ ಎನ್ನುವ ಮೂಲಕ ಸಿ.ಎಂ.ಇಬ್ರಾಹಿಂ ಸಿಎಂ ಸ್ಥಾನದ ಆಕಾಂಕ್ಷಿ ಎಂಬ ಸುಳಿವು ನೀಡಿದರು.

ಜಾತಿ ಆಧಾರದ ಮೇಲೆ ಪಕ್ಷಗಳು ರಾಜಕೀಯ ಮಾಡ್ತಿವೆಯಾ ಎಂಬ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿ.ಎಂ.ಇಬ್ರಾಹಿಂ, ಕತ್ತಿ, ಕೋರೆ, ಲಿಂಗಾಯತರು ಬಿಜೆಪಿಯಾಗಿದ್ದು ಇಲ್ಲಾ ಬಿಜೆಪಿಯಲ್ಲಿ ಬಿಜಾನೇ ಇರಲಿಲ್ಲ  ಲಿಂಗಾಯತರಿಂದಲೇ ಅವರು ಬೆಳೆದವರು ಬಸವ ಕೃಪಾದ ಹೆಸರು ಹೇಳಿ ಕೇಶವ ಕೃಪಾ ಮಾಡಲು ಹೊರಟಿದ್ದಾರೆ. ಅದರಿಂದ ಹೊರಗೆ ಬನ್ನಿ ಅಂತಾ ನಾವು ಹೇಳಲು ಹೊರಟ್ಟಿದ್ದೇವೆ. ಬಸವಣ್ಣವರನ್ನ ಪಠ್ಯ ಪುಸ್ತಕದಲ್ಲಿ ಅವಮಾನ ಮಾಡಿದರು ಬಿಜೆಪಿಯವರು. ಜಾತಿ ಅಂದ್ರೇ ದೇವೆಗೌಡರು ಬರೀ ಒಕ್ಕಲಿಗರು ಅಲ್ಲಾ, ನಮ್ಮಲ್ಲೂ ಮರಾಠರಿದ್ದಾರೆ, ಲಿಂಗಾಯತರಿದ್ದಾರೆ, ಸಾಬರಿದ್ದಾರೆ ಅಂತಾ ತೋರಿಸಬೇಕಾಗಿದೆ. ಇದನ್ನ ತೋರಿಸಬೇಕಾದ ಪರಿಸ್ಥಿತಿ ನಿರ್ಮಾಣ ಮಾಡಿದ್ದು ಕಾಂಗ್ರೆಸ್, ಬಿಜೆಪಿ ಎಂದ ಸಿ.ಎಂ.ಇಬ್ರಾಹಿಂ

ಇಂದು ನಾಳೆ ಬೆಳಗಾವಿ, ಚಿಕ್ಕೋಡಿಯಲ್ಲಿ ಕಾರ್ಯಕರ್ತರ ಜತೆಗೆ ಸಭೆ ನಡೆಯುತ್ತದೆ. ಈ ಸಭೆಯಲ್ಲಿ  ಮರಾಠ ಮತ್ತು ಲಿಂಗಾಯತ ಸಮಾಜದ ಜನರನ್ನ ನಮ್ಮೊಟ್ಟಿಗೆ ಕರೆದುಕೊಂಡು ಹೋಗುತ್ತೇವೆ. ಟಿಕೆಟ್ ಹಂಚಿಕೆಯಲ್ಲಿ ಮರಾಠ, ಲಿಂಗಾಯತ, ಹಿಂದುಳಿದವರಿಗೆ ಪ್ರಾಮುಖ್ಯತೆ ಕೊಡುತ್ತೇವೆ. ನಮ್ಮದು ರಾಷ್ಟ್ರೀಯ ಪಕ್ಷ ಅಲ್ಲಾ ಸ್ಥಳೀಯ ಪಕ್ಷ, ರಾಜ್ಯದ ಜನರಿಗಾಗಿ ಹುಟ್ಟಿರುವ ಪಕ್ಷ. ಅಧ್ಯಕ್ಷ ಆದ ಬಳಿಕ ಸಭೆಗಳಿಗೆ ಜನರನ್ನ ನಾವು ತರುವುದಿಲ್ಲ ತಂದ ಜನರಿಗೆ ಭಾಷಣ ಮಾಡುವುದಿಲ್ಲ. 2023ರಲ್ಲಿ ಕುಮಾರಸ್ವಾಮಿಯವರೇ ರಾಜ್ಯದ ಮುಖ್ಯಮಂತ್ರಿಯಾಗ್ತಾರೆ ಎಂದು ಭವಿಷ್ಯ ನುಡಿದರು. ಇದೇ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇವೆ ಎಂದರು.

ನಾನು ಕಾಂಗ್ರೆಸ್‌ಗೆ ಸಿದ್ದರಾಮ್ಯನವರನ್ನ ಸಿಎಂ ಮಾಡಲು ಹೋಗಿದ್ದೆ. ಇದಾದ ಬಳಿಕ ಬದಾಮಿಯಲ್ಲಿ ನಾನೇ ಅವರನ್ನ ಗೆಲ್ಲಿಸಿದೆ. 4 ವರ್ಷದ ಎಂ‌ಎಲ್‌ಸಿಯನ್ನ ಅವರ ಮುಖಕ್ಕೆ ಕೊಟ್ಟು ಬಂದಿದ್ದೇನೆ ನಾನು. ಅಲ್ಪಸಂಖ್ಯಾತ 25 ಸಾವಿರ ವೋಟ್ ಬಾದಾಮಿಯಲ್ಲಿ ಸಿದ್ದರಾಮ್ಯನವರಿಗೆ ಬಂತು. ಅವರು ರಾಜೀನಾಮೆ ಕೊಡ್ತಾರಾ? ನನಗೆ ರಾಜೀನಾಮೆ ಕೊಡು ಅಂತಾ ಹೇಳಿದ್ರು ಅಂತ ಸಿ.ಎಂ. ಇಬ್ರಾಹಿಂ ಪ್ರಶ್ನೆ ಮಾಡಿದ್ದಾರೆ. 

ನಮ್ಮಲ್ಲಿ ಒಂದೊಂದು ಸೀಟ್‌ಗೆ ಎರಡು ಮೂರು ಜನ ಸ್ಪರ್ಧೆ ಇದೆ. ಬೆಳಗಾವಿಯಿಂದಲೂ ನಮ್ಮ ಪಕ್ಷಕ್ಕೆ ಬರ್ತಿದ್ದಾರೆ. ರಮೇಶ್ ಜಾರಕಿಹೊಳಿ ಜೆಡಿಎಸ್‌‌ಗೆ ಬರುವ ಕುರಿತು ಚರ್ಚೆ ಆಗಿಲ್ಲ. ಈ ಬಗ್ಗೆ ಕುಮಾರಸ್ವಾಮಿ ಅವರನ್ನೇ ಕೇಳಬೇಕು. ಸ್ಥಳೀಯರು ಒಪ್ಪಿಕೊಂಡರೆ ಯಾರೇ ಜೆಡಿಎಸ್‌ಗೆ ಬಂದರೂ ಸ್ವಾಗತ. ನಾವು ಸಾಹುಕಾರ್ ಪರವಾಗಿ ಇಲ್ಲ, ವಿರೋಧವಾಗಿಯೂ ಇಲ್ಲ. ಸಾಹುಕಾರ್ ಪಾಡು ಸಾಹುಕಾರ್‌ಗೆ ಎಂದ ಸಿ‌.ಎಂ ಇಬ್ರಾಹಿಂ. ಜವಾಬ್ದಾರಿ ಜಾಸ್ತಿಯಾಗಿದ್ದಕ್ಕೆ ಹೆಚ್ಚು ಮಾತನಾಡುತ್ತಿಲ್ಲ ಎಂದೂ ಜೆಡಿಎಸ್‌ ರಾಜ್ಯಾದ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ. 

ದೇವೇಗೌಡರು ಜೀವಂತ ಇರುವಾಗಲೇ ರೈತರಿಗಾಗಿ ಇರುವ ಕಾರ್ಯಕ್ರಮಗಳನ್ನು ಈಡೇರಿಸುತ್ತೇವೆ. ರೈತರಿಗಾಗಿ ನಮ್ಮ ಪಕ್ಷ ಪಂಚರತ್ನ ಕಾರ್ಯಕ್ರಮವನ್ನ ಆರಂಭಿಸಲಿದೆ, ಎಲ್‌ಕೆ‌ಜಿಯಿಂದ ಪಿಜಿ ವರೆಗೂ ಉಚಿತ ಶಿಕ್ಷಣ, ಪ್ರತಿ ಪಂಚಾಯಿತಿಯಲ್ಲಿ ಹೈಟೆಕ್ ಆಸ್ಪತ್ರೆಗಳು, ಪ್ರತಿಯೊಬ್ಬರಿಗೂ ವಾಸಿಸಲು ಮನೆ. ರಾಜ್ಯದ ಎಲ್ಲಾ ನೀರಾವರಿ ಯೋಜನೆ ಪೂರ್ಣಗೊಳಿಸಲಾಗುವುದು, ಮಹಿಳಾ ಸಬಲೀಕರಣ. ಈ ಎಲ್ಲ ಯೋಜನೆಗಳನ್ನ ಅಧಿಕಾರಕ್ಕೆ ಬಂದ ಐದು ವರ್ಷದಲ್ಲಿ ನಾವು ಈಡೇರಿಸುತ್ತೇವೆ ಎಂದು ಹೇಳಿದರು

ಬಿಜೆಪಿ ಮತ್ತು ಕಾಂಗ್ರೆಸ್ ಒಬ್ಬರನ್ನೊಬ್ಬರು ಬೈದುಕೊಳ್ತಾರೆ.  ನಲವತ್ತು ಪರ್ಸೆಂ ಟ್ ಇವರು, ಇಪ್ಪತ್ತು ಪರ್ಸಂಟ್ ಅವರು ರಾಹುಲ್ ಗಾಂಧಿ ಬಂದ್ರು ನಡೆದುಕೊಂಡು ಹೋದ್ರೂ ಸಂದೇಶ ಏನೂ ಕೊಟ್ಟರು? ಎಂದು ರಾಹುಲ್ ಗಾಂಧಿ ವಿರುದ್ಧವೂ ವಾಗ್ದಾಳಿ ನಡೆಸಿದ ಸಿ.ಎಂ.ಇಬ್ರಾಹಿಂ,  ನಾವು ಕಾಂಗ್ರೆಸ್‌ಗೂ ಬೈಯುತ್ತಿಲ್ಲ, ಬಿಜೆಪಿಗೂ ಬೈಯುತ್ತಿಲ್ಲ. ನಮ್ಮ ಪಕ್ಷ ಸಿದ್ದಾಂತ ಅಧಿಕಾರಕ್ಕೆ  ಬಂದ್ರೇ ಏನೂ ಮಾಡ್ತೇವಿ ಅಂತಾ ಹೇಳ್ತಿದ್ದೇವೆ ಅಷ್ಟೇ ಎಂದರು.

ನಿಮಗೆ ಕೊಟ್ಟ ಭರವಸೆ ಐದು ವರ್ಷದಲ್ಲಿ ಈಡೇರಿಸದಿದ್ರೇ ರಾಜೀನಾಮೆ ನೀಡಿ, ನಿಮಗೆ ಮುಖ ಕೂಡ ತೋರಿಸುವುದಿಲ್ಲ ಎಂದರು. ಅವರಿಗೆ ಅನೇಕ ಸಲ ಅಧಿಕಾರ ಕೊಟ್ಟಿದೀರಿ ನಮಗೆ ಒಂದು ಸಲ ಅಧಿಕಾರ ಕೊಡಿ ಅಂತಾ ಹೊರಟಿದ್ದೇವೆ ಜಿಲ್ಲೆ ಜಿಲ್ಲೆಯಲ್ಲಿ ಫೈನಲ್ ಆಗಿದ್ದವರೇ ನಮ್ಮ ಅಭ್ಯರ್ಥಿಗಳು, ಹೈಕಮಾಂಡ್‌ಗೆ ಬ್ಯಾಗ್ ಕೊಡಬೇಕಾಗಿಲ್ಲ, ಚೀಲ ಕೊಡಬೇಕಾಗಿಲ್ಲ ಎಂದರು.

ರಾಹುಲ್ ಗಾಂಧಿಯ ಭಾರತ್ ಜೋಡೋ ಬಗ್ಗೆ ಪ್ರಸ್ತಾಪಿಸಿದ ಸಿ.ಎಂ.ಇಬ್ರಾಹಿಂ,  ಭಾರತ್ ತೋಡೆ ಮಾಡಿದ್ದು ಯಾರು? ನೀವು ಮೊದಲು ಶಿವಕುಮಾರ್, ಸಿದ್ದರಾಮಯ್ಯನವರಿಗೆ ಜೋಡೊ ಮಾಡಿ ಅನಂತರ ಎಸ್.ಆರ್‌ ಪಾಟೀಲ್ ಅವರನ್ನ ತೋಡೊ ಮಾಡಿ ಎನ್ನುವ ಮೂಲಕ ಕಾಂಗ್ರೆಸ್‌ನ ನಾಯಕರಲ್ಲೇ ಒಗ್ಗಟ್ಟು ಇಲ್ಲದೆ ದೇಶ ಜೋಡಿಸಲು ಹೊರಟಿದ್ದಾರೆ ಎಂದು ವ್ಯಂಗ್ಯ ಮಾಡಿದರು. ಮುಂದುವರಿದು, ಕಾಂಗ್ರೆಸ್‌ ನಾಯಕರನ್ನ ಸಿಬಿಐ, ಇಡಿ ಮುಂದಿಟ್ಟುಕೊಂಡು ಬಿಜೆಪಿಯವರು ಹೆದರಿಸುತ್ತಿದ್ದಾರೆ ಎಂದರು.

ಮುಂದಿನ ಚುನಾವಣೆಗೆ ಜೆಡಿಎಸ್ ಬೆಳಗಾವಿ ಜಿಲ್ಲೆಯ ಎಲ್ಲಾ ಕ್ಷೇತ್ರದಲ್ಲಿ ಸ್ಪರ್ಧಿಸಲಿದೆ. ರಾಜ್ಯಾಧ್ಯಂತ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೇವೆ. 123 ಸ್ಥಾನ ಗೆಲ್ಲುವ ಮೂಲಕ ಕುಮಾರಸ್ವಾಮಿ ಮತ್ತೆ ಸಿಎಂ ಆಗಲಿದ್ದಾರೆ. ಮತ್ತೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಸಿಎಂ ಬೊಮ್ಮಾಯಿ ಒರಿಜಿನಲ್ RSS ಅಲ್ಲ; ಮುಸ್ಲಿಂ ಮೀಸಲಾತಿ ಕಡಿಮೆ ಮಾಡಲು ಸಾಧ್ಯವಿಲ್ಲ: CM Ibrahim

ತುಮಕೂರಿಗೆ ಆಗಮಿಸಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ:

ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮಕ್ಕೆ ತುಮಕೂರಿಗೆ ಆಗಮಿಸಿದ ಹೆಚ್ ಡಿ ಕುಮಾರಸ್ವಾಮಿ. ಜಾನಕಲ್ಲು ಗ್ರಾಮದ ಆಂಜನೇಯ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾದರು. ತುಮಕೂರು ಜಿಲ್ಲೆ ಶಿರಾ ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯಲ್ಲಿರುವ ಜಾನಕಲ್ಲು ಗ್ರಾಮ. ಜಾನಕಲ್ಲು ಗ್ರಾಮದ ಆಂಜನೇಯ ದೇವರಿಗೆ ಪೂಜೆ ಸಲ್ಲಿಸಿದರು. ಆಂಜನೇಯ ಸ್ವಾಮಿ ದೇವಸ್ಥಾನ ಉದ್ಘಾಟನೆ ಮಾಡಿದ ಹೆಚ್ ಡಿ ಕುಮಾರಸ್ವಾಮಿ. ಕಾರ್ಯಕ್ರಮದಲ್ಲಿ ಹೆಚ್ ಡಿ ಕುಮಾರಸ್ವಾಮಿ, ಮಾಜಿ ಶಾಸಕ ಸುರೇಶ್ ಬಾಬು, ಸೇರಿದಂತೆ ಹಲವು ನಾಯಕರು ಭಾಗಿ.

click me!