'ಬಿಜೆಪಿ ಬಿರುಗಾಳಿಯಲ್ಲಿ ಕಾಂಗ್ರೆಸ್‌ ಕೊಚ್ಚಿ ಹೋಗುತ್ತಿದೆ'

By Kannadaprabha News  |  First Published Nov 6, 2022, 2:25 PM IST

ರಾಹುಲ್‌ ಗಾಂಧಿ ಮಾಡುತ್ತಿರುವ ಭಾರತ ಜೋಡೋ ಜಾತ್ರೆ ಚೋಡೋ ಯಾತ್ರೆಯಾಗುತ್ತಿದೆ: ಚಂದ್ರಶೇಖರ ಕವಟಗಿ 


ಇಂಡಿ(ನ.06):  ರಾಹುಲ್‌ ಗಾಂಧಿ ಮಾಡುತ್ತಿರುವ ಭಾರತ ಜೋಡೋ ಜಾತ್ರೆ ಚೋಡೋ ಯಾತ್ರೆಯಾಗುತ್ತಿದೆ. ಕಾಂಗ್ರೆಸ್‌ ಮುಳುಗುತ್ತಿರುವ ಹಡಗು ಬಿಜೆಪಿ ಪಕ್ಷದ ಬಿರುಗಾಳಿಯಲ್ಲಿ ಕಾಂಗ್ರೆಸ್‌ ಕೊಚ್ಚಿಕೊಂಡು ಹೋಗುತ್ತಿದೆ ಎಂದು ವಿಭಾಗೀಯ ಪ್ರಚಾರ ಸಮಿತಿಯ ಚಂದ್ರಶೇಖರ ಕವಟಗಿ ಜಿಲ್ಲಾಧ್ಯಕ್ಷ ಹೇಳಿದರು.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣಸಿಂಗ್‌ ರವರ ಆಗಮನದ ಹಿನ್ನಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯಾಧ್ಯಕ್ಷರ ನೈತೃತ್ವದಲ್ಲಿ ಬರುವ 2023 ರ ಚುನಾವಣೆ ಹಿನ್ನಲೆಯಲ್ಲಿ ರಾಜ್ಯದ ಪ್ರತಿಕ್ಷೇತ್ರಗಳ ಆಗಮನ ಇರುತ್ತದೆ. 224 ಕ್ಷೇತ್ರಗಳಲ್ಲಿ ಒಂದಿಲ್ಲ ಒಂದು ತಂಡ ಒಂದೋಂದು ಕ್ಷೇತ್ರಕ್ಕೆ ರಾಜಕೀಯ ನಿಲುವುಗಳನ್ನು ಸ್ಪಷ್ಠ ಪಡಿಸಬೇಕು ಎಂದು ರಾಜ್ಯದ ಅಧ್ಯಕ್ಷರ ನೈತೃತ್ವದಲ್ಲಿ ಒಂದು ತಂಡ ಮುಖ್ಯ ಮಂತ್ರಿಗಳ ಒಂದು ತಂಡ, ರಾಷ್ಟ್ರೀಯ ಅಧ್ಯಕ್ಷ ಒಂದು ತಂಡ ರಾಜ್ಯದ ಉದಗಲಕ್ಕೂ 3 ತಂಡಗಳಲ್ಲಿ ಪ್ರವಾಸ ಮಾಡಲ್ಲಿದ್ದಾರೆ. ಈಗಾಗಲೇ 50 ಕ್ಕಿಂತ ಅಧಿಕ ಕ್ಷೇತ್ರಗಳನ್ನು ಸುತ್ತಾಡಿದ್ದಾರೆ. ಇಡೀ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಗಟ್ಟಿಯಾಗಿದೆ, ಒಳ್ಳೆಯ ವಾತಾವರಣ ಸೃಷ್ಠಿಯಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿ ಕೆಡರ್‌ ಬೇಸ್‌ ಮಾಡಿಕೊಳ್ಳುವ ಹಿನ್ನಲೆಯಲ್ಲಿ ಭೂತ ಮಟ್ಟದಿಂದ ಅಧಿಕಾರ ಪಡೇಯಬೇಕು ಎಂಬ ನಿಲುವಾಗಿದೆ. ಇದು ಕೇವಲ ಸಭೆ ಮಾಡಬೇಕು ಎಂಬ ಉದ್ದೇಶವಿಲ್ಲ ಭೂತ ಮಟ್ಟದಿಂದ ಸಂಘಟಿತರಾಗಬೇಕು .ನಾಳೆ ಬರುವ 2023ರ ಚುನಾವಣೆ ಭಾರತೀಯ ಜನತಾ ಪಾರ್ಟಿ ಪ್ರತಿಯೋಂದು ಕ್ಷೇತ್ರದಲ್ಲಿ ಆಯ್ಕೆಯಾಗಬೇಕು ಎಂಬ ಗುರಿಹೊಂದಲಾಗಿದೆ. ಬರುವ 8ನೇ ತಾರೀಖಿನ ದಿನ ಇಂಡಿ ಪಟ್ಟಣಕ್ಕೆ ಸಮಯ 11-00 ಗಂಟೆಗೆ ಭಾರತೀಯ ಜನತಾ ಪಕ್ಷದ ಕೇಂದ್ರ ಮಟ್ಟದ ಹಾಗೂ ರಾಜ್ಯ ಮಟ್ಟದ ವರಿಷ್ಠರು ಬರಲ್ಲಿದ್ದಾರೆ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಮುಖಂಡರು ಭಾಗವಹಿಸಬೇಕು ಎಂದರು.

Tap to resize

Latest Videos

ಮೀಸಲು ಹೆಚ್ಚಿಸಿ ವಿರೋಧಿಗಳಿಗೆ ಬಿಜೆಪಿ ಉತ್ತರ: ಎನ್‌.ರವಿಕುಮಾರ

ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕೀವುಡೆ, ದಯಾಸಾಗರ ಪಾಟೀಲ,ಕಾಸುಗೌಡ ಬಿರಾದಾರ, ಶೀಲವಂತ ಉಮರಾಣಿ, ಶ್ರೀಶೈಲಗೌಡ ಬಿರಾದಾರ,ಶಿವರುದ್ರ ಬಾಗಲಕೋಟ, ಮುತ್ತುದೇಸಾಯಿ, ಅನೀಲ ಜಮಾದಾರ,ಹಣಮಂತರಾಯಗೌಡ ಪಾಟೀಲ, ಸಿದ್ದಲಿಂಗ ಹಂಜಗಿ, ರಾಜು ಪೂಜಾರಿ,ವಿನೋದ ಚವ್ಹಾಣ, ಬುದ್ದುಗೌಡ ಪಾಟೀಲ,ವಿಜಯಲಕ್ಷ್ಮೀ ರೂಗಿಮಠ, ರವಿ ವಗ್ಗೆ ಸೇರಿದಂತೆ ಭಾಜಪ ಕಾರ್ಯಕರ್ತರು ಮುಖಂಡರು ಇದ್ದರು.
 

click me!