ವಿಧಾನ ಪರಿಷತ್​​ ನಾಮನಿರ್ದೇಶನ: ಹಳ್ಳಿ ಹಕ್ಕಿಗೆ ಮರು ಜೀವ, ಹಠ ಸಾಧಿಸಿದ ಬಿಎಸ್‌ವೈ

By Suvarna NewsFirst Published Jul 22, 2020, 6:00 PM IST
Highlights

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ಬೆಂಬಲಿಗರಿಗೆ ಎಂಎಲ್‌ಸಿ ಸ್ಥಾನ ಕೊಡಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಬಿಎಸ್‌ವೈ ಮತ್ತೊಮ್ಮೆ ಮೇಲುಗೈ ಸಾಧಿಸಿದ್ದಾರೆ.

ಬೆಂಗಳೂರು, (ಜು.22):  ಎಚ್. ವಿಶ್ವನಾಥ, ಸಿ. ಪಿ ಯೋಗೇಶ್ವರ್,  ಭಾರತಿ ಶೆಟ್ಟಿ, ಸಾಯಿಬಣ್ಣ ತಳವಾರ, ಶಾಂತಾರಾಂ ಸಿದ್ದಿ ಅವರನ್ನು ವಿಧಾನ ಪರಿಷತ್​ಗೆ ನಾಮನಿರ್ದೇಶನ ಮಾಡಲಾಗಿದೆ. ವಿಧಾನಪರಿಷತ್ ಐದು ಸ್ಥಾನಗಳಿಗೆ ನಾಮನಿರ್ದೇಶನ ಮಾಡಿ ಇಂದು (ಬುಧವಾರ) ರಾಜ್ಯಪಾಲ ವಜುಭಾಯಿ ವಾಲಾ ಆದೇಶ ಹೊರಡಿಸಿದ್ಧಾರೆ. 

"

ಕೊರೋನಾ ಗೆದ್ದ ಸುಮಲತಾ ಅಂಬರೀಶ್: ಐಟಿ ಕಂಪನಿಗಳಿಗೆ ಗುಡ್‌ ನ್ಯೂಸ್: ಜುಲೈ 22ರ ಟಾಪ್‌ 10 ಸುದ್ದಿ

ಸಾಹಿತ್ಯ ಕ್ಷೇತ್ರದಿಂದ ಎಚ್​. ವಿಶ್ವನಾಥ್​​​, ಸಿನಿಮಾ ಕ್ಷೇತ್ರದಿಂದ ಸಿ.ಪಿ ಯೋಗೇಶ್ವರ್​​, ಸಮಾಜ ಸೇವೆ ಕ್ಷೇತ್ರದಿಂದ ಭಾರತಿ ಶೆಟ್ಟಿ, ಶಿಕ್ಷಣ ಕ್ಷೇತ್ರದಿಂದ ಸಾಬಣ್ಣ ತಳವಾರ, ಬುಡಕಟ್ಟು ಕ್ಷೇತ್ರದಿಂದ ಶಾಂತಾರಾಂ ಸಿದ್ದಿರನ್ನು ಪರಿಷತ್​​ಗೆ ನಾಮನಿರ್ದೇಶನ ಮಾಡಲಾಗಿದೆ.

ಹಳ್ಳಿಹಕ್ಕಿಗೆ ಸಿಕ್ತು ಮರು ಜೀವ
ಹೌದು..ಹಳ್ಳಿ ಹಕ್ಕಿ ಎಚ್‌ ವಿಶ್ವನಾಥ್ ಅವರಿಗೆ ರಾಜಕೀಯ ಮರು ಜೀವ ಸಿಕ್ಕಂತಾಗಿದೆ. ಯಾಕಂದ್ರೆ ಕಾಂಗ್ರೆಸ್‌ನಲ್ಲಿದ್ದಾಗ ಎಂಪಿ ಚುನಾವಣೆಯಲ್ಲಿ ಸೋತು ಸೈಲೆಂಟ್ ಆಗಿದ್ದ ವಿಶ್ವನಾಥ್ ಜೆಡಿಎಸ್‌ಗೆ ಬಂದು ಶಾಸಕರಾದರು. ಆದರೆ ರಾಜಕೀಯ ಬೆಳವಣಿಗೆಯಿಂದ ಜೆಡಿಎಸ್ ಬಿಟ್ಟು ಬಿಜೆಪಿ ಸೇರಬೇಕಾಯ್ತು. ಆದ್ರೆ, ಹುಣಸೂರು ಉಪಚುನಾವಣೆಯಲ್ಲಿ ಸೋತು ಮುಖಭಂಗ ಅನುಭವಿಸಿದರು. ಇದೀಗ ಬಿಎಸ್ ಯಡಿಯೂರಪ್ಪ  ವಿಶ್ವನಾಥ್‌ ಅವರನ್ನ ವಿಧಾನಪರಿಷತ್‌ಗೆ ಕಳುಹಿಸಿ ರಾಜಕೀಯ ಮರುಜನ್ಮ ನೀಡಿದ್ದಾರೆ.

ಹಠ ಸಾಧಿಸಿದ ಯಡಿಯೂರಪ್ಪ

ಹೌದು..ಸಿಎಂ ಬಿಎಸ್‌ ಯಡಿಯೂರಪ್ಪ ಅವರು ತಮ್ಮ ಬೆಂಲಿಗರಿಗೆ ಎಂಎಲ್‌ಸಿ ಸ್ಥಾನ ಕೊಡಿಸುಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ. ಸಮ್ಮಿಶ್ರ ಸರ್ಕಾರ ಪತನಗೊಳಿಸಲು ಕಾಂಗ್ರೆಸ್​-ಜೆಡಿಎಸ್​ ಬಂಡಾಯ ಶಾಸಕರ ಮುಂದಾಳತ್ವ ವಹಿಸಿದ್ದ ಮಾಜಿ ಶಾಸಕ ಎಚ್. ವಿಶ್ವನಾಥ್ ಅವರನ್ನು ವಿಧಾನ ಪರಿಷತ್​ಗೆ ನಾಮನಿರ್ದೇಶನ ಮಾಡಲಾಗಿದೆ. 

ಅಲ್ಲದೇ ಭಾರತಿ ಶೆಟ್ಟಿ ಅವರಿಗೂ ವಿಧಾನಪರಿಷತ್ ಸ್ಥಾನ ಸಿಗಲು ಯಡಿಯೂರಪ್ಪನವರೇ ಕಾರಣ. ಈ ಮೂಲಕ ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ.

ಈ ಮೊದಲ ಯಡಿಯೂರಪ್ಪ ಅವರು ಪರಿಷತ್ ನಾಮನಿರ್ದೇಶನ ಅಭ್ಯರ್ಥಿಗಳ ಪಟ್ಟಿ ಹೈಕಮಾಂಡ್‌ಗೆ ಕಳುಹಿಸಿದ್ದರು. ಆದ್ರೆ, ಹೈಕಮಾಂಡ್ ವಿಶ್ವನಾಥ್ ಮತ್ತು ಭಾರತಿ ಶೆಟ್ಟಿ ಅವರ ಹೆಸರನ್ನ ರಿಜೆಕ್ಟ್ ಮಾಡಿತ್ತು.

ಆದರೂ  ಬಿಡದ ಬಿಎಸ್‌ವೈ, ಇವರಿಬ್ಬರಿಗೂ ಕೊಡಲೇಬೇಕೆಂದು ಹೈಕಮಾಂಡ್‌ ಬಳಿ ಪಟ್ಟು  ಹಿಡಿದು, ಒಪ್ಪಿಗೆ ತೆಗೆದುಕೊಂಡಿದ್ದಾರೆ. ಇದರಿಂದ ಬಿಎಸ್‌ವೈ ತಮ್ಮ ಹಠ ಸಾಧಿಸಿ ವಿಶ್ವನಾಥ್ ಮತ್ತು ಭಾರತಿ ಶೆಟ್ಟಿ ಅವರನ್ನ ಎಂಎಲ್‌ಸಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

click me!