ಕರ್ನಾಟಕದ ವಿಧಾನಪರಿಷತ್ ನಾಮನಿರ್ದೇಶನ ಅಭ್ಯರ್ಥಿಗಳ ಪಟ್ಟಿ ಫೈನಲ್

By Suvarna NewsFirst Published Jul 22, 2020, 5:08 PM IST
Highlights

ರಾಜ್ಯಸಭಾ ಚುನಾವಣೆಯಲ್ಲಿ ಕರ್ನಾಟದಿಂದ ಅಚ್ಚರಿಯ ಆಯ್ಕೆ ಮಾಡಿದ್ದ ಬಿಜೆಪಿ ಹೈಕಮಾಂಡ್ ಈಗ ವಿಧಾನಪರಿಷತ್​ಗೆ ನಾಮನಿರ್ದೇಶನದ ವಿಚಾರದಲ್ಲೂ ಅಚ್ಚರಿಯ ಆಯ್ಕೆ ಮಾಡಿದ್ದು, ಸದ್ದಿಲ್ಲದೇ ಅಭ್ಯರ್ಥಿಗಳನ್ನ ಫೈನಲ್ ಮಾಡಲಾಗಿದೆ. ಹಾಗಾದ್ರೆ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ ಎನ್ನುವುದು ಈ ಕೆಳಗಿನಂತಿದೆ.

ಬೆಂಗಳೂರು(ಜುಲೈ 22): ಕೊರೋನಾ ವೈರಸ್ ಭೀತಿ ನಡುವೆಯೂ ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಗರಿಗೆದರಿದ್ದು, ವಿಧಾನಪರಿಷತ್ ನಾಮನಿರ್ದೇಶನದ ಅಭ್ಯರ್ಥಿಗಳ ಆಯ್ಕೆ ಸಂಬಂಧ ಬಿಜೆಪಿ ರಾಜಕೀಯ ಬಿರುಸುಗೊಂಡಿದೆ.  

ರಾಜ್ಯಸಭಾ ಚುನಾವಣೆಯಲ್ಲಿ ಕರ್ನಾಟದಿಂದ ಅಚ್ಚರಿಯ ಆಯ್ಕೆ ಮಾಡಿದ್ದ ಬಿಜೆಪಿ ಹೈಕಮಾಂಡ್ ಈಗ ವಿಧಾನಪರಿಷತ್​ಗೆ ನಾಮನಿರ್ದೇಶನದ ವಿಚಾರದಲ್ಲೂ ಅಚ್ಚರಿಯ ಆಯ್ಕೆ ಮಾಡಿದೆ. 5 ವಿಧಾನಪರಿಷತ್ ನಾಮನಿರ್ದೇಶನದ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಅಂತಿಮಗೊಳಿಸಿದ್ದು, ಇನ್ನೇನು ಅಧಿಕೃತ ಘೊಷಣೆಯೊಂದೇ ಬಾಕಿ ಇದೆ.

"

ಕೊರೋನಾ ಗೆದ್ದ ಸುಮಲತಾ ಅಂಬರೀಶ್: ಐಟಿ ಕಂಪನಿಗಳಿಗೆ ಗುಡ್‌ ನ್ಯೂಸ್: ಜುಲೈ 22ರ ಟಾಪ್‌ 10 ಸುದ್ದಿ

ರಾಜ್ಯದ ವಿಧಾನಪರಿಷತ್​ನಲ್ಲಿ ಒಟ್ಟು 11 ಸ್ಥಾನಗಳನ್ನ ರಾಜ್ಯಪಾಲರೇ ನೇರವಾಗಿ ನಾಮನಿರ್ದೇಶನ ಮಾಡುತ್ತಾರೆ. ಅದರಲ್ಲಿ ಈಗ ಐದು ಸ್ಥಾನಗಳು ಖಾಲಿ ಇದ್ದು, ಈ ಐದು ಸ್ಥಾನಗಳನ್ನ ಭರ್ತಿ ಮಾಡಲು ಬಿಜೆಪಿ ಮುಂದಾಗಿದೆ.

ಇದಕ್ಕೆ ಪೂರಕವೆಂಬಂತೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಇಂದು (ಬುಧವಾರ) ರಾಜ್ಯಪಾಲ ವಾಜುಬಾಯಿ ವಾಲಾ ಅವರನ್ನ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. 

ಅಲ್ಲದೇ ಈ ವೇಳೆ ಯಡಿಯೂರಪ್ಪ ಅವರು ನಾಮನಿರ್ದೇಶನ ಸದಸ್ಯರ ಪಟ್ಟಿಯನ್ನು ರಾಜ್ಯಪಾಲ ವಾಜುಬಾಯಿ ವಾಲಾ ಅವರಿಗೆ ಕೊಟ್ಟುಬಂದಿದ್ದಾರೆ ಎಂದು ಮಾಹಿತಿ ತಿಳಿಬಂದಿದ್ದು, ಶೀಘ್ರದಲ್ಲೇ ರಾಜಭವನದಿಂದ ಅಧಿಕೃತವಾಗಿ ನಾಮನಿರ್ದೇಶನ ಸದಸ್ಯರುಗಳ ಹೆಸರು ಘೋಷಣೆಯಾಗಲಿದೆ.

ನಟಿ ಮಾಳವಿಕ ಅವಿನಾಶ್, ಮತ್ತು ಶಿಕ್ಷಣ ಕ್ಷೇತ್ರದಿಂದ ಗುರುರಾಜ್ ಕರ್ಜಗಿ ಅವರ ಹೆಸರು ಸಹ ಕೇಳಿಬಂದಿದ್ದವು. ಆದ್ರೆ, ಕೊನೆಗಳಿಗೆಯಲ್ಲಿ  ಶಾಂತಾರಾಂ ಸಿದ್ದಿ, ಸಿಪಿ ಯೋಗೇಶ್ವರ್, ಎಚ್‌ ವಿಶ್ವನಾಥ್ , ಸಾಬಣ್ಣ ತಳವಾರ್ ಮತ್ತು ಭಾರತಿ ಶೆಟ್ಟಿ ಹೆಸರನ್ನು ಬಿಜೆಪಿ ಅಂತಿಮಗೊಳಿಸಿದ್ದು, ಹೈಕಮಾಂಡ್ ಅನುಮತಿಗೆ ನೀಡಿದೆ. ಈ ಹಿನ್ನೆಯಲ್ಲಿ ಖುದ್ದು ಸಿಎಂ ರಾಜಪಾಲರಿಗೆ ಬಳಿ ಹೋಗಿ ಅಭ್ಯರ್ಥಿಗಳ ಪಟ್ಟಿ ನೀಡಿದ್ದಾರೆ.

* ಶಾಂತಾರಾಂ ಸಿದ್ದಿ - ವನವಾಸಿ ಕಲ್ಯಾಣ ಸೇವಾ ವಲಯದಲ್ಲಿ ಕೆಲಸ ಮಾಡ್ತಿರುವ ಮುಖಂಡ. - ( ವಿಶಿಷ್ಟ ಸೇವಾ ಕ್ಷೇತ್ರ)
* ಎಚ್‌.ವಿಶ್ವನಾಥ್ - ಸಾಹಿತ್ಯ ಕ್ಷೇತ್ರ.
* ಸಿ ಪಿ ಯೋಗೇಶ್ವರ್ - ಸಿನಿಮಾ ಕ್ಷೇತ್ರ.
* ಸಾಬಣ್ಣ ತಳವಾರ್- ಶಿಕ್ಷಣ ಕ್ಷೇತ್ರ
* ಭಾರತಿ ಶೆಟ್ಟಿ - ಸಮಾಜಸೇವೆ.

click me!