ಉಪಚುನಾವಣೆ ಕಣದಲ್ಲಿಯೇ ಆರ್. ಶಂಕರ್‌ಗೆ ಸಿಎಂ BSY ಅಡ್ವಾನ್ಸ್ ಗಿಫ್ಟ್!

By Web DeskFirst Published Nov 29, 2019, 1:21 PM IST
Highlights

ರಾಣೇಬೆನ್ನೂರಿನಲ್ಲಿ ಬಿಜೆಪಿ ಪ್ರಚಾರ/ ಆರ್. ಶಂಕರ್ ಗೆ ಸೂಕ್ತ ಸ್ಥಾನ ನೀಡುವುದಾಗಿ ಬಿಎಸ್ ಯಡಿಯೂರಪ್ಪ ಘೋಷಣೆ/ ನೇಕಾರರು, ರೈತರ ಹಿತ ಕಾಯಲು ಸರ್ಕಾರ ಬದ್ಧ/ 

ಹಾವೇರಿ(ನ.29)  ರಾಣೆಬೆನ್ನೂರು ಉಪಚುನಾವಣೆ ಪ್ರಚಾರದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಫುಲ್ ಬ್ಯುಸಿಯಾಗಿದ್ದಾರೆ. ತುಮ್ಮಿನಕಟ್ಟೆಯಲ್ಲಿ ಯಡಿಯೂರಪ್ಪ ಹೇಳಿಕೆ ನೀಡಿರುವ ಬಿಎಸ್ ಯಡಿಯೂರಪ್ಪ ಆರ್ . ಶಂಕರ್ ಗೆ ಸರ್ಕಾರದಲ್ಲಿ ಸೂಕ್ತ ಸ್ಥಾನ ಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಸರ್ಕಾರದ ಖಜಾನೆ ತುಂಬಿದೆ. 3.5 ವರ್ಷದಲ್ಲಿ ಎಲ್ಲರಿಗೂ ಸೂರು ಎಲ್ಲರಿಗೂ ಸೂರು ಕಲ್ಪಿಸಲು ಖಜಾನೆಯಲ್ಲಿ ಹಣ ಇದೆ. ಆರ್.ಶಂಕರ್ ಗೆ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಸಮೀಕ್ಷೆಗಳ ಪ್ರಕಾರ ಯಾರು ಎಷ್ಟು ಸ್ಥಾನ ಗೆಲ್ಲಬಹುದು?

ನೇಕಾರರು, ರೈತರು ನನ್ನ ಎರಡು ಕಣ್ಣು. ಅಧಿಕಾರಕ್ಕೆ ಬಂದಾಕ್ಷಣ ನೇಕಾರರ ಸಾಲ ಮನ್ನ ಮಾಡಿದ್ದೇನೆ. ರಾಷ್ಟ್ರೀಯ ಬ್ಯಾಂಕ್ ನಲ್ಲಿ ನೇಕಾರರ ಸಾಲ ಮನ್ನಾ ಆಗಿಲ್ಲ ಎನ್ನುತ್ತಿದ್ದಾರೆ. ಅದನ್ನ ಪರಿಶೀಲನೆ ಮಾಡ್ತಿನಿ ನೇಕಾರರ ಸಮುದಾಯಕ್ಕೆ ಏನು ಬೇಕು ಆ ಸಹಾಯ ಮಾಡ್ತಿನಿ ಎಂದು ಹೇಳೀದ್ದಾರೆ.

ಉದ್ಯೋಗ ಸೃಜನೆ, ರೈತರಿಗೆ ವೈಜ್ಞಾನಿಕ ಬೆಲೆ ಸೇರಿದಂತೆ ಇತರೆ ಯೋಜನೆಗೂ ಗಮನ ನೀಡಿದ್ದೇವೆ.  ಕುರುಬ, ನೇಕಾರ, ಎಸ್ಸಿ-ಎಸ್ಟಿ ಸಮುದಾಯದ ಹಿತ ಕಾಯಲು ಬದ್ಧರಾಗಿದ್ದೇವೆ ಎಂದರು.

3.5 ವರ್ಷದಲ್ಲಿ ರಾಜ್ಯವನ್ನ ಮಾದರಿ ರಾಜ್ಯ ಮಾಡುತ್ತೇವೆ. ಲೋಕಸಭೆಯಲ್ಲಿ 22 ಕ್ಷೇತ್ರ ಗೆಲ್ತಿವಿ ಅದಾಗ ಮಾಧ್ಯಮದವ್ರು, ವಿರೋಧ ಪಕ್ಷದವ್ರು ನಕ್ಕರು. ಆದರೆ, 25 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದೇವೆ ಎಂದರು.

ನೀವು ಪೂಜೆ ಮಾಡುವಾಗ ಅರುಣ್ ಕುಮಾರ್ ಗೆ , ಯಡಿಯೂರಪ್ಪಗೆ ಒಳ್ಳೆಯದಾಗಲಿ, ಸರ್ಕಾರ ಸುಭದ್ರವಾಗಿರಲಿ ಅಂತ ಎರಡು ಹೂವು ಹಾಕಿ ಅಂತ  ಬಿಎಸ್ ಯಡಿಯೂರಪ್ಪ ಮನವಿ ಮಾಡಿಕೊಂಡರು.

 

click me!