ಪ್ರಚಾರದ ವೇಳೆ ಉಪಚುನಾವಣೆ ಪಕ್ಷೇತರ ಅಭ್ಯರ್ಥಿಗೆ ಹಾರ್ಟ್ ಅಟ್ಯಾಕ್

By Web Desk  |  First Published Nov 28, 2019, 10:24 PM IST

ಪ್ರಚಾರದ ವೇಳೆ ಎದೆ ನೋವಿನಿಂದ ಕುಸಿದು ಬಿದ್ದ ಅಭ್ಯರ್ಥಿ/ ಹುಣಸೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿಗೆ ಲಘೂ ಹೃದಯಾಘಾತ/ ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ/ ಪ್ರಾಣಾಪಾಯದಿಂದ ಪಾರಾದ ಉಮೇಶ್


ಹುಣಸೂರು (ನ. 28)  ಪ್ರಚಾರದ ವೇಳೆ ಎದೆ ನೋವಿನಿಂದ ಅಭ್ಯರ್ಥಿ ಕುಸಿದು ಬಿದ್ದಿದ್ದಾರೆ.  ಹುಣಸೂರು ಪಕ್ಷೇತರ ಅಭ್ಯರ್ಥಿ ಕಲ್ಕುಣಿ ಉಮೇಶ್‌ಗೆ ಲಘು ಹೃದಯಾಘಾತವಾಗಿದೆ.

ಹುಣಸೂರು ಪಟ್ಟಣದಲ್ಲಿ ಪ್ರಚಾರ ಮಾಡುತ್ತಿದ್ದ ವೇಳೆ ಘಟನೆ ನಡೆದಿದೆ. ತಕ್ಷಣ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.  ಪ್ರಾಣಾಪಾಯದಿಂದ ಪಕ್ಷೇತರ ಅಭ್ಯರ್ಥಿ ಪಾರಾಗಿದ್ದಾರೆ.

Latest Videos

undefined

ಉಪಚುನಾವಣೆ ಸಮಗ್ರ ಸುದ್ದಿ

ಹುಣಸೂರು ಕ್ಷೇತ್ರದಲ್ಲಿಯೂ ಅಬ್ಬರ ದ ಚುನಾವಣಾ ಕಾವಿದೆ. ಬಿಜೆಪಿಯಿಂದ ಎಚ್. ವಿಶ್ವನಾಥ್ ಕಣದಲ್ಲಿದ್ದಾರೆ. ಜೆಡಿಎಸ್ ನಲ್ಲಿದ್ದ ವಿಶ್ವನಾಥ್ ಬದಲಾದ ರಾಜಕಾರಣದ ವಾತಾವರಣದಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಮೇಲೆ ಅಂದು ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ರಾಜೀನಾಮೆ ಕೊಟ್ಟಿದ್ದ ಎಲ್ಲ ಶಾಸಕರನ್ನು ಅನರ್ಹ ಮಾಡಿದ್ದರು.

ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿ ಶಾಸಕರನ್ನು ಅನರ್ಹ ಎಂದು ಹೇಳಿತ್ತು. ಆದರೆ ಚುನಾವಣೆಗೆ ಸ್ಪರ್ಧೆ ಮಾಡಲು ಹಸಿರು ನಿಶಾನೆ ತೋರಿತ್ತು. ಹಾಗಾಗಿ ಹುಣಸೂರು ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ.

click me!