Assembly election: ಪ್ರಧಾನಿ ಮೋದಿ ಮುಂದೆ ಸಿಎಂ ಬೊಮ್ಮಾಯಿ ನಾಯಿ ಬಾಲ: ಮತ್ತೆ ಟೀಕಿಸಿದ ಸಿದ್ದರಾಮಯ್ಯ

By Sathish Kumar KHFirst Published Jan 4, 2023, 8:20 PM IST
Highlights

ನರೇಂದ್ರ ಮೋದಿ ಅವರ ಮುಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಯಿಮರಿ ಹಾಗೆ ಇರುತ್ತಾರೆ ಸಿದ್ದರಾಮಯ್ಯ ಎಂದು ಹೇಳಿದ್ದ ಹೇಳಿಕೆಗೆ ವಿರೋಧ ವ್ಯಕ್ತವಾಗಿತ್ತು. ಇದನ್ನು ಲೆಕ್ಕಿಸದೇ ಇಂದೂ ಕೂಡ ಸಿಎಂ ಬೊಮ್ಮಾಯಿ ಅವರನ್ನು ನಾಯಿ ಬಾಲಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೋಲಿಕೆ ಮಾಡಿದ್ದಾರೆ.

ತುಮಕೂರು (ಜ.04): ನರೇಂದ್ರ ಮೋದಿ ಅವರ ಮುಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಯಿಮರಿ ಹಾಗೆ ಇರುತ್ತಾರೆ ಸಿದ್ದರಾಮಯ್ಯ ಎಂದು ಹೇಳಿದ್ದ ಹೇಳಿಕೆಗೆ ವಿರೋಧ ವ್ಯಕ್ತವಾಗಿತ್ತು. ಇದನ್ನು ಲೆಕ್ಕಿಸದೇ ಇಂದೂ ಕೂಡ ಸಿಎಂ ಬೊಮ್ಮಾಯಿ ಅವರನ್ನು ನಾಯಿ ಬಾಲಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೋಲಿಕೆ ಮಾಡಿದ್ದಾರೆ.

ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದೂ ಕೂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಗ್ಗೆ ಹಗುರವಾದ ಮಾತುಗಳನ್ನಾಡಿದ್ದಾರೆ. ಈಗಾಗಲೇ ನಿನ್ನೆ ಸಿಎಂ ಬೊಮ್ಮಾಯಿ ಅವರನ್ನು ನಾಯಿಮರಿಗೆ ಹೋಲಿಕೆ ಮಾಡಿದ್ದರು. ಈ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸೇರಿ, ಬಿಜೆಪಿ ಪಕ್ಷದ ಎಲ್ಲ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.ಇಂದು ಪುನಃ ಸಿಎಂ ಬಗ್ಗೆ ಹಗುರವಾಗಿ ಮಾತನಾಡಿದ ಸಿದ್ದರಾಮಯ್ಯ ಅವರು, ಬೊಮ್ಮಾಯಿ ಅವರೇ ಎರಡೂವರೆ ತಿಂಗಳು ಮಾತ್ರ ಇರೋದು. ಮೋದಿ ಮುಂದೆ ಬೊಮ್ಮಾಯಿ ಅವರು ನಾಯಿ ಬಾಲದ ರೀತಿ ಇರ್ತಾರೆ. ಬಸವರಾಜ ಬೊಮ್ಮಾಯಿ ಅವರೇ ನಿಮ್ಮ ತಾಕತ್ತು, ಧಮ್ಮು ಎಲ್ಲೋಯ್ತು? ಕೇಂದ್ರಕ್ಕೆ ಹೋಗಿರುವ 3.5 ಲಕ್ಷ ಕೋಟಿ ತೆರಿಗೆ ವಸೂಲಿ ಎಲ್ಲೋಯ್ತು? ಎಂದು ಉರಿವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ.

26 ಸಾವಿರ ಕೋಟಿ ರೂ. ಬಿಲ್‌ ಬಾಕಿ: ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರ ಶೇಕಡಾ 40% ಕಮಿಷನ್ ಕೇಳುತ್ತಿದೆ. ಕಮಿಷನ್ ಕೊಡಲಿಕ್ಕೆ ಆಗಲ್ಲ ಎಂದು ಹೇಳಿದ ಗುತ್ತಿಗೆದಾರರಿಗೆ ಕೊಡಬೇಕಾದ 26 ಸಾವಿರ ಕೋಟಿ ರೂ. ಬಿಲ್‌ ಅನ್ನು ಬಾಕಿ ಉಳಿಸಿಕೊಂಡಿದೆ. ಸಂತೋಷ್ ಪಾಟೀಲ್ ಕಮಿಷನ್ ಕೊಡಲಾಗದೆ ಆತ್ಮಹತ್ಯೆ ಮಾಡಿಕೊಂಡರು. ಡೆತ್ ನೋಟ್‌ನಲ್ಲಿ ಈಶ್ವರಪ್ಪ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡರು. ಮೂರೇ ತಿಂಗಳಲ್ಲೇ ಬಿ ರಿಪೋರ್ಟ್ ಹಾಕಿ ಈಶ್ವರಪ್ಪ ಕೇಸನ್ನೇ ಮುಚ್ಚಿ ಹಾಕಿದರು. ಕಂಟ್ರಾಕ್ಟರ್‌ಗಳು ದಯಾಮರಣ ಕೊಡಿ ಅಂತಾ ಕೇಳ್ತಿದ್ದಾರೆ. ಮಿಸ್ಟರ್ ನರೇಂದ್ರ ಮೋದಿ ಸತ್ತೋದವರೆಲ್ಲ ಯಾರ ಕಾಲದಲ್ಲಿ. ಕಮಿಷನ್ ಆರೋಪ ಕೇಳಿಬಂದು ವರ್ಷಕ್ಕೂ ಜಾಸ್ತಿ ಆಯ್ತು. ತನಿಖೆ ಮಾಡಲಿಲ್ಲ. ವಿಚಾರಣೆ ಮಾಡಲಿಲ್ಲ. ಬದಲಿಗೆ ಕಂಟ್ರಾಕ್ಟರ್ ಕೆಂಪಣ್ಣ ಅವರನ್ನ ಅರೆಸ್ಟ್ ಮಾಡಿಸ್ತಾರೆ ಎಂದರು.

ನಾಯಿಮರಿಗೆ ಸಿಎಂ ಬೊಮ್ಮಾಯಿ ಹೋಲಿಕೆ: ಸಿದ್ದರಾಮಯ್ಯ ಮಾತಿಗೆ ಸಾಥ್ ನೀಡಿದ ಕುಮಾರಸ್ವಾಮಿ

ರೈತರ ಸಾಲ ಮನ್ನಾ ಮಾಡದ ಮೋದಿ: ನರೇಂದ್ರ ಮೋದಿ ಬಿಡಿ ಕಾಸು ಮನ್ನಾ ಮಾಡಿದ್ರಾ..? ಬಂಡವಾಳ ಶಾಹಿಗಳ ಸಾಲವನ್ನ ನರೇಂದ್ರ ಮೋದಿ ಮನ್ನಾ ಮಾಡ್ತಾರೆ. 10.90 ಲಕ್ಷ ಕೋಟಿಯನ್ನ ಬಂಡವಾಳ ಶಾಹಿಗಳ ಸಾಲವನ್ನ ಮಾಡ್ತಾರೆ. 600 ಭರವಸೆಗಳನ್ನ ಬಿಜೆಪಿ ಕೊಟ್ಟಿದ್ದರು. ಆದ್ರೆ, 10 % ಈಡೇರಿಸಲು ಆಗಲಿಲ್ಲ. ಕಾಂಗ್ರೆಸ್ ನುಡಿದಂತೆ ನಡೆದಿದ್ದೇವೆ. ಆದ್ರೆ ಬಿಜೆಪಿ ಜನರಿಗೆ ದ್ರೋಹ ಮಾಡಿದ್ದೀರಿ. ಕಾಂಗ್ರೆಸ್‌ನ ಕೃಷಿ ಭಾಗ್ಯ, ಅನ್ನ ಭಾಗ್ಯ, ಶಾದಿ ಭಾಗ್ಯಗಳನ್ನ ಮುಚ್ಚುತ್ತಾ ಬಂದಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಬಂದರೆ 10 ಕೆ.ಜಿ ಅಕ್ಕಿ ವಿತರಣೆ: ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ 10 ಕೆ.ಜಿ ಅಕ್ಕಿಯನ್ನ ಬಡವರಿಗೆ ಕೊಡ್ತೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಎಲ್ಲಾ ನೀರಾವರಿ ಯೋಜನೆಗಳನ್ನ ಕಾಂಗ್ರೆಸ್ ಪೂರ್ಣಗೊಳಿಸಲಿದೆ. ಬೋವಿ, ಲಂಬಾಣಿ ಸಮುದಾಯವನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ. ಎಲ್ಲರ ವಿಶ್ವಾಸದ ಮೇರೆಗೆ ಸದಾಶಿವ ಆಯೋಗವನ್ನ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗುವುದು. ಮೀಸಲಾತಿ ಕೊಟ್ಟವರು ಕಾಂಗ್ರೆಸ್, ವಿರೋಧ ವ್ಯಕ್ತಪಡಿಸಿದರು ಬಿಜೆಪಿಗರು. ಬಿಜೆಪಿಯ ರಾಮಾ ಜೋಯಿಸ್ ಅವರೇ ಮೀಸಲಾತಿ ವಿರುದ್ಧ ಕೋರ್ಟ್‌ಗೆ ಹೋದವರು. ಬಿಜೆಪಿಯವರೇ ಮೀಸಲಾತಿ ವಿರೋಧಿಗಳು. ಬಿಜೆಪಿಗರು ಸಮ ಸಮಾಜದ ವಿರೋಧಿಗಳು ಎಂದರು.

ನಿನ್ನ ಮಾತು ನಿನ್ನ ಸಂಸ್ಕಾರ ತೋರಿಸಿಕೊಟ್ಟಿದೆ: ಸಿದ್ದರಾಮಯ್ಯಗೆ ಶ್ರೀರಾಮುಲು ಟಾಂಗ್

ನಮ್ಮೂರಲ್ಲಿರುವುದು ರಾಮಮಂದಿರ ಅಲ್ವಾ?:  ನಮ್ಮೂರಲ್ಲಿ ರಾಮ‌ ಮಂದಿರ ಕಟ್ಟಿಲ್ವಾ. ನಮ್ಮೂರಿನಲ್ಲಿ ಕಟ್ಟಿರೋದು ರಾಮ ಮಂದಿರ ಅಲ್ವಾ ? ನಮ್ಮೂರಲ್ಲೂ, ಇವರೂರಲ್ಲೂ, ಅವರೂರಲ್ಲೂ  ಎಲ್ಲಾ ಊರಿನಲ್ಲೂ ಕಟ್ಟಿದ್ದಾರೆ.  ರಾಮಭಜನೆ ಮಾಡಲು ಶುರು ಮಾಡಿದ್ದು ಯಾರು. ಗಾಂಧಿಜೀ ರಾಮ ಭಜನೆ ಶುರು ಮಾಡಿದ್ದರು. ರಾಮ್-ರಹೀಂ ಅಂತ ಹೇಳಿದವರು. ಕಾಂಗ್ರೆಸ್ ನಲ್ಲಿ ಲಕ್ಷಾಂತರ ಕಾರ್ಯಕರ್ತರಿದ್ದಾರೆ. ಯಾರೋ ಒಬ್ಬರು ಹೋದರೆ ಹೋಗಲಿ ಎಂದು ತಮ್ಮ ಆಪ್ತ ಹನುಮಂತು ಜನಾರ್ದನ ರೆಡ್ಡಿ ಪಕ್ಷ ಸೇರ್ಪಡೆ ಬಗ್ಗೆ ಹೇಳಿದರು.

ತಿಂಗಳ ಕೊನೆಯಲ್ಲಿ 150 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ:  ಈ ತಿಂಗಳ‌ ಕೊನೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಆಗುತ್ತದೆ. 150 ಜನ ಅಭ್ಯರ್ಥಿಗಳು ಈ ಪಟ್ಟಿಯಲ್ಲಿ ಇರಲಿದ್ದಾರೆ.  ಮನಮೋಹನ್ ಸಿಂಗ್ ಇದ್ದಾಗ ಸಿದ್ದರಾಮಯ್ಯ ಅನುದಾನ ತರಲು ಆಗಲಿಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಾರೆ. ಆದರೆ, ಪುಡ್ ಸೆಕ್ಯೂರಿಟಿ ಬಿಲ್ ತಂದವರು ಯಾರು? ಮನಮೋಹನ್ ಸಿಂಗ್ ಅವರು ನಾನು ಮುಖ್ಯಮಂತ್ರಿ ಆದ ಮೇಲೆ ಇದಿದ್ದು, ಒಂದೇ ವರ್ಷ. ಉಳಿದ ಒಂಭತ್ತು ವರ್ಷ ಇದ್ದವರು ಏನೇನು ಕೊಟ್ಟಿದ್ದಾರಂತೆ. 15ನೇ ಹಣಕಾಸಿ ಆಯೋಗದಲ್ಲಿ 5,495 ಕೋಟಿ ವಿಶೇಷ ಅನುದಾನ ನೀಡಲಾಗಿತ್ತು. ಈ ಅನುದಾನ ಬಂತಾ? ಎಂದು ಪ್ರಶ್ನೆ ಮಾಡಿದರು.

ನಾನು ನಿಯತ್ತಿನ ನಾಯಿ ಎಂದ ಬೊಮ್ಮಾಯಿ: ಸಿದ್ದುಗೆ ಸಿಎಂ ಟಾಂಗ್‌..!

ಚುನಾವಣೆ ಬೆನ್ನಲ್ಲೇ ಮಹಾದಾಯಿ ಮುನ್ನೆಲೆಗೆ: ಅಸೆಂಬ್ಲಿ ಇನ್ನೊಂದು ವಾರ ಮಾಡಬೇಕಿತ್ತು. ಯಾಕೆ‌ ಮೊಟಕು ಗೊಳಿಸಿದ್ದು? ಉತ್ತರ ಕರ್ನಾಟಕದ ಬಗ್ಗೆ ನೀವು ಮಾತನಾಡಿದ್ರಾ. ಜಗದೀಶ್ ಶೆಟ್ಟರ್ ಮಹದಾಯಿ ಬಗ್ಗೆ ಮಾತನಾಡಿದ್ರಾ? ಅವರಿಗಿದೆಯಾ ನೈತಿಕತೆ. 2018ರಲ್ಲಿ ಯಡಿಯೂರಪ್ಪ ಮನೋಹರ್ ಪರಿಕರ್ ಬಳಿ ಲೆಟರ್ ತಂದು.  ನಾನು ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಮಹದಾಯಿ ವಿಚಾರ ಇತ್ಯರ್ಥ ಮಾಡಿ ಕುಡಿಯಲು ನೀರು ಕೊಡ್ತೀವಿ ಅಂತ ಹೇಳಿದ್ದರು. ರಕ್ತದಲ್ಲಿ ಬರೆದುಕೊಡ್ತೀನಿ ಎಂದಿದ್ದರು. ಅದನ್ನು ಮಾಡಿದ್ರಾ? 2018ರಲ್ಲಿ ಸುಪ್ರಿಂಕೋರ್ಟ್ ತೀರ್ಪು ಮಾಡಿದ್ದಲ್ಲ. 13.42 ಟಿಎಂಸಿ  ಕರ್ನಾಟಕಕ್ಕೆ, 24 ಟಿಎಂಸಿ ನೀರು ಗೋವಾಕ್ಕೆ, 1.3 ಟಿಎಂಸಿ ನೀರು ಮಹರಾಷ್ಟ್ರಕ್ಕೆ ಅಂತ ತೀರ್ಪು ಬಂತು. ಅದು ಇವರು ಮಾಡಿದ್ದಲ್ಲ. 2020ರಲ್ಲಿ ಗೆಜೆಟ್ ನೋಟಿಫೀಕೇಷನ್ ಆಯ್ತು. ಅವತ್ತಿಂದ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಏನು ಮಾಡುತ್ತಿದ್ದರು? ಈಗ ಚುನಾವಣೆ ಬಂದಿದೆ ಅಂತ  ಡಿಪಿಆರ್ ಒಪ್ಪಿಕೊಂಡಿದ್ದೇವೆ ಅಂತಿದ್ದಾರೆ‌‌ ಇದು ಡೋಂಗಿತನ ಎಂದರು. 

click me!