ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನರೇಂದ್ರ ಮೋದಿ ಅವರ ಮುಂದೆ ನಾಯಿಮರಿ ಹಾಗೇನೇ ಎಂದು ನಾನು ಯಾವತ್ತೋ ಹೇಳಿದ್ದೆ. ಆದರೆ, ಸಿದ್ದರಾಮಯ್ಯ ಅವರಿಗೆ ಈಗ ಗೊತ್ತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ಮಾತಿಗೆ ಸಾಥ್ ನೀಡಿದ್ದಾರೆ.
ಬೆಂಗಳೂರು (ಜ.04): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನರೇಂದ್ರ ಮೋದಿ ಅವರ ಮುಂದೆ ನಾಯಿಮರಿ ಹಾಗೇನೇ ಎಂದು ನಾನು ಯಾವತ್ತೋ ಹೇಳಿದ್ದೆ. ಆದರೆ, ಸಿದ್ದರಾಮಯ್ಯ ಅವರಿಗೆ ಈಗ ಗೊತ್ತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ಮಾತಿಗೆ ಸಾಥ್ ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದನ ಕುಮಾರಸ್ವಾಮಿ ಅವರು, ಮೋದಿ ಎದುರು ಬೊಮ್ಮಾಯಿ ನಾಯಿಮರಿಯೇ. ಅವರು ಹಾಗೇನೇ ಅಂತಾ ಸಿದ್ದರಾಮಯ್ಯಗೆ ಈಗ ಗೊತ್ತಾಗಿದೆ. ನಾನು ಯಾವತ್ತೋ ಈ ಮಾತನ್ನು ಹೇಳಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಬಗ್ಗೆ ಲೇವಡಿ ಮಾಡಿದರು. ಇನ್ನು ನಾಳೆ ಕೇಂದ್ರ ಸಾರಿಗೆ ಸಚಿವ ಗಡ್ಕರಿಯಿಂದ ಬೆಂಗಳೂರು-ಮೈಸೂರು ದಶಪಥ ರಸ್ತೆಯ ವೈಮಾನಿಕ ಸಮೀಕ್ಷೆಗೆ ಆಗಮಿಸುತ್ತಿದ್ದಾರೆ. ದಶಪಥ ರಸ್ತೆ ಕಾಮಗಾರಿಗೆ ಚಾಲನೆ ಕೊಟ್ಟಿದ್ದು ನಾನು. ಒಂಭತ್ತು ಸಭೆ ಮಾಡಿ ಕೆಲಸಕ್ಕೆ ಚಾಲನೆ ಕೊಟ್ಟಿದ್ದೇನೆ ಎಂದರು.
ನಿನ್ನ ಮಾತು ನಿನ್ನ ಸಂಸ್ಕಾರ ತೋರಿಸಿಕೊಟ್ಟಿದೆ: ಸಿದ್ದರಾಮಯ್ಯಗೆ ಶ್ರೀರಾಮುಲು ಟಾಂಗ್
ದಶಪಥ ಹೆದ್ದಾರಿಗೆ ಚಾಲನೆ ಕೊಟ್ಟಿದ್ದು ನಾನು: ದಶಪಥ ರಸ್ತೆಯ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ನೂರಾರು ಕೋಟಿ ಅವ್ಯವಹಾರ ಆಗಿದೆ. ಈ ಅವ್ಯವಹಾರ ಬಗ್ಗೆ ಜೆಡಿಎಸ್ ಸರ್ಕಾರ ಬಂದರೆ ತನಿಖೆ ಮಾಡುತ್ತೇವೆ. ದಶಪಥ ರಸ್ತೆಯ ನಿರ್ಮಾಣದಲ್ಲಿ ಕುಮಾರಸ್ವಾಮಿ, ರೇವಣ್ಣ ಪಾತ್ರವೂ ಜಾಸ್ತಿ ಇದೆ. ಈಗ ಬಂದು ವೈಮಾನಿಕ ಸಮೀಕ್ಷೆ ಮಾಡೋದು ದೊಡ್ಡದಲ್ಲ. ದಶಪಥ ರಸ್ತೆಗೆ ಯಾವ ಹೆಸರಾದರೂ ಇಟ್ಟುಕೊಳ್ಳಲಿ ಎಂದು ಹೇಳಿದರು.
ಅಭಿವೃದ್ಧಿ ಬಗ್ಗೆ ಸರ್ಟಿಫಿಕೇಟ್ ಬೇಕಿಲ್ಲ: ರಾಮನಗರ (ಜ.04): ಇಷ್ಟು ವರ್ಷ ಪತ್ತೆಯೇ ಇಲ್ಲದ ಸಚಿವ ಅಶ್ವಥ್ ನಾರಾಯಣ್ ಇದೀಗ ರಾಮನಗರಕ್ಕೆ ಬಂದಿದ್ದಾರೆ. ಈಗ ಅವರಿಗೆ ನಮ್ಮೂರು ಎಂದು ನೆನಪಿಗೆ ಬಂದಿದೆ ಎನಿಸುತ್ತದೆ. ಇಷ್ಟು ದಿವಸ ಅವರಿಗೆ ಇದು ನಮ್ಮೂರೆಂದು ಮರೆತುಹೋಗಿತ್ತಾ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಹೇಳಿಕೆ ನೀಡಿದ್ದಾರೆ. ರಾಮನಗರ ವಿಧಾನಸಭಾ ಕ್ಷೇತ್ರದ ಮರಳವಾಡಿಯಲ್ಲಿ ಸಮುದಾಯ ಭವನಗಳ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅನಿತಾ ಕುಮಾರಸ್ವಾಮಿ, ಸಚಿವ ಅಶ್ವಥ್ ನಾರಾಯಣ್ ಅವರಿಂದ ನಾವು ಪಾಠ ಕಲಿಯಬೇಕಿಲ್ಲ. ಅಭಿವೃದ್ಧಿ ವಿಚಾರವಾಗಿ ಅವರಿಂದ ಸರ್ಟಿಫಿಕೇಟ್ ಪಡೆಯಬೇಕಿಲ್ಲ. ಕಳೆದ ಮೂವತ್ತು ವರ್ಷಗಳ ಹಿಂದೆ ರಾಮನಗರ ಹೇಗಿತ್ತು ಈಗ ಹೇಗಿದೆ ಎಂಬುದನ್ನು ತಿಳಿದುಕೊಳ್ಳಲಿ ಎಂದರು.
ಕುಮಾರಸ್ವಾಮಿ ಅವರ ಕೊಡುಗೆ ಕಾಣುತ್ತಿಲ್ಲವೇ?: ರಾಮನಗರ ಜಿಲ್ಲೆಗೆ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂ ಕುಮಾರಸ್ವಾಮಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇದೀಗ ಅವರ ಕೆಲಸವನ್ನು ನಾನು ಮುಂದುವರಿಸಿದ್ದೇನೆ. ಮುಖ್ಯವಾಗಿ ರಾಮನಗರವನ್ನು ಜಿಲ್ಲೆಯನ್ನಾಗಿ ಮಾಡಿದ್ದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು. ದೇವೇಗೌಡರು ಇಲ್ಲಿಂದ ಆಯ್ಕೆಯಾಗಿ ನಂತರ ಮುಖ್ಯಮಂತ್ರಿ ಆಗಿದ್ದರು. ಆವಾಗ ರಾಮನಗರ ಹೇಗಿತ್ತು ಈಗ ಹೇಗಿದೆ ಎಂದು ನೋಡಲಿ. ಅಭಿವೃದ್ಧಿ ಕೆಲಸಗಳು ಅವರ ಕಣ್ಣಿಗೆ ಕಾಣುತ್ತಿಲ್ಲವೇ? ಎಂದು ಸಚಿವ ಅಶ್ವಥ್ ನಾರಾಯಣ್ ಹೇಳಿಕೆಗೆ ತಿರುಗೇಟು ನೀಡಿದರು.