ರಾಜ್ಯ ಬಿಜೆಪಿ ಸರಕಾರ 3 ವರ್ಷ ಹಾಗೂ ಸಿಎಂ ಬೊಮ್ಮಾಯಿ 1 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜುಲೈ 28ರಂದು (ಗುರುವಾರ) ಆಯೋಜಿಸಿದ್ದ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರು (ಜು.28): ರಾಜ್ಯ ಬಿಜೆಪಿ ಸರಕಾರ 3 ವರ್ಷ ಹಾಗೂ ಸಿಎಂ ಬೊಮ್ಮಾಯಿ 1 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜುಲೈ 28ರಂದು (ಗುರುವಾರ) ಆಯೋಜಿಸಿದ್ದ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಆರ್.ಟಿ ನಗರದ ಖಾಸಗಿ ನಿವಾಸದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದ್ದಾರೆ. ಜೊತೆಗೆ ವಿಧಾನಸೌಧ ಬ್ಯಾಂಕ್ವೇಟ್ ಹಾಲ್ ಕಾರ್ಯಕ್ರಮವನ್ನೂ ರದ್ದು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ತಡ ರಾತ್ರಿ ತುರ್ತು ಸುದ್ದಿಗೋಷ್ಠಿ ಕರೆಯಬೇಕಾಗಿದೆ. ನನಗೆ ನಿನ್ನೆ (ಬುಧವಾರ) ರಾತ್ರಿಯಿಂದ ಪ್ರವೀಣನ ಹತ್ಯೆ ಸುದ್ದಿಯಿಂದ ತುಂಬಾ ನೋವಾಗಿದೆ. ಯೋಜನಾ ಬದ್ದವಾಗಿ ಕೊಲೆ ಮಾಡಿರೋದು ಅತ್ಯಂತ ಅಮಾನವೀಯ. ಆಕ್ರೋಶ ನಮ್ಮೆಲ್ಲರ ಮನದಾಳದಲ್ಲಿದೆ. ಹರ್ಷನ ಕೊಲೆ ಕೆಲವೇ ತಿಂಗಳಲ್ಲಿ ನಡೆದಿರೋದು ನಮಗೆ ನೋವಿದೆ. ನಮ್ಮ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಕುಟುಂಬದವರಿಗೆ ಸಮಾಧಾನ ಮಾಡಿದ್ದಾರೆ. ನಾನು ಈ ಜಿಗ್ನಾಸೆಯಲ್ಲಿದ್ದೇನೆ ಎಂದು ಬೊಮ್ಮಾಯಿ ತಿಳಿಸಿದರು.
ಬಿಜೆಪಿ ಮುಖಂಡನ ಬರ್ಬರ ಹತ್ಯೆ: ದುಷ್ಕರ್ಮಿಗಳನ್ನು ಶೀಘ್ರ ಬಂಧಿಸಿ ಶಿಕ್ಷೆ, ಸಿಎಂ ಬೊಮ್ಮಾಯಿ
ಒಬ್ಬ ಕಾರ್ಯಕರ್ತನ ಕೊಲೆಯಾಗಿದೆ. ನಾಳೆ ನನ್ನ ಸರ್ಕಾರಕ್ಕೆ ಒಂದು ವರ್ಷ ತುಂಬುತ್ತೆ, ಯಡಿಯೂರಪ್ಪರ ಸರ್ಕಾರಕ್ಕೆ ಮೂರು ವರ್ಷ ತುಂಬುತ್ತದೆ. ನನಗೆ ಮುಂದಿನ ದಿನಗಳಲ್ಲಿ ಭರವಸೆಯ ಭೂಮಿಕೆಯ ವೇದಿಯಾಗಬೇಕು ಅಂತ ಅಂದುಕೊಂಡಿದ್ವಿ. ಆದ್ರೆ ಮನಸ್ಸಿಗೆ ಶಾಂತಿಯಾಗುತ್ತಿಲ್ಲ. ಅವರ ಮನೆಯವರ ಆಕ್ರಂದನ ನೋಡಿ ಹಾಗೂ ಹರ್ಷನ ತಾಯಿಯ ಆಕ್ರಂದನ ನೋಡಿ, ನಾಳೆ ನಡೆಯೋ ಜನೋತ್ಸವ ಕಾರ್ಯಕ್ರಮವನ್ನು ರದ್ದು ಮಾಡಿದ್ದೇವೆ. ಬದಲಾಗಿ ಕೇವಲ ಪತ್ರಿಕಾಗೋಷ್ಠಿ ಮಾತ್ರ ಇರುತ್ತದೆ ಎಂದರು. ಮನಸಾಕ್ಷಿ ಒಪ್ಪದೇ ಇರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಎಂ ತಿಳಿಸಿದರು.
ಸಿಎಂ ಬೊಮ್ಮಾಯಿ ವರ್ಷಾಚರಣೆ ಬಳಿಕ ಸಚಿವ ಸಂಪುಟ ವಿಸ್ತರಣೆ?
ಉಗ್ರ ನಿಗ್ರಹಕ್ಕಾಗಿ ವಿಶೇಷ ಸ್ಕ್ವಾಡ್ ರಚಿಸಲಾಗುತ್ತದೆ. ಅದರ ಸ್ವರೂಪವನ್ನು ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ತೆಗೆದುಕೊಳ್ಳಲಾಗುತ್ತದೆ ಎಂದರು. ಹಿಂಸೆಯ ಮೂಲಕ ದ್ವೇಷ ಬಿತ್ತುವ ಹುನ್ನಾರ ಹಿನ್ನೆಲೆಯಲ್ಲಿ ಈ ಕೃತ್ಯವಾಗಿದೆ. ಇದು ಕೇವಲ ಕರ್ನಾಟಕದಲ್ಲಿ ಮಾತ್ರ ಅಲ್ಲ, ಕೇರಳ, ರಾಜಸ್ಥಾನ, ಉತ್ತರ ಪ್ರದೇಶದಲ್ಲಿ ನಡೆದಿದೆ. ಇಂತಹ ಕೃತ್ಯಗಳನ್ನು ತಡೆಯಲು ಕ್ರಮ ಕೈಗೊಳ್ಳಲಾಗುವುದು. ಜಾರಿಯಲ್ಲಿರುವ ಕಾನೂನಿನ ಮೂಲಕ ಕಠಿಣ ಕ್ರಮ ಕೈಗೊಳ್ಳಲಾಗುವುದು. ವಿಶೇಷವಾಗಿ ಕಾನೂನು ಕ್ರಮ ಜರಗಿಸಲು ಚಿಂತನೆ ಇದೆ ಎಂದರು. ಅಲ್ಲದೇ ಬಡ ಜನರಿಗೆ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಸಲ್ಲಬೇಕಾದ ಯೋಜನೆಗಳ ಬಗ್ಗೆ ನಾಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸುತ್ತೇನೆ ಎಂದರು.