ಬಿಜೆಪಿ ಮುಖಂಡ ಪ್ರವೀಣ ಹತ್ಯೆಯ ವಿಚಾರದಲ್ಲಿ ಬಿಜೆಪಿ ಯಾಕೋ ಇನ್ನು ಗಲಭೆ ಎಬ್ಬಿಸಿಲ್ಲ ಇದು ನಮ್ಮ ಪುಣ್ಯ ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ
ಹುಬ್ಬಳ್ಳಿ(ಜು.27): ಬಿಜೆಪಿ ಮುಖಂಡ ಪ್ರವೀಣ್ ಹತ್ಯೆ ಪ್ರಕರಣ ಇದೀಗ ಬಿಜೆಪಿ ತೀವ್ರ ತಲೆನೋವಾಗಿ ಪರಿಣಮಿಸಿದೆ. ಹಿಂದೂ ಸಂಘಟನೆಗಳ ಕಾರ್ಯಕರ್ತರು ಇದೀಗ ಬಿಜೆಪಿ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ. ಪ್ರವೀಣ್ ಹತ್ಯೆ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ಇನ್ನೂ ಯಾಕೋ ಗಲಭೆ ಎಬ್ಬಿಸಿಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಮುಖಂಡ ಪ್ರವೀಣ ಹತ್ಯೆಯ ವಿಚಾರದಲ್ಲಿ ಬಿಜೆಪಿ ಯಾಕೋ ಇನ್ನು ಗಲಭೆ ಎಬ್ಬಿಸಿಲ್ಲ ಇದು ನಮ್ಮ ಪುಣ್ಯ ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಪ್ರವೀಣ್ ಹತ್ಯೆ ವಿಚಾರವನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳೋ ಯತ್ನ ಮಾಡುತ್ತದೆ. ಬಿಜೆಪಿಯವರು ಯಾವಾಗ ಬೇಕೊ ಆವಾಗ ಪ್ಲೇಟ್ ಚೇಂಜ್ ಮಾಡುತ್ತಾರೆ. ಆದರೆ ಇನ್ನು ಯಾಕೋ ಹಿಂದೂ ಕಾರ್ಯಕರ್ತ ಕೊಲೆ ಹಳ್ಳಿ ಹಳ್ಳಿಗೂ ಹಬ್ಬಿಸಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಅವರ ಸರ್ಕಾರದಲ್ಲಿ ಅವರ ಕಾರ್ಯಕರ್ತರಿಗೇ ರಕ್ಷಣೆ ಇಲ್ಲ ಇನ್ನು ಜನಸಮಾನ್ಯರ ಗತಿಯೇನು....? ಹಿಜಾಬ್, ಮುಸ್ಲಿಂ ಅಂತ ಬೇರೆಯವರ ಮೇಲೆ ಹೊರಿಸೋ ಕೆಲಸ ಮಾಡ್ತಾರೆ. ಬಿಜೆಪಿಯವರಿಗೆ ಬೇರೆ ಏನ್ ಕೆಲಸ ಇದೆ? ರಾಜ್ಯದಲ್ಲಿ ಅವರೇನು ಕೆಲಸ ಮಾಡಿದ್ದಾರೆ? ಇದೇ ಕೆಲಸ ಅವರು ಮಾಡೋದು ಅಂತ ಸತೀಶ್ ಜಾರಕಿಹೊಳಿ ಬಿಜೆಪಿ ನಾಯಕರ ವಿರುದ್ದ ಕಿಡಿಕಾರಿದ್ದಾರೆ.
ಪ್ರವೀಣ್ ಹ್ಯತ್ಯೆ ಬಿಜೆಪಿಗೆ ತೀವ್ರ ಹಿನ್ನಡೆ ತಂದಿದೆ. ರಾಜ್ಯದಲ್ಲಿ ಮೇಲಿಂದ ಮೇಲೆ ಹಿಂದೂ ಕಾರ್ಯಕರ್ತರ ಹತ್ಯೆ ನಡೆಯುತ್ತಿದೆ. ರಾಜ್ಯ ಸರ್ಕಾರ ಕಠಿಣ ಕ್ರಮದ ಹೇಳಿಕೆ ನೀಡುತ್ತಿದೆ ಹೊರತು ಯಾವುದೇ ಕ್ರಮ ಕೈಗೊಂಡಿಲ್ಲ. ಹಿಂದೂಗಳು ಕಾನೂನು, ಸರ್ಕಾರ, ಈ ದೇಶದ ವಿಧಾನಗಳ ಬಗ್ಗೆ ಗೌರವ ಕೂಟ್ಟು ಇಷ್ಟು ದಿನ ಕಾದಿದ್ದೇವೆ. ಆದರೆ ಇದರಿಂದ ಯಾವುದೇ ಪ್ರಯೋಜನ ಆಗಿಲ್ಲ. ಪ್ರತಿ ಹಿಂದೂ ಕಾರ್ಯಕರ್ತ ಜೀವಭಯದಿಂದ ಬದುಕುವಂತಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಪ್ರವೀಣ್ ಹಂತಕರನ್ನು ಗುಂಡಿಟ್ಟು ಕೊಲ್ಲಿ, ಆಂದೋಲ ಸ್ವಾಮೀಜಿ ಅಗ್ರಹ!
ಪ್ರವೀಣ್ ಕುಟುಂಬಕ್ಕೆ 50 ಲಕ್ಷ ರೂಪಾಯಿ ಭರವಸೆ
ಬೆಳ್ಳಾರೆಯ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಸಂಘ ಪರಿವಾರ ಸಂಘಟನೆಗಳು ಪ್ರವೀಣ್ ಕುಟುಂಬಕ್ಕೆ ನೆರವಿನ ಭರವಸೆ ನೀಡಿದೆ. ಪ್ರವೀಣ್ ಕುಟಂಬಕ್ಕೆ 50 ಲಕ್ಷ ರೂಪಾಯಿ ನೆರವು ನೀಡುವುದಾಗಿ ಭರವಸೆ ನೀಡಿದೆ. ಅರ್ ಎಸ್ ಎಸ್ ಪ್ರಾಂತ ಉಸ್ತುವಾರಿ ನಾ.ಸೀತಾರಾಂ ಘೋಷಣೆ ಮಾಡಿದ್ದಾರೆ.