29 ಸಚಿವರಿಂದ ಪ್ರಮಾಣವಚನ
ಬೊಮ್ಮಾಯಿ ಸಂಪುಟದ ಹೊಸಬರು- ಹಳಬರ ಮಿಶ್ರಣ
ಇದೇ ಮೊದಲ ಬಾರಿಗೆ ಸಚಿವರಾದ್ದವರು ಒಟ್ಟು 6 ಜನರು
ಬೆಂಗಳೂರು, (ಆ.04): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟಕ್ಕೆ 29 ಶಾಸಕರು ಸೇರ್ಪಡೆಗೊಂಡಿದ್ದು, ಇಂದು (ಬುಧವಾರ) ರಾಜಭವನದ ಗಾಜಿನ ಮನೆಯಲ್ಲಿ ಪದಗ್ರಹಣ ಮಾಡಿದರು.
ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಪ್ರಮಾಣವಚನ ಬೋಧಿಸಿದರು. ಇನ್ನು ಬೊಮ್ಮಾಯಿ ಸಂಪುಟದ ಹೊಸಬರು- ಹಳಬರ ಮಿಶ್ರಣವಾಗಿದ್ದು, ಬೊಮ್ಮಾಯಿ ಯಾವು ರೀತಿ ನಡೆಸುಕೊಂಡ ಹೋಗುತ್ತಾರೆ ಎನ್ನುವುದು ಮುಂದಿರುವ ಪ್ರಶ್ನೆ
undefined
ಪಕ್ಷ ಮಾಡುತ್ತಿರುವ ದೊಡ್ಡ ಅವಮಾನ: ಸ್ವಪಕ್ಷದ ವಿರುದ್ಧ ಬಿಜೆಪಿ ಶಾಸಕಿ ಅಸಮಾಧಾನ
ಜಾತಿವಾರು, ಪಕ್ಷ ಸಂಘಟನೆ, ವ್ಯಕ್ತಿತ್ವ ಸೇರಿದಂತೆ ಇತರೆ ಮಾನದಂಡಗಳ ಆಧಾರದ ಮೇಲೆ ಹೈಕಮಾಂಡ್ ಮಂತ್ರಿ ಸ್ಥಾನಬಾಗ್ಯ ನೀಡಿದೆ. ಇನ್ನು ಮುಖ್ಯವಾಗಿ ಆರು ಹೊಸ ಮುಖಗಳಿಗೆ ಹೈಕಮಾಂಡ್ ಮಣೆಹಾಕಿರುವುದು ವಿಶೇಷ. ಅಂದ್ರೆ ಆ ಆರು ಜನರು ಇದೇ ಮೊದಲ ಬಾರಿಗೆ ಸಚಿವರಾಗಿದ್ದಾರೆ.
ಹೌದು... ತಮ್ಮ ರಾಜಕೀಯ ಜೀವನದಲ್ಲಿ ಇದೇ ಮೊದಲ ಬಾರಿಗೆ ಸಚಿವರಾದ್ದವರು ಒಟ್ಟು 6 ಜನರು. ಇನ್ನುಳಿದವರು ಈಗಾಗಲೇ ಸಚಿವರಾಗಿ ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಎರಡನೇ ಬಾರಿಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಯಾರು ಆ ಆರು ಜನ ಹೊಸಬರು?
1. ಅರಗ ಜ್ಞಾನೇಂದ್ರ (ತೀರ್ಥಹಳ್ಳಿ )
2. ಸುನಿಲ್ ಕುಮಾರ್ ( ಕಾರ್ಕಳ )
3. B C ನಾಗೇಶ್ (ತಿಪಟೂರು )
4.ಹಾಲಪ್ಪ ಆಚಾರ್(ಯಲಬುರ್ಗಾ)
5. ಮುನಿರತ್ನ ( R R ನಗರ )
6. ಶಂಕರ್ ಪಾಟೀಲ್ ಮುನೇನಕೊಪ್ಪ (ನವಲಗುಂದ ).
ಈಗಾಗಲೇ ಮಂತ್ರಿಯಾಗಿದ್ದವರು
ಗೋವಿಂದ ಕಾರಜೋಳ
ಕೆ.ಎಸ್.ಈಶ್ವರಪ್ಪ,
ಆರ್.ಅಶೋಕ್,
ಬಿ.ಶ್ರೀರಾಮುಲು
ವಿ.ಸೋಮಣ್ಣ
ಉಮೇಶ್ ಕತ್ತಿ
ಎಸ್. ಅಂಗಾರ
ಜೆ.ಸಿ.ಮಾಧುಸ್ವಾಮಿ
ಡಾ. ಅಶ್ವಥ ನಾರಾಯಣ
ಸಿ.ಸಿ.ಪಾಟೀಲ್
ಆನಂದ್ ಸಿಂಗ್
ಕೋಟಾ ಶ್ರೀನಿವಾಸ ಪೂಜಾರ
ಪ್ರಭು ಚೌಹ್ವಾಣ್
ಮುರುಗೇಶ್ ನಿರಾಣಿ
ಶಿವರಾಮ್ ಹೆಬ್ಬಾರ್
ಎಸ್.ಟಿ. ಸೋಮಶೇಖರ್
ಬಿ.ಸಿ.ಪಾಟೀಲ್
ಬಸವರಾಜ ಬೈರತಿ
, ಡಾ.ಕೆ.ಸುಧಾಕರ್
ಗೋಪಾಲಯ್ಯ,
ಶಶಿಕಲಾ ಜೊಲ್ಲೆ
ಎಂಟಿಬಿ ನಾಗರಾಜ್