
ಬೆಂಗಳೂರು, [ಮಾ.02]: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದು [ಸೋಮವಾರ] ಸದನದಲ್ಲಿ ಸದ್ದು ಮಾಡಿದ್ರು... ದೊರೆಸ್ವಾಮಿಯವ್ರನ್ನ ಅವಮಾನಿಸೋ ಭರದಲ್ಲಿ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರನ್ನು ಯತ್ನಾಳ್ ಅವಮಾನಿಸಿದ್ದಾರೆ ಎಂದು ಸಿದ್ದರಾಮಯ್ಯ ಗುಡುಗಿದ್ರು.
ಸಿದ್ದರಾಮಯ್ಯ ಅಬ್ಬರ ಹೆಚ್ಚಾಗ್ತಿದ್ದಂತೆ ಆಡಳಿತ ಪಕ್ಷದ ಸದಸ್ಯರು ಸಹ ಎದ್ದುನಿಂತರು. ಇದರಿಂದ ಸೋಮವಾರದ ಸದನ ಪ್ರತಿಪಕ್ಷ ಮತ್ತು ಆಡಳಿತ ಪಕ್ಷದ ಗದ್ದಲಕ್ಕೆ ಸೀಮಿತವಾಯ್ತು.
ಕಲಾಪದಲ್ಲಿ ಯತ್ನಾಳ್-ದೊರೆಸ್ವಾಮಿ ಗದ್ದಲ: ಇದು ಕರ್ನಾಟಕದ ಜನತೆಗೆ ಬೇಕಿಲ್ಲ
ಇನ್ನು ಕಾಂಗ್ರೆಸ್, ಎರಡನೇ ದಿನದ [ಮಂಗಳವಾರ] ಕಲಾಪಕ್ಕೂ ಮುನ್ನ ತನ್ನ ಸದಸ್ಯರಿಗೆ ವಿಪ್ ಜಾರಿಗೊಳಿಸಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ಪಕ್ಷದ ಶಾಸಕರಿಗೆ ವಿಪ್ ಜಾರಿಗೊಳಿಸಿದ್ದಾರೆ.
ಸದನದಲ್ಲಿ ಆಡಳಿತ ಪಕ್ಷ ಬಿಜೆಪಿಯನ್ನು ಎದುರಿಸಲು ಅಗತ್ಯ ಸಂಖ್ಯಾಬಲ ಅಗತ್ಯ. ಇದರಿಂದ ಸದಸ್ಯರಿಗೆ ಕಡ್ಡಾಯವಾಗಿ ಸದನದಲ್ಲಿ ಹಾಜರಿರುವಂತೆ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಮೊದಲ ದಿನದ ಕಲಾಪದ ವೇಳೆ ಹೆಚ್ಚಿನ ಕಾಂಗ್ರೆಸ್ ಸದಸ್ಯರು ಗೈರು ಹಾಜರಾಗಿದ್ದರು. ಈ ಹಿನ್ನೆಲೆಯಲ್ಲಿ ವಿಪ್ ಜಾರಿಗೊಳಿಸಲಾಗಿದೆ ಎನ್ನಲಾಗುತ್ತಿದೆ.
ವಿಶ್ವಾಸ ಕಳೆದುಕೊಂಡಿತಾ ಜೆಡಿಎಸ್, ಸದ್ದು ಮಾಡುತ್ತಿದೆ ದೀಪಿಕಾ ಡ್ರೆಸ್; ಮಾ.2ರ ಟಾಪ್ 10 ಸುದ್ದಿ!
ಮುಖ್ಯವಾಗಿ ಸ್ವಾತಂತ್ರ್ಯ ಹೋರಾಟಗಾರ ಎಚ್‌ಎಸ್ ದೊರೆಸ್ವಾಮಿ ವಿರುದ್ಧ ನೀಡಿರುವ ಹೇಳಿಕೆ ಸಂಬಂಧ ಕ್ಷಮೆ ಕೇಳುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಹೋರಾಟ ತೀವ್ರಗೊಳಿಸಲು ಕಾಂಗ್ರೆಸ್ ನಿರ್ಧರಿಸಿದೆ. ಈ ಕಾರಣಕ್ಕೆ ವಿಪ್ ಜಾರಿಗೊಳಿಸಿರುವ ಸಾಧ್ಯತೆಗಳಿವೆ.
ಯಾವುದೇ ಕಾರಣಗಳಿದ್ದರೂ ದಿನಾಂಕ 03-03-2019 ರಂದು ಸದನದ ಕಲಾಪಗಳಲ್ಲಿ ತಾವು ಭಾಗವಹಿಸುವುದು ಕಡ್ಡಾಯವಾಗಿರುತ್ತದೆ ಎಂದು ವಿಪ್‌ನಲ್ಲಿ ಉಲ್ಲೇಖಿಸಲಾಗಿದೆ.
ಒಟ್ಟಿನಲ್ಲಿ ದೊರೆಸ್ವಾಮಿಯವರ ಬೆನ್ನಿಗೆ ಟೊಂಕ ಕಟ್ಟಿ ನಿಂತಿರುವ ಕಾಂಗ್ರೆಸ್ ಯತ್ನಾಳ್ ಕ್ಷಮೆ ಕೇಳುವವರೆಗೂ ಸದನದಲ್ಲಿ ಪ್ರತಿಭಟಿಸುವ ನಿರ್ಧಾರಕ್ಕೆ ಬಂದಂತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.