ಶಾಸಕ ಯತ್ನಾಳ್ ಹೇಳಿಕೆ ವಿಚಾರದಲ್ಲಿ ವಿಧಾನ ಮಂಡಲದಲ್ಲಿ ಗದ್ದಲವಾಗಿದೆ. ಆಡಳಿತ ಮತ್ತು ವಿಪಕ್ಷ ನಡುವಿನ ಆರೋಪ-ಪ್ರತ್ಯಾರೋಪಕ್ಕೆ ಸೋಮವಾರದ ಸದನ ಬಲಿಯಾಗಿದೆ. ಇವರಿಬ್ಬರ ಜಗಳಕ್ಕೆ ಸದನವನ್ನ ಬಲಿ ಕೊಡುವುದ್ಯಾಕೆ?
ಬೆಂಗಳೂರು, (ಮಾ.02): ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಹಿರಿಯ ಸಾಮಾಜಿಕ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ ನಡುವಿನ ಆರೋಪ-ಪ್ರತ್ಯಾರೋಪಗಳ ಪರ ವಿರೋಧಗಳು ಜೋರಾಗಿ ನಡೆಯುತ್ತಿವೆ.
undefined
ಅಲ್ಲದೇ ಸೋಮವಾರ ಶುರುವಾದ ವಿಧಾನ ಮಂಡಲ ಅಧಿವೇಶನದಲ್ಲೂ ಸಹ ಇದು ಆಡಳಿತ ಮತ್ತು ವಿಪಕ್ಷ ನಡುವಿನ ಗದ್ದಲಕ್ಕೆ ಕಾರಣವಾಗಿದೆ. ಪ್ರತಿಪಕ್ಷ ನಾಯಕರು ಹಿರಿಯ ಸಾಮಾಜಿಕ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರ ವಿಷಯ ಪ್ರಸ್ತಾಪಿಸಿ ಮಾತಿಗೆ ಅವಕಾಶ ಕೋರಿದರು.
ಸಾವರ್ಕರ್ ಧೂಳಿಗೂ ದೊರೆಸ್ವಾಮಿ ಸಮವಲ್ಲ; ನಾಲಿಗೆ ಹರಿಬಿಟ್ಟ ಯತ್ನಾಳ್
ಇದೇ ವೇಳೆ, ಯಾವ ನಿಯಮದ ಅಡಿ ಎಂಬುದನ್ನು ಉಲ್ಲೇಖಿಸಿ ಚರ್ಚೆಗೆ ಅವಕಾಶ ಕೋರುವಂತೆ ಆಡಳಿತ ಪಕ್ಷದ ಸದಸ್ಯರು ವಿಪಕ್ಷ ಸದಸ್ಯರನ್ನು ಆಗ್ರಹಿಸಿದರು. ಇದು ಗದ್ದಲಕ್ಕೆ ಕಾರಣವಾಯ್ತು.
ಪಾಕ್ ಏಜೆಂಟ್ ಮಾತು ಸಮರ್ಥಿಸಿಕೊಂಡು ಮತ್ತೆ ದೊರೆಸ್ವಾಮಿ ವಿರುದ್ಧ ಯತ್ನಾಳ್ ಕಿಡಿ
ರಾಜ್ಯದ ಅಭಿವೃದ್ಧಿ, ಜನರ ಕಷ್ಟ-ದುಃಖಗಳ ಬಗ್ಗೆ ಸದನದಲ್ಲಿ ಚರ್ಚೆ ಮಾಡೋ ಬದಲು ದೊರೆಸ್ವಾಮಿ ಹಾಗೂ ಯತ್ನಾಳ್ ವಿಷಯ ಜನರಿಗೆ ಬೇಕಿಲ್ಲ.ವಹಾಗಾದ್ರೆ ಸದನದಲ್ಲಿ ಏನೆಲ್ಲಾ ಆಯ್ತು ಎನ್ನುವುದನ್ನ ವಿಡಿಯೋಗಳಲ್ಲಿ ನೋಡಿ.